More

    ಕರೊನಾ ಗೆದ್ದ 455 ಜನರ ಬಿಡುಗಡೆ

    ಬೆಳಗಾವಿ: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕರೊನಾ ಪಾಸಿಟಿವ್ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಿರುವುದು ಜನರಲ್ಲಿ ತುಸು ನೆಮ್ಮದಿ ತಂದಿದೆ.

    ಭಾನುವಾರ 235 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,409ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ನಿರ್ದಿಷ್ಟ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು 455 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಶನಿವಾರದಂದು 312 ಜನರಿಗೆ ಸೋಂಕು ದೃಢವಾಗಿದ್ದರೆ, 378 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರು. ಈವರೆಗೆ 2,104 ಜನರು ಗುಣಮುಖರಾಗಿದ್ದು, 3,211 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಳಗಾವಿ ತಾಲೂಕಿನಲ್ಲೇ ಅಧಿಕ: ಬೆಳಗಾವಿ ತಾಲೂಕಿನಲ್ಲಿ 134, ಗೋಕಾಕದಲ್ಲಿ 25, ಹುಕ್ಕೇರಿಯಲ್ಲಿ 12, ಬೈಲಹೊಂಗಲದಲ್ಲಿ 15, ಅಥಣಿಯಲ್ಲಿ 13, ಸವದತ್ತಿಯಲ್ಲಿ 12, ರಾಯಬಾಗದಲ್ಲಿ 8, ರಾಮದುರ್ಗದಲ್ಲಿ 6, ಚಿಕ್ಕೋಡಿ, ಖಾನಾಪುರದಲ್ಲಿ ತಲಾ 5 ಜನರಿಗೆ ಸೋಂಕು ತಗುಲಿದೆ.

    ಸೋಂಕಿತರ ಕರೆತರುತ್ತಿದ್ದ ಆಂಬುಲೆನ್ಸ್ ಪಲ್ಟಿ

    ಬೆಳಗಾವಿ: ತಾಲೂಕಿನ ಹೊನಗಾ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕರೊನಾ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದ ಆಂಬುಲೆನ್ಸ್ ಭಾನುವಾರ ಪಲ್ಟಿಯಾಗಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಬರುತ್ತಿತ್ತು. ಅಂಕಲಿ ಗ್ರಾಮದ ಇಬ್ಬರು ಕರೊನಾ ಸೋಂಕಿತರು ಆಂಬುಲೆನ್ಸ್‌ನಲ್ಲಿದ್ದರು. ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿ ಆಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ತಕ್ಷಣ ಮತ್ತೊಂದು ಆಂಬುಲೆನ್ಸ್‌ನಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts