More

    ಸಮರ್ಪಕ ಚಿಕಿತ್ಸೆ ಸಿಗದೆ ಕರೊನಾ ಸೋಂಕಿಗೆ ಬಲಿಯಾದ ಸ್ಟಾಫ್​ನರ್ಸ್; ರಾತ್ರಿ ಪಾಳಿಗೆ ಹಾಜರಾಗದ ವೈದ್ಯರು

    ವಿಜಯಪುರ: ಕರೊನಾ ಪೀಡಿತರ ಸೇವೆ ಸಲ್ಲಿಸುತ್ತಿದ್ದ ಸ್ಟಾಫ್ನರ್ಸ್ ಅದೇ ಕರೊನಾ ಸೋಂಕಿಗೆ ತುತ್ತಾಗಿದ್ದು, ಸರಿಯಾದ ಸಮಯಕ್ಕೆ  ಸಮರ್ಪಕವಾಗಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಇಂಥದ್ದೊಂದು ಘಟನೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 38 ವರ್ಷದ ಸ್ಟಾಫ್ನರ್ಸ್ ಸೋಮವಾರ ರಾತ್ರಿಯೇ ಕರೊನಾಗೆ ಬಲಿಯಾಗಿದ್ದು, ತೀವ್ರ ನರಕಯಾತನೆ ಅನುಭವಿಸಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈ ಕರೊನಾ ವಾರಿಯರ್ ಮಧ್ಯಾಹ್ನ ಆರೋಗ್ಯ ಸರಿ ಇಲ್ಲವೆಂದು ಮನೆಗೆ ತೆರಳಿದ್ದಾರೆ. ರಾತ್ರಿ ಏಕಾಏಕಿ ಅನಾರೋಗ್ಯದ ಲಕ್ಷಣಗಳು ಹೆಚ್ಚಾದ್ದರಿಂದ ಪಾಲಕರು ಅವರನ್ನು ಕೂಡಲೇ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ರಾತ್ರಿ ತೀವ್ರ ಅನಾರೋಗ್ಯ ಕಾಣಿಸಿಕೊಂಡರೂ ಪಾಳಿಯಲ್ಲಿದ್ದ ವೈದ್ಯರು ಬಂದಿರಲಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಸುನೀಗಿದ್ದಾಗಿ ತಿಳಿದು ಬಂದಿದೆ. ರಾತ್ರಿ 2 ಗಂಟೆ ಸುಮಾರಿಗೆ ಕರೊನಾ ವಾರಿಯರ್ ಅಸುನೀಗಿದ್ದಾರೆ.

    ಇದನ್ನೂ ಓದಿ: ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​ 

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, ಮೃತಪಟ್ಟ ಯುವಕ ಮಹಾರಾಷ್ಟ್ರದ ಸಂಪರ್ಕ ಹೊಂದಿದ್ದಾನೆ. ಮಹಾರಾಷ್ಟ್ರದಿಂದ ಕುಟುಂಬಸ್ಥರನ್ನು ಕರೆತಂದಿದ್ದಾನೆ. ಮೃತಪಟ್ಟ ಬಳಿಕ ಅಂದರೆ ಮಂಗಳವಾರ ಸಂಜೆ ಯುವಕನ ಕರೊನಾ ವರದಿ ಬಂದಿದ್ದು ಪಾಸಿಟಿವ್ ಎಂದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

    ಬಸ್​ ಬರದಿದ್ರೂ ನೀವು ಪರೀಕ್ಷೆಗೆ ಬರಲೇಬೇಕು; ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ತಾಕೀತು

    ಕರೊನಾ ಸೋಂಕನ್ನು ಗರ್ಲ್‌ಫ್ರೆಂಡ್‌ಗೆ ಹೋಲಿಸಿದ ಪ್ರೊಫೆಸರ್!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts