More

  ಬಾಬಾ ಸಾಹೇಬರ ಆದರ್ಶ ಪಾಲಿಸಿ

  ಯಾದಗಿರಿ : ಕರೊನಾ ವೈರಸ್ ನಿಯಂತ್ರಣಕ್ಕಾಗಿ ಎಲ್ಲೆಡೆ ಲಾಕ್ಡೌನ್ ಇರುವುದರಿಂದ ಮಂಗಳವಾರ ಜಿಲ್ಲಾದ್ಯಂತ ಡಾ. ಅಂಬೇಡ್ಕರ್ ಜಯಂತಿಯ ಸರಳವಾಗಿ ಆಚರಿಸಲಾಯಿತು.

  ನಗರದ ಜಿಲ್ಲಾಡಳಿತ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್, ದೇಶಕ್ಕೆ ಸದೃಢ ಸಂವಿಧಾನ ನೀಡಿದ ಡಾ. ಅಂಬೇಡ್ಕರ್ ತತ್ವ ಮತ್ತು ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದರು.

  ಕರೊನಾ ವೈರಸ್ ತಡೆಗಟ್ಟಲು ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಪ್ರಯುಕ್ತ ಸಕರ್ಾರದ ಆದೇಶದಂತೆ ಜಿಲ್ಲೆಯಲ್ಲಿ ಬಾಬಾ ಸಾಹೇಬರ ಜನ್ಮ ದಿನ ಆಚರಣೆ ಜನಸಂದಣಿ ಇಲ್ಲದಂತೆ ಸರಳವಾಗಿ ಆಚರಿಸಲಾಗಿದೆ ಎಂದರು.

  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಚನ್ನಬಸವ, ಸಮಾಜದ ಮುಖಂಡರಾದ ಮಲ್ಲಿಕಾಜರ್ುನ ಈಟೆ, ನಿಂಗಣ್ಣ ವಡ್ನಳ್ಳಿ, ಮಹೇಶ್ ಕುರಕುಂದಿ, ಮರೆಪ್ಪ ಚಟ್ಟೆರಕರ್ ಇದ್ದರು.

  ಜಿಲ್ಲಾ ಬಿಜೆಪಿ ಕಚೇರಿ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು, ಪಕ್ಷದ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, ದೇಶದ ಪ್ರತಿಯೊಬ್ಬ ನಿವಾಸಿಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನ ಅವಕಾಶ ನೀಡಿದ್ದಾರೆ. ಇಂದು ಭಾರತದ ಸಂವಿಧಾನವನ್ನು ವಿಶ್ವದ ಅನೇಕ ರಾಷ್ಟ್ರಗಳು ಮಾದರಿಯನ್ನಾಗಿ ಇಟ್ಟುಕೊಂಡಿವೆ ಎಂದರು. ದೇಶ ಸಧ್ಯ ಸಂಕಷ್ಟದ ಸ್ಥಿತಿಯಲ್ಲಿದ್ದು ಪ್ರತಿಯೊಬ್ಬರೂ ಮನೆಯಲ್ಲಿರುವ ಮೂಲಕ ಕರೊನಾ ವೈರಸ್ನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಸಲಹೆ ನೀಡಿದರು. ಮುಖಂಡರಾದ ವೆಂಕಟರಡ್ಡಿ ಅಬ್ಬೆತುಮಕೂರ, ಎಸ್.ಪಿ.ನಾಡೇಕರ್, ಮಲ್ಲು ಚಾಪಲ್, ಕಚೇರಿ ಕಾರ್ಯದಶರ್ಿ ಚಂದ್ರಶೇಖರ ಕಡೆಚೂರ, ಸೂಗರೇಶ ಮಾಲಿ ಪಾಟೀಲ್ ಇದ್ದರು.

  ನವನಂದಿ ಟ್ರಸ್ಟ್: ಯಾದಗಿರಿಯ ನವನಂದಿ ಟ್ರಸ್ಟ್ನ ಶ್ರೀಗುರು ಶಾಲೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ಕರೊನಾ ವೈರಸ್ ಕಾರಣ ದೇಶಾದ್ಯಂತ ಬೀಗಮುದ್ರೆಯಿಂದಾಗಿ ತೊಂದರೆಗೊಳಗಾಗಿರುವ ಬಡ ಕೂಲಿಕಾರರಿಗೆ ಅಗತ್ಯ ಸೇವೆ ನೀಡುತ್ತಿರುವ ಕರೊನಾ ಸೈನಿಕರಿಗೆ ನವನಂದಿ ಟ್ರಸ್ಟ್ನಿಂದ ಸತತವಾಗಿ ಅನ್ನದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು. ಅನ್ನದಾನದ ಜತೆಗೆ ಜನರಿಗೆ ಕರೊನಾ ತಡೆ ಕುರಿತು ಜಾಗೃತಿ ಮೂಡಿಸಬೇಕು. ಮನೆಯಲ್ಲಿಯೇ ಇರಬೇಕು. ಗಂಟೆಗೊಮ್ಮೆ ಕೈತೊಳೆಯಬೇಕು ಸ್ವಚ್ಛತೆ ಕಾಪಾಡಬೇಕೆಂದು ತಿಳಿ ಹೇಳಿದರು.

  ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ರುದ್ರಗೌಡ ಪಾಟೀಲ್, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿವರಾಯ ಎಲ್ಹೇರಿ, ಶಿವು ಸಾಹುಕಾರ, ಚೆನ್ನಾರೆಡ್ಡಿ ಅಬ್ಬೆತುಮಕೂರು, ದೈಹಿಕ ಶಿಕ್ಷಕ ಮಲ್ಲೇಶ ನಾಯಕ, ನರಸಪ್ಪ ಬೆಟ್ಟದ, ಕೈಲಾಸ ಅನವಾರ, ಗಿರೀಶ ಖಾನಾಪೂರ, ನರಸಪ್ಪ ನಾಯಕ ಬುಡಯಿನೋರ್, ವಿಜಯ ಮೊರಡೆ, ನರೇಶ ಅನವಾರ, ಆನಂದ, ಸಿದ್ದುಗೌಡ ಇತರರಿದ್ದರು.

  ಕರವೇ ಕಾರ್ಯಾಲಯ: ಯಾದಗಿರಿ ಕರವೇ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜಯಂತಿಯನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆಚರಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯ ಮಾತನಾಡಿದರು. ಮಲ್ಲು ಮಾಳಿಕೇರಿ, ಅಂಬರೀಶ ಹತ್ತಿಮನಿ, ವಿಶ್ವಾರಾಧ್ಯ ದಿಮ್ಮೆ, ಕಾಶೀನಾಥ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts