More

    ಕೆಎಲ್‌ಎಸ್ 10 ಲಕ್ಷ ರೂ. ನೆರವು

    ಬೆಳಗಾವಿ: ಮಹಾಮಾರಿ ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಪ್ರಧಾನಮಂತ್ರಿ ನಾಗರಿಕರ ಸಹಾಯ ಮತ್ತು ಪರಿಹಾರ ತುರ್ತು ಸ್ಥಿತಿ (ಪಿಎಂ-ಕೇರ್ಸ್‌)ಗೆ ಶಿಕ್ಷಣ ಸಂಸ್ಥೆಗಳಿಂದ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಇದೀಗ ಕರ್ನಾಟಕ ಕಾನೂನು ಸಂಸ್ಥೆಯೂ (ಕೆಎಲ್‌ಎಸ್) 10 ಲಕ್ಷ ರೂ. ನೆರವು ನೀಡಿದೆ.

    ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ಕಾನೂನು ಸಂಸ್ಥೆಯ ಐಎಂಇಆರ್ ಚೇರ್ಮನ್ ಆರ್.ಎಸ್. ಮುತಾಲಿಕ, ಕಾರ್ಯದರ್ಶಿಗಳಾದ ವಿವೇಕ ಕುಲಕರ್ಣಿ, ವಿ.ಎಂ. ದೇಶಪಾಂಡೆ, ಜಿಐಟಿ ಚೇರ್ಮನ್ ಎಂ.ಆರ್. ಕುಲಕರ್ಣಿ ಅವರು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಮೂಲಕ ಪಿಎಂ ಕೇರ್ಸ್‌ಗೆ 10 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts