More

    ಅರ್ಧ ಕೋಟಿ ಭಾರತೀಯರಿಗೆ ತಲುಪಿದ ಕರೊನಾ ಲಸಿಕೆ ; ಉತ್ತರಪ್ರದೇಶದಲ್ಲಿ ಅತಿಹೆಚ್ಚು ಫಲಾನುಭವಿಗಳು

    ನವದೆಹಲಿ: ಭಾರತದಲ್ಲಿ ಈವರೆಗೂ ಸುಮಾರು 50 ಲಕ್ಷ ವೈದ್ಯರು, ಇತರ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಿಗೆ ಕರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲೇ 5,09,893 ಜನರಿಗೆ 11,184 ಲಸಿಕಾ ಕಾರ್ಯಕ್ರಮಗಳಲ್ಲಿ ಲಸಿಕೆ ನೀಡಲಾಗಿದ್ದು, ಈವರೆಗೆ ದೇಶಾದ್ಯಂತ 95,801 ಲಸಿಕಾ ಕಾರ್ಯಕ್ರಮಗಳು ನಡೆದಿವೆ. ಶುಕ್ರವಾರವೂ ದೇಶದಾದ್ಯಂತ ಮುಂದುವರೆದಿರುವ ಲಸಿಕಾ ಅಭಿಯಾನದ ಮೂಲಕ ಅರ್ಧಕೋಟಿ ಭಾರತೀಯರನ್ನು ಕರೊನಾ ಲಸಿಕೆ ತಲುಪಿದ ಹಾಗಾಗಿದೆ.

    ಈ ಕರೊನಾ ಲಸಿಕೆ ಫಲಾನುಭವಿಗಳಲ್ಲಿ ಶೇ.61 ರಷ್ಟು ಫಲಾನುಭವಿಗಳು ಎಂಟು ರಾಜ್ಯಗಳಿಗೆ ಸೇರಿದವರು ಎಂದು ತಿಳಿದು ಬಂದಿದ್ದು, ಅತಿ ಹೆಚ್ಚು ಸಂಖ್ಯೆಯಲ್ಲಿ ಲಸಿಕೆ ನೀಡಿರುವ ರಾಜ್ಯವೆಂದರೆ ಉತ್ತರಪ್ರದೇಶ. ಫೆಬ್ರವರಿ 4 ರ ಸಂಜೆಯವರೆಗೆ ಒಟ್ಟು ನೀಡಲಾಗಿರುವ 49,59,445 ಲಸಿಕೆಗಳಲ್ಲಿ ಉತ್ತರಪ್ರದೇಶದಲ್ಲಿ 5,89,101 ಜನರು (ಶೇ.11 ರಷ್ಟು) ಲಸಿಕೆ ಪಡೆದಿದ್ದಾರೆ. ತದನಂತರ ಅತಿಹೆಚ್ಚು ಲಸಿಕೆ ನೀಡಲಾಗಿರುವ ರಾಜ್ಯಗಳೆಂದರೆ ಮಹಾರಾಷ್ಟ್ರ(3,89,577 ಜನರು) ಮತ್ತು ರಾಜಸ್ತಾನ (3,84,810 ಜನರು).

    ಇದನ್ನೂ ಓದಿ: ಕರೊನಾದಿಂದ ಕಂಗೆಟ್ಟ ಶಾಸಕರಿಗೆ ಸಿಹಿಸುದ್ದಿ ಕೊಟ್ಟ ಸಿಎಂ ಯಡಿಯೂರಪ್ಪ!

    ಶುಕ್ರವಾರ ಬೆಳಿಗ್ಗೆ ಭಾರತದಲ್ಲಿ 12,408 ಕರೊನಾ ಪಾಸಿಟೀವ್ ಪ್ರಕರಣಗಳು ದಾಖಲಾಗಿದ್ದು, ಈವರೆಗಿನ ಕರೊನಾ ಸೋಂಕಿತರ ಸಂಖ್ಯೆ 1.08 ಕೋಟಿ ದಾಟಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಹಾಲಿ ಸೋಂಕಿತರ ಸಂಖ್ಯೆಯು ಇಳಿಮುಖವಾಗಿದ್ದು, ಈ ದಿನ ಒಟ್ಟು 1,51,460 ಆ್ಯಕ್ಟೀವ್ ಪ್ರಕರಣಗಳಿವೆ. ಭಾರತದಲ್ಲಿ ಒಂದು ಮಿಲಿಯನ್ ಜನರಲ್ಲಿ 7,828 ಜನರಿಗೆ ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಈ ದರ ಬಹಳ ಕಡಿಮೆ ಇದೆ ಎನ್ನಲಾಗಿದೆ.(ಏಜೆನ್ಸೀಸ್)

    ತಮಿಳುನಾಡಿನಲ್ಲಿ ಆನ್​ಲೈನ್ ರಮ್ಮಿ, ಪೋಕರ್ ಆಡಿದರೆ ಎರಡು ವರ್ಷ ಜೈಲು ಶಿಕ್ಷೆ

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts