More

    ರೋಟರಿಯಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ

    ದಾವಣಗೆರೆ: ಕರೊನಾ ಸೇನಾನಿಗಳಿಗೆ ಹಂಚಿಕೆ ಮಾಡಲು ನಗರದ ರೋಟರಿ ಸಂಸ್ಥೆಯಿಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗೆ ಶನಿವಾರ ಮಾಸ್ಕ್, ಸ್ಯಾನಿಟೈಸರ್ ಹಸ್ತಾಂತರಿಸಲಾಯಿತು.

    ರೋಟರಿ ಜಿಲ್ಲಾ ಗವರ್ನರ್ ನಯನ್ ಪಾಟೀಲ್ ಮಾತನಾಡಿ, ಕರೊನಾ ವೈರಸ್ ಹರಡದಂತೆ ಜಾಗೃತಿ ಮೂಡಿಸುವುದು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯ ಜವಾಬ್ದಾರಿಯಾಗಿದೆ. ಕರೊನಾ ಸೇನಾನಿಗಳಿಗಾಗಿ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುತ್ತಿದೆ. ಜಿಲ್ಲಾಡಳಿತದ ಆದೇಶ ಪಾಲಿಸಿ, ಕರೊನಾ ಓಡಿಸಲು ಎಲ್ಲರೂ ಸಹಕರಿಸಬೇಕು ಎಂದರು.

    ರೆಡ್‌ಕ್ರಾಸ್ ಚೇರ್ಮನ್ ಡಾ.ಎ.ಎಂ.ಶಿವಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಸೋಪು, ಮಾಸ್ಕ್ ವಿತರಿಸಲಾಗಿದೆ. ಬೇರೆ ಜಿಲ್ಲೆ, ರಾಜ್ಯಗಳ ವಲಸೆ ಕೂಲಿ ಕಾರ್ಮಿಕರು, ಬಡವರು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾಸ್ಕ್, ಆಹಾರ ಪೊಟ್ಟಣ ವಿತರಿಸಲಾಗಿದೆ ಎಂದು ಹೇಳಿದರು.

    ರೆಡ್‌ಕ್ರಾಸ್ ಉಪಾಧ್ಯಕ್ಷ ಉಮೇಶ್‌ಶೆಟ್ಟಿ, ಕಾರ್ಯದರ್ಶಿ ಅನಿಲ್ ಬಾರೆಂಗಳ್, ಜಂಟಿ ಕಾರ್ಯದರ್ಶಿ ಡಿ.ಎಚ್.ಸಾಗರ್, ಖಜಾಂಚಿ ಗೌಡ್ರು ಚನ್ನಬಸಪ್ಪ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ವಿಶ್ವಜಿತ್ ಜಾಧವ್, ಪರಶುರಾಮ್, ಮಿರ್ಜಾ ಇಸ್ಮಾಯಿಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts