More

    ವಿಶ್ವಮಟ್ಟಕ್ಕಿಂತಲೂ ಮೈಸೂರಲ್ಲೇ ಅತ್ಯಧಿಕ ಕರೊನಾ ಸಾವು!

    ಮೈಸೂರು: ದಸರಾ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿರುವ ಮೈಸೂರಿನಲ್ಲಿ ಇದೀಗ ಕರೊನಾತಂಕ ಕಾಡುತ್ತಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ದಸರಾ ತಯಾರಿ ಕುರಿತು ಚುನಾಯಿತ ಜನಪ್ರತಿನಿಧಿಗಳ ಉನ್ನತಮಟ್ಟದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಅಲ್ಲದೆ ಕರೊನಾ ಪರಿಸ್ಥಿತಿ ನಿಭಾಯಿಸುವ ಸಂಬಂಧ ಜಿಲ್ಲಾಡಳಿತದ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

    ಕಳೆದ ಒಂದು ವಾರದಲ್ಲೇ ಮೈಸೂರಿನಲ್ಲಿ ಕರೊನಾ ಸಂಬಂಧಿತ ಸಾವಿನ ಪ್ರಮಾಣ ಶೇ. 3.9 ತಲುಪಿದ್ದ ಬಗ್ಗೆ ಸುಧಾಕರ್​ ತೀವ್ರ ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕರೊನಾದಿಂದಾಗುವ ಸಾವಿನ ಪ್ರಮಾಣ ಸದ್ಯ ಶೇ. 1.9 ಇದೆ, ರಾಷ್ಟ್ರಮಟ್ಟದಲ್ಲಿ ಇದು ಶೇ. 1.6 ಇದೆ. ಇನ್ನು ಜಾಗತಿಕ ಮಟ್ಟದಲ್ಲಿ ಇದು ಶೇ. 3.5 ಇದೆ. ಆದರೆ ಮೈಸೂರಿನಲ್ಲಿ ಅದಕ್ಕೂ ಮೀರಿ ಅಂದರೆ ಶೇ. 3.9 ಸಾವು ಸಂಭವಿಸುತ್ತಿದೆ. ಮಾತ್ರವಲ್ಲ ರಾಜ್ಯದಲ್ಲಿನ ಕರೊನಾ ಪ್ರಕರಣಗಳ ಪೈಕಿ ಮೈಸೂರಿನಲ್ಲೇ ಶೇ. 10 ವರದಿಯಾಗುತ್ತಿದೆ. ಕರೊನಾ ಪರೀಕ್ಷೆ ಪ್ರಮಾಣ ಕೂಡ ಅದಕ್ಕೆ ತಕ್ಕಂತಿಲ್ಲ ಎಂದು ಸಚಿವರು ಬೇಸರ ಪಟ್ಟಿದ್ದಾರೆ.

    ಇದನ್ನು ಓದಿ: ಕರೊನಾ ಬುಲೆಟಿನ್​: ರಾಜ್ಯದಲ್ಲಿಂದು 7,051 ಪ್ರಕರಣ, 84 ಸಾವು..
    ಒಂದೇ ಮನೆಯಲ್ಲಿ 11 ಸಾವು ಸಂಭವಿಸಿದ ಬಗ್ಗೆಯೂ ನೊಂದು ಮಾತನಾಡಿದ ಸಚಿವರು, ಮೈಸೂರಿನ ಎಲ್ಲ ಹಿರಿಯ ನಾಗರಿಕರನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts