More

    ಕರೊನಾ ತಡೆಗೆ ಶಿಷ್ಟಾಚಾರ ಪ್ರಕಟ: ಹೊರ ರಾಜ್ಯದಿಂದ ಬರುವವರಿಗೆ ನಿಯಂತ್ರಣ ನಿಯಮ ಜಾರಿ

     ಬೆಂಗಳೂರು: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ ವ್ಯಕ್ತಿಗಳ ಸಂಚಾರ ನಿಯಂತ್ರಣದ ಬಗ್ಗೆ ಸರ್ಕಾರ ಶಿಷ್ಟಾಚಾರ ಪ್ರಕಟಿಸಿದೆ. ಶಿಷ್ಟಾಚಾರ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ದಂಡನೆಗೆ ಒಳಪಡಬೇಕಾಗುತ್ತದೆ.

    ಎಲ್ಲ ಅಂಗಡಿಗಳು, ವಾಣಿಜ್ಯ ಸಂಸ್ಥೆ, ಕಚೇರಿ, ಕಾರ್ಖಾನೆ, ಮಾಲ್, ಧಾರ್ವಿುಕ ಸ್ಥಳ, ಹೋಟೆಲ್ ಇತ್ಯಾದಿಗಳು ಗ್ರಾಹಕರು ಅಥವಾ ಸಂದರ್ಶಕರು ಆವರಣಕ್ಕೆ ಪ್ರವೇಶಿಸುವ ಮೊದಲು ಕ್ವಾರಂಟೈನ್ ಮುದ್ರೆಯನ್ನು ಪರಿಶೀಲಿಸಬೇಕು. ಕ್ವಾರಂಟೈನ್ ಮುದ್ರೆ ಹೊಂದಿದ್ದರೆ ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗುವವರೆಗೂ ಅಥವಾ ಅವರ ಕರೊನಾ ತಪಾಸಣೆಯಲ್ಲಿ ನೆಗೆಟಿವ್ ವರದಿ ಸ್ವೀಕೃತವಾಗುವವರೆಗೂ ಪ್ರವೇಶಿಸಲು ಅವಕಾಶ ನೀಡಬಾರದು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ. ಸಾರ್ವಜನಿಕರು ಮತ್ತು ನಿವಾಸಿ ಕಲ್ಯಾಣ ಸಂಘಗಳು ನೆರೆಹೊರೆಯಲ್ಲಿ ಯಾವುದೇ ವ್ಯಕ್ತಿಗಳು ಕ್ವಾರಂಟೈನ್ ಉಲ್ಲಂಘಿಸಿದಲ್ಲಿ ಪೊಲೀಸರಿಗೆ ದೂರವಾಣಿ ಸಂಖ್ಯೆ 100ಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

    ಇದನ್ನೂ ಓದಿ   ಸಾಲ ಕೊಡಿಸಿದ ‘ತಪ್ಪಿಗೆ’ ತಾಯಿ-ಮಗಳ ಆತ್ಯಹತ್ಯೆ! ಫಿಲೇಚರ್ ಮಾಲೀಕನ ಬಂಧನ

    ಅಂತಾರಾಜ್ಯ ಪ್ರಯಾಣಿಕರಿಗೆ: ಕರ್ನಾಟಕಕ್ಕೆ ಪ್ರವೇಶಿಸುವ ಮುನ್ನ ಎಲ್ಲ ಪ್ರಯಾಣಿಕರು ಸೇವಾ ಸಿಂಧು ಪೋರ್ಟಲ್​ನಲ್ಲಿ ಕಡ್ಡಾಯವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ತಪ್ಪದೇ ನೀಡಬೇಕು. ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಒಂದೇ ಮೊಬೈಲ್ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ನೋಂದಣಿಗೆ ಬಳಸಲು ಅವಕಾಶವಿಲ್ಲ. ವಾಣಿಜ್ಯ ವಹಿವಾಟುಗಳ ಉದ್ದೇಶಕ್ಕಾಗಿ ಪ್ರಯಾಣ ಮಾಡುವವರು ವಿವರಗಳನ್ನು (ಕರ್ನಾಟಕದಲ್ಲಿ ಭೇಟಿ ಮಾಡುವ ವ್ಯಕ್ತಿಯ ಹೆಸರು, ಮೊಬೈಲ್ ದೂರವಾಣಿ ಸಂಖ್ಯೆ ಮತ್ತು ವಿಳಾಸ ತಪ್ಪದೇ ನೀಡುವುದು) ಹಾಗೂ ಹಿಂದಿರುಗುವ ದಿನಾಂಕ ನೀಡಬೇಕು. ಏಳು ದಿನಗಳಿಗಿಂತ ಹೆಚ್ಚು ಇರುವಂತಿಲ್ಲ. ರಾಜ್ಯದ ಮುಖೇನ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರು ಪ್ರಯಾಣ ಮಾಡುವ ರಾಜ್ಯದ ವಿಳಾಸ ನೀಡಬೇಕು ಮತ್ತು ಕರ್ನಾಟಕದಿಂದ ನಿರ್ಗಮಿಸುವ ಚೆಕ್ ಪೋಸ್ಟ್​ನ ವಿವರಗಳನ್ನು ತಪ್ಪದೇ ನಮೂದಿಸಬೇಕು. ರಾಜ್ಯವನ್ನು ಪ್ರವೇಶಿಸುವ ಎಲ್ಲ ವ್ಯಕ್ತಿಗಳ ಆರೋಗ್ಯ ತಪಾಸಣೆಯನ್ನು ಆಗಮನದ ಕೇಂದ್ರಗಳಲ್ಲಿ ಮಾಡಬೇಕು.

    ಮಹಾರಾಷ್ಟ್ರದಿಂದ ಆಗಮಿಸುವವರಿಗೆ

    ಮಹಾರಾಷ್ಟ್ರದಿಂದ ಆಗಮಿಸುವವರಿಗೆ ತಲಾ 7 ದಿನ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್ ಮಾಡಬೇಕು. ವ್ಯವಹಾರಸ್ಥರು ಎಂದು ನಿರೂಪಿಸಲು ವ್ಯಕ್ತಿಯು ವಾಪಾಸಾಗುವ ಖಾತ್ರಿಪಟ್ಟಿರುವ ವಿಮಾನ/ ರೈಲು ಟಿಕೆಟ್ ತೋರಿಸಬೇಕು. ರಸ್ತೆ ಮೂಲಕ ಬರುತ್ತಿದ್ದರೆ ಕರ್ನಾಟಕದಲ್ಲಿ ತಾವು ಭೇಟಿಯಾಗುವ ವ್ಯಕ್ತಿಯ ಗುರುತಿನ ಚೀಟಿಯನ್ನು ಒದಗಿಸಬೇಕು. 2 ದಿನಗಳಿಗಿಂತ ಹಳೆಯದಲ್ಲದ ಕರೊನಾ ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರವನ್ನು ಯಾರು ಹೊಂದಿರುತ್ತಾರೋ ಅವರಿಗೆ ಕ್ವಾರಂಟೈನ್​ನಿಂದ ವಿನಾಯಿತಿ ಇರುತ್ತದೆ. ಯಾರು ಕರೊನಾ ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರ ಹೊಂದಿಲ್ಲವೋ ಅಂತಹ ವ್ಯಕ್ತಿ 2 ದಿನಗಳ ಸಾಂಸ್ಥಿಕ ಕ್ವಾರಂಟೈನ್​ಗೆ ಹೋಗಬೇಕು. ಅದರಲ್ಲಿಯೂ ಕರೊನಾ ಪರೀಕ್ಷೆಯನ್ನು ಅವನ / ಅವಳ ಸ್ವಂತ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಪರೀಕ್ಷಾ ಫಲಿತಾಂಶ ನೆಗೆಟಿವ್ ಎಂದು ಕಂಡು ಬಂದ ನಂತರ ವ್ಯಕ್ತಿಯನ್ನು ಕ್ವಾರಂಟೈನ್​ನಿಂದ ಮುಕ್ತಗೊಳಿಸಲಾಗುತ್ತದೆ. ವ್ಯವಹಾರಸ್ಥ ಪ್ರಯಾಣಿಕರಿಗೆ ಅಂಗೈ ಮೇಲೆ ಮುದ್ರೆ ಒತ್ತುವ ಅವಶ್ಯಕತೆಯಿರುವುದಿಲ್ಲ.

    ಇದನ್ನೂ ಓದಿ   ನಾನೇ ನಿನಗೆ ಕೆಲಸ ಕೊಡಿಸಿದ್ದು, ದುಡ್ಡು ಕೊಡು: ತಹಸೀಲ್ದಾರ್‌ಗೆ ಮಧ್ಯವರ್ತಿ ದುಂಬಾಲು!

    ಬಿಬಿಎಂಪಿ ಮತ್ತು ಇತರ ನಗರ ಪ್ರದೇಶ

    ಮನೆ ಬಾಗಿಲಿಗೆ ಹೋಂ ಕ್ವಾರಂಟೈನ್ ಭಿತ್ತಿಪತ್ರ ಅಂಟಿಸಬೇಕು. ಇಬ್ಬರು ನೆರೆಹೊರೆ ಯವರಿಗೆ ಮಾಹಿತಿ ನೀಡುವುದು. ಹೋಂ ಕ್ವಾರಂಟೈನ್ ಜವಾಬ್ದಾರಿಯನ್ನು ವಾರ್ಡ್ ಮಟ್ಟದ ತಂಡ ನಿರ್ವಹಿಸಬೇಕು. ಮೇಲ್ವಿಚಾರಣೆ ಮಾಡಲು ನಿವಾಸಿಗಳ ಕಲ್ಯಾಣ ಸಂಘ, ಅಪಾರ್ಟ್​ವೆುಂಟ್ ಮಾಲೀಕರ ಸಂಘ, ಬೂತ್ ಮಟ್ಟದಲ್ಲಿ 3 ಸದಸ್ಯರ ತಂಡ ರಚಿಸಬೇಕು. ಹೋಂ ಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ಧ ಎಫ್​ಐಆರ್ ದಾಖಲು ಮಾಡುವುದು. ಐವಿಆರ್​ಎಸ್ ಕಾಲ್ ಸೆಂಟರ್ ಮುಖಾಂತರ ಕರೆ ಮಾಡಿ ನಿಗಾ ವಹಿಸ ಬೇಕು. ಕ್ವಾರಂಟೈನ್ ಉಲ್ಲಂಘಿಸಿದಲ್ಲಿ ಪೊಲೀಸರಿಗೆ ದೂರವಾಣಿ 100ಗೆ ಮಾಹಿತಿ ನೀಡಬೇಕು. ಗಡಿಭಾಗದ ಚೆಕ್ ಪೋಸ್ಟ್, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳು ಕ್ವಾರಂಟೈನ್ ಮಾನದಂಡಗಳಿಗೆ ಅನುಸಾರವಾಗಿ 14 ದಿನಗಳ ಹೋಂ ಕ್ವಾರಂಟೈನ್ ಕುರಿತು ಮುಂಗೈಗೆ ಹೋಂ ಕ್ವಾರಂಟೈನ್ ಮುದ್ರೆ ಹಾಕಬೇಕು. ಯಾವುದೇ ರಾಜ್ಯದ ಪ್ರಯಾಣಿಕರಿಗೆ ಆಗಮನದ ಸಂದರ್ಭದಲ್ಲಿ ರೋಗ ಲಕ್ಷಣಗಳಿದ್ದರೆ ಕೋವಿಡ್ ನಿಗಾ ಕೇಂದ್ರದಲ್ಲಿ 7 ದಿನ ಪ್ರತ್ಯೇಕವಾಗಿರಿಸಬೇಕು. ತದನಂತರ 14 ದಿನ ಹೋಂ ಕ್ಟಾರಂಟೈನ್ ಮಾಡುವಂತೆ ನಿರ್ದೇಶಿಸಲಾಗಿದೆ. ಆಗಮಿಸಿದ ಕೂಡಲೇ ತಪಾಸಣೆ ಮಾಡಬೇಕು. ಪಾಸಿಟಿವ್ ಬಂದರೆ ನಿಗದಿತ ಕೋವಿಡ್ ಆಸ್ಪತ್ರೆ (ಡಿಸಿಹೆಚ್)ಗೆ ದಾಖಲಿಸಬೇಕು.

    ಇದನ್ನೂ ಓದಿ  ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು

    ಗ್ರಾಮೀಣ ಪ್ರದೇಶದಲ್ಲಿ

    ಮನೆ ಬಾಗಿಲಿಗೆ ಹೋಂ ಕ್ವಾರಂಟೈನ್ ಭಿತ್ತಿಪತ್ರ ಅಂಟಿಸುವುದು.ಇಬ್ಬರು ನೆರೆಹೊರೆಯವರಿಗೆ ಮಾಹಿತಿ ನೀಡುವುದು. ಹೋಂ ಕ್ವಾರಂಟೈನ್ ಹೊಣೆ ಗ್ರಾಮ ಪಂಚಾಯಿತಿ ನಿರ್ವಹಿಸುವುದು. ಮೇಲ್ವಿಚಾರಣೆಗೆ ಪ್ರತಿ ಹಳ್ಳಿಯಲ್ಲಿ 3 ಸದಸ್ಯರ ತಂಡ ರಚಿಸಬೇಕು. ಹೋಂ ಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ಧ ಎಫ್​ಐಆರ್ ದಾಖಲು ಮಾಡುವುದು. ಐವಿಆರ್​ಎಸ್ ಕಾಲ್ ಸೆಂಟರ್ ಮುಖಾಂತರ ಕರೆ ಮಾಡಿ ನಿಗಾ ವಹಿಸಬೇಕು.

    ಇತರ ರಾಜ್ಯಗಳಿಂದ ಆಗಮಿಸುವವರು

    7 ದಿನ ಸಾಂಸ್ಥಿಕ ನಂತರ 14ದಿನದ ಹೋಂ ಕ್ವಾರಂಟೈನ್ ಹೋಂ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣ ಕಂಡುಬಂದರೆ ಪರೀಕ್ಷೆ. ಹೋಂ ಕ್ವಾರಂಟೈನ್ ಸಾಧ್ಯವಾಗದ ವ್ಯಕ್ತಿಗಳು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಗಾಗಬೇಕು.

    ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts