More

    ದ.ಕ.ದಲ್ಲಿ 500ರ ಗಡಿ ದಾಟಿದ ಸೋಂಕಿತರ ಸಂಖ್ಯೆ

    ಮಂಗಳೂರು: ಜಿಲ್ಲೆಯಲ್ಲಿ ಏರಿಕೆಯ ಹಾದಿಯಲ್ಲೇ ಸಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಶನಿವಾರ 500ರ ಗಡಿದಾಟಿದೆ.
    ಜಿಲ್ಲೆಯಲ್ಲಿ ಶನಿವಾರ 517 ಮಂದಿಗೆ ಕರೊನಾ ದೃಢಪಟ್ಟು, ಇಬ್ಬರು ಮೃತಪಟ್ಟಿದ್ದಾರೆ.

    ಒಬ್ಬರು 55 ವರ್ಷದ ಪುತ್ತೂರು ಮೂಲದವರಾಗಿದ್ದು 15 ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನೊಬ್ಬರು 83ರ ವೃದ್ಧರು. ಶುಗರ್, ಬಿಪಿ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದರು. ಕರೊನಾಗೆ ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 747ಕ್ಕೆ ಏರಿಕೆಯಾಗಿದೆ. ಶನಿವಾರ 128 ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ. ಈ ವರೆಗಿನ ಒಟ್ಟು ಕೋವಿಡ್ ಪ್ರಕರಣಗಳು 40,720ಕ್ಕೇರಿದರೆ ಸಕ್ರಿಯ ಪ್ರಕರಣದ 3,577ಕ್ಕೇರಿವೆ.

    ಶನಿವಾರ ಜಿಲ್ಲೆಯಲ್ಲಿ ಮತ್ತೆ ಮೂರು ಕಂಟೇನ್ಮೆಂಟ್ ಜೋನ್ ಗುರುತಿಸಲಾಗಿದೆ. ಮಂಗಳೂರಿನ ಕೊಡಿಯಾಲ್‌ಬೈಲ್ ಭಗವತಿನಗರದ ಒಂದೇ ಮನೆಯ 6 ಮಂದಿಗೆ ಕೋವಿಡ್ ಬಾಧಿಸಿದೆ. ಸಿಟಿ ಆಸ್ಪತ್ರೆ ಸಮೀಪದ ಅಪಾರ್ಟ್‌ಮೆಂಟ್ ಒಂದೇ ಮನೆಯ ಐವರಿಗೆ ಕೋವಿಡ್ ಬಂದಿದೆ. ಸುಳ್ಯ ಮಂಡೆಕೋಲಿನ ಒಂದೇ ಮನೆಯ ಐವರಿಗೆ ಕೋವಿಡ್ ಸೋಂಕು ತಗಲಿದೆ. ಈ ಮೂರೂ ಮನೆಗಳೂ ಕಂಟೇನ್ಮೆಂಟ್ ಜೋನ್ ಆಗಿ ಗುರುತಿಸಲ್ಪಟ್ಟಿವೆ.

    ಉಡುಪಿಯಲ್ಲಿ 403 ಸೋಂಕಿತರು: ಉಡುಪಿ: ಜಿಲ್ಲೆಯಲ್ಲಿ ಶನಿವಾರ 403 ಮಂದಿಗೆ ಕೋವಿಡ್ ದೃಢಪಟ್ಟಿದೆ. ಉಡುಪಿ 208, ಕುಂದಾಪುರ 143, ಕಾರ್ಕಳ 48 ಮಂದಿ ಸೇರಿದಂತೆ ಹೊರ ಜಿಲ್ಲೆಯ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 28,442ಕ್ಕೆೆ ಏರಿಕೆಯಾಗಿದೆ. 34121 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದ್ದು, 177 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ 1,491ಸಕ್ರಿಯ ಪ್ರಕರಣಗಳಿವೆ.

    ಕಾಸರಗೋಡಿನಲ್ಲಿ 908: ಜಿಲ್ಲೆಯ 908 ಮಂದಿ ಸೇರಿ ಕೇರಳದಲ್ಲಿ ಶನಿವಾರ 26685 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 25 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದು, ಈವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5080ಕ್ಕೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts