More

    ದೇವದುರ್ಗ ತಾಲೂಕಿನಲ್ಲಿ ಹಸುಗೂಸು, ಬಾಣಂತಿಗೂ ಕ್ವಾರಂಟೈನ್ !, ಜಾಲಹಳ್ಳಿ ಮುರಾರ್ಜಿ ಶಾಲೆಯಲ್ಲಿ ವ್ಯವಸ್ಥೆ

    ದೇವದುರ್ಗ: ಕೆಲಸ ಅರಸಿ ದುಡಿಯಲು ಗುಳೆ ಹೋಗಿದ್ದ ತಾಲೂಕಿನ ಕೂಲಿಕಾರರು ಕರೊನಾ ಭೀತಿ ಹಿನ್ನೆಲೆಯಲ್ಲಿ ಮರಳಿ ಬಂದಿದ್ದಾರೆ. 14ದಿನಗಳ ಹಸುಗೂಸು, ಬಾಣಂತಿ ಸೇರಿ ಸುಮಾರು 102 ಜನರಿಗೆ ಜಾಲಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಕ್ವಾರಂಟೈನ್ ಮಾಡಲಾಗಿದೆ.

    ಗುಳೆ ಹೋಗಿದ್ದ ಕೂಲಿಕಾರರಿಗೆ ಕೆಲಸ ಸಿಗದ ಹಿನ್ನೆಲೆಯಲ್ಲಿ ನಿತ್ಯ 100ಕ್ಕೂ ಹೆಚ್ಚು ಜನರು ಮರಳಿ ಬರುತ್ತಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡುತ್ತಿದೆ. ಸೋಮವಾರ ಸಂಜೆ ಬಸ್‌ಗಳಲ್ಲಿ ಬಂದ ಸುಮಾರು 100ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

    ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಮರಳಿ ಬಂದ ಗಲಗ, ಬುಂಕಲದೊಡ್ಡಿ, ಸೂಲದಗುಡ್ಡ, ಮುಂಡರಗಿ, ಅಮರಾಪುರ ಸೇರಿ ವಿವಿಧ ಗ್ರಾಮದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿ ಅವರ ಆರೋಗ್ಯ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೆಲ ದಿನಗಳ ಹಿಂದೆ ಚಿಂಚೋಡಿ, ಜಾಲಹಳ್ಳಿ, ಗಬ್ಬೂರು, ಬಿ.ಗಣೇಕಲ್ ಸೇರಿ ವಿವಿಧ ಗ್ರಾಮಗಳ ಸಾವಿರಾರು ಜನರು ಮರಳಿ ಬಂದಿದ್ದು ಎಲ್ಲರಿಗೂ 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಮಧುರಾಜ್ ಯಾಳಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts