More

    ಕರೊನಾ ಸೇನಾನಿಗಳಿಗೆ ಕೊಡೆ ವಿತರಣೆ

    ಬೆಳಗಾವಿ: ಮಹಾಂತೇಶ ನಗರದ ಜಿಲ್ಲಾ ಬಾಲಭವನದಲ್ಲಿ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಶನಿವಾರ 800 ಕೊಡೆ ವಿತರಿಸಲಾಯಿತು.

    ಮಾಜಿ ಸಚಿವ ಶಶಿಕಾಂತ ನಾಯಕ ಕೊಡೆ ವಿತರಿಸಿ ಮಾತನಾಡಿ, ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ. ಪ್ರತಿ ಮನೆ, ಮನೆಗೂ ತೆರಳಿ ತಪಾಸಣೆ ನಡೆಸುವ ಮೂಲಕ ಜೀವದ ಹಂಗು ತೊರೆದು ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

    ಅಮೆರಿಕ ಸೇರಿ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕರೊನಾ ವೈರಸ್ ಸೋಂಕಿತರು ಕಡಿಮೆ ಪ್ರಮಾಣದಲ್ಲಿರುವುದು ಸಮಾಧಾನಕರ ಸಂಗತಿ. ಇದಕ್ಕೆ ಕಾರಣೀಕರ್ತರಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ ಯೋಜನೆ ಜಾರಿ ಮತ್ತು ಸೇವಾ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೇವತಿ ಹೊಸಮಠ, ಚಿಕ್ಕೋಡಿ ಬಿಜೆಪಿ ಅಧ್ಯಕ್ಷ ರಾಜೇಶ್ ನೆರ್ಲಿ, ರವಿ ಹಿರೇಮಠ, ಸದಾನಂದ ಕಲಾರಕೊಪ್ಪ, ಅಶೋಕ ದಾನವಾಡೆ, ಡಾ.ಸಿದ್ಧಾರ್ಥ ಪೂಜೇರ, ಮೋಹನ ಕೊಟೀವಾಲೆ, ಡಾ. ಶ್ರೀಕಾಂತ ವಿರಗಿ, ಆನಂದ ತೆರಗಾಂವ, ಅಪ್ಪಾಸಾಹೇಬ ಕಮತ, ಗಜಾನನ ಪಾಟೀಲ, ಕೃಷ್ಣ ಸುಳೇಬಾವಿ, ಅನಂತ ಗೊನವಾಳ, ಶಶಿಕಾಂತ ಖಾಸಬಾಗ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts