More

    ಪಪ್ಪಾಯಿ ಮೇಲೆ ಲಾಕ್‌ಡೌನ್ ಪ್ರಹಾರ

    ಉಪ್ಪಳ: ಪೈವಳಿಕೆ ಸಮೀಪದ ಚಿಪ್ಪಾರು ಅಡ್ಕತ್ತಿಮಾರು ನಿವಾಸಿ, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಬೆಳೆಸಿದ ಕ್ವಿಂಟಾಲ್‌ಗಟ್ಟಲೆ ಪಪ್ಪಾಯಿ ಹಣ್ಣು ಬೇಡಿಕೆ- ಮಾರುಕಟ್ಟೆಗಳಿಲ್ಲದೆ ನಾಶದಂಚಿಗೆ ತಲುಪಿದೆ. ಇದರಿಂದ ಲಕ್ಷಾಂತರ ರೂ. ಆರ್ಥಿಕ ನಷ್ಟದ ಜತೆಗೆ ಬಳಸಿದ ಮೂಲಧನವೂ ಕೈತಪ್ಪಿ ಸಂಕಷ್ಟಕ್ಕೊಳಗಾಗಿದ್ದಾರೆ.

    ಗೋಪಾಲಕೃಷ್ಣ ಭಟ್ 4 ವರ್ಷಗಳಿಂದ ತಮ್ಮ ಎರಡು ಎಕರೆ ಗುಡ್ಡವನ್ನು ಹದಗೊಳಿಸಿ ರೆಡ್‌ಲೇಡಿ ಪಪ್ಪಾಯ ಕೃಷಿ ನಿರ್ವಹಿಸುತ್ತಿದ್ದರು. ಸುಮಾರು 1200 ಪಪ್ಪಾಯಿ ಸಸಿಗಳಲ್ಲಿ ಪ್ರತಿವಾರ 15 ಕ್ವಿಂಟಾಲ್‌ಗಳಷ್ಟು ಪಪ್ಪಾಯ ಪಡೆಯುತ್ತಿದ್ದರು. ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕುಂಬಳೆ ಹಾಗೂ ಕಾಸರಗೋಡಿನ ಅಂಗಡಿಗಳಲ್ಲಿ ತಾವೇ ಸ್ವತಃ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಆದರೆ ಕರೊನಾ ಕಾರಣ ಲಾಕ್‌ಡೌನ್ ಹೇರಲ್ಪಟ್ಟು ಪಪ್ಪಾಯ ಹಣ್ಣುಗಳನ್ನು ವಿಕ್ರಯಿಸಲಾಗದೆ ಕೊಳೆತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

    ಬೇಡಿಕೆ ಇದ್ದರೂ ಹಣ ನೀಡರು: ಲಾಕ್‌ಡೌನ್ ಆರಂಭವಾದ ಬಳಿಕ ನಿಯಂತ್ರಣಕ್ಕೊಳಪಟ್ಟ ನಿಗದಿತ ಸಮಯಗಳಲ್ಲಿ ತೆರೆದು ಕಾರ್ಯಾಚರಿಸುವ ತರಕಾರಿ ಅಂಗಡಿಗಳಿಗೆ ಹಣ್ಣುಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸರು ತಡೆದು ನಿಲ್ಲಿಸಿ ಪ್ರಯಾಣಕ್ಕೆ ಅಡ್ಡಿಪಡಿಸುತ್ತಾರೆ. ಅಲ್ಲದೆ ಸಾಕಷ್ಟು ಬೇಡಿಕೆ ಇದ್ದರೂ ವ್ಯಾಪಾರಕ್ಕಾಗಿ ಖರೀದಿಸುವ ಅಂಗಡಿ ವ್ಯಾಪಾರಿಗಳು ಹಲವು ಕಾರಣಗಳನ್ನು ನೀಡಿ ಕಡಿಮೆ ಬೆಲೆಗೆ ಖರೀದಿಸುತ್ತಿರುವುದಾಗಿ ಭಟ್ ತಮ್ಮ ನೋವು ತೋಡಿಕೊಂಡಿದ್ದಾರೆ.

    ಕನಿಷ್ಠ 20 ರೂ.ಗಳಿಗಾಗದೂ ಖರೀದಿಸಿ ಎಂದು ವಿನಂತಿಸಿದರೂ 15 ರೂ.ಗಳಿಗಿಂತ ಹೆಚ್ಚು ಹಣವನ್ನು ಅಂಗಡಿ ಮಾಲೀಕರು ನೀಡುವುದಿಲ್ಲ. ಆದರೆ ಅಂಗಡಿಗಳಲ್ಲಿ 40ರಿಂದ 45 ರೂ.ಗಳವರೆಗೂ ಕಿಲೋಗ್ರಾಂ ಒಂದಕ್ಕೆ ಮಾರಾಟ ಮಾಡುವ ಮೂಲಕ ಕೃಷಿಕರನ್ನು ವಂಚಿಸಲಾಗುತ್ತಿದೆ.
    ಗೋಪಾಲಕೃಷ್ಣ ಭಟ್ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts