More

    ಕಾಫಿನಾಡು ಚಿಕ್ಕಮಗಳೂರಿಗೆ ಪಕ್ಕದ ಶಿವಮೊಗ್ಗ,ಹಾಸನ ಜಿಲ್ಲೆಗಳೇ ಕಂಟಕ

    ಚಿಕ್ಕಮಗಳೂರು: ಕಾಫಿ ನಾಡಿನ ಜನರು ಅವಲಂಬಿಸಿರುವ ಮೂರು ಜಿಲ್ಲೆಗಳಲ್ಲಿ ಕರೊನಾ ಸೋಂಕು ಆವರಿಸಿರುವುದು ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ. ಜತೆಗೆ ಅಲ್ಲಿಂದ ಕದ್ದುಮುಚ್ಚಿ ಬರುವವರ ಸಂಖ್ಯೆ ಹೆಚ್ಚಾಗುವ ಆತಂಕ ಮೂಡಿದೆ.

    ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾಗಿರುವ ಚಿಕ್ಕಮಗಳೂರಿಗೆ ಸರ್ಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ಹೊರತುಪಡಿಸಿದರೆ ಜನರು ಬರುವುದೇ ವಿರಳ. ಜಿಲ್ಲೆಯ ಜನರು ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ ಜಿಲ್ಲೆಯಲ್ಲೇ ಹೆಚ್ಚಾಗಿ ಒಡನಾಟ ಇಟ್ಟುಕೊಂಡವರು. ಆರೋಗ್ಯ ಸಮಸ್ಯೆ, ಬಟ್ಟೆ ಖರೀದಿಗೆ ಹೆಚ್ಚಾಗಿ ಇವರಡೂ ಜಿಲ್ಲೆಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಅಲ್ಲಿಂದ ಬರುವ, ಹೋಗುವ ಅನಿವಾರ್ಯತೆ ಇರುವವರು ಖಾಕಿ ಪಡೆಯ ಕಣ್ತಪ್ಪಿಸುವ ಪ್ರಯತ್ನ ನಡೆಸುವುದು ಖಚಿತ. ಹಾಗಾಗಿ ಪೊಲೀಸರು ಚೆಕ್​ಪೋಸ್ಟ್​ಗಳಲ್ಲಿ, ಒಳರಸ್ತೆಗಳಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸುವುದು ಅನಿವಾರ್ಯವಾಗಿದೆ.

    ಕರೊನಾ ಸೋಂಕು ಭೀತಿ ಅವರಿಸುತ್ತಿದ್ದಂತೆ ದಕ್ಷಿಣ ಕನ್ನಡ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುವ ಜತೆಯಲ್ಲಿ ಕೆಂಪು ವಲಯವಾಗಿಯೇ ಗುರುತಿಸಿಕೊಂಡಿತು. ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ ಸೇರಿ ಮಲೆನಾಡಿನ ಜನರಿಗೆ ಆರೋಗ್ಯ ತಪಾಸಣೆಗೂ ಮಂಗಳೂರಿಗೆ ಹೋಗಲು ಬ್ರೇಕ್ ಬಿದ್ದಿತ್ತು. ಮಂಗಳೂರಿನ ಸಂಪರ್ಕವನ್ನೇ ಕಳೆದುಕೊಳ್ಳುವಂತಾಯಿತು. ಆದರೆ ಮಂಗಳೂರಿಗೆ ಹೋಗಲು ಸಾಧ್ಯವಾಗದಿದ್ದರೂ ಶಿವಮೊಗ್ಗವನ್ನು ನಂಬಿಕೊಂಡಿದ್ದರು. ಸೋಮವಾರ ಹಾಸನದಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ. ಇದೀಗ ಮುಂದೇನು ಎನ್ನುವ ಭೀತಿಗೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts