More

    ಜೀವಕ್ಕೆ ದುಬಾರಿಯಾಗುತ್ತಿದೆ ದುಬೈ ಸಹವಾಸ- ಪರ ಊರಿಂದ ಬಂದ ಓರ್ವನ ಬಲಿ: ಹೆಚ್ಚುತ್ತಿದೆ ಸಾವಿನ ಸಂಖ್ಯೆ!

    ಬೆಂಗಳೂರು: ಇಂದು ಕರೊನಾ ಸೋಂಕು 52 ವರ್ಷದ ವ್ಯಕ್ತಿಯೊಬ್ಬರ ಜೀವ ಪಡೆದಿದೆ. ಹೈದರಾಬಾದ್​ನಿಂದ ಬೀದರ್​ ಜಿಲ್ಲೆಯ ಚಿಟಗುಪ್ಪದ ತಮ್ಮೂರಿಗೆ ವಾಪಸಾಗಿದ್ದ ಇವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿದೆ.

    ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ 69 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವುದು ದುಬೈನಿಂದ ಪ್ರಯಾಣ ಬೆಳೆಸಿರುವ ವ್ಯಕ್ತಿಗಳಲ್ಲಿ. ದುಬೈನಿಂದ ವಿವಿಧ ಭಾಗಗಳಿಗೆ ಬಂದಿರುವ 20 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಇದನ್ನೂ ಓದಿ:  ‘ನನ್ನ ಮಗನೊಬ್ಬನ ಬಿಡುಗಡೆ ಬೇಡವೇ ಬೇಡ, ಎಲ್ಲ ಸೈನಿಕರು ನನ್ನ ಮಕ್ಕಳಿದ್ದಂತೆ’ ಎಂದು ಪಾಕ್​ಗೆ ಖಂಡತುಂಡವಾಗಿ ಹೇಳಿದ್ದ ಜನರಲ್ ಕಾರ್ಯಪ್ಪ..

    ಇದನ್ನು ಬಿಟ್ಟರೆ ಚೆನ್ನೈ ಹಾಗೂ ಮುಂಬೈನಿಂದ ವಿವಿಧ ಊರುಗಳಿಗೆ ಬಂದವರಲ್ಲಿಯೂ ಸೋಂಕಿನ ಪ್ರಮಾಣ ಅಧಿಕವಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಟ್ಟಾರೆಯಾಗಿ ರಾಜ್ಯದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 1056ಕ್ಕೆ ಏರಿದೆ. ಇವರಲ್ಲಿ ಬಿಡುಗಡೆಯಾದವರು 480 ಮಂದಿ. 539 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಮದುವೆ, ಸಭೆ- ಸಮಾರಂಭಕ್ಕೆ ಸಜ್ಜಾಗಿದ್ದೀರಾ? ಹಾಗಿದ್ದರೆ ಸರ್ಕಾರದ ಮಾರ್ಗಸೂಚಿಯನ್ನೊಮ್ಮೆ ಓದಿಕೊಳ್ಳಿ…

    ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ 16, ಮಂಡ್ಯ 13, ಬೆಂಗಳೂರು ನಗರ 12, ಬೀದರ್​ 7, ಹಾಸನ 7, ಉಡುಪಿ 5, ಕಲಬುರಗಿ 3, ಚಿತ್ರದುರ್ಗ 2 ಹಾಗೂ ಕೋಲಾರ, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

    ಸಂಪೂರ್ಣ ವಿವರ ಇಲ್ಲಿದೆ:

    ಜೀವಕ್ಕೆ ದುಬಾರಿಯಾಗುತ್ತಿದೆ ದುಬೈ ಸಹವಾಸ- ಪರ ಊರಿಂದ ಬಂದ ಓರ್ವನ ಬಲಿ: ಹೆಚ್ಚುತ್ತಿದೆ ಸಾವಿನ ಸಂಖ್ಯೆ! ಜೀವಕ್ಕೆ ದುಬಾರಿಯಾಗುತ್ತಿದೆ ದುಬೈ ಸಹವಾಸ- ಪರ ಊರಿಂದ ಬಂದ ಓರ್ವನ ಬಲಿ: ಹೆಚ್ಚುತ್ತಿದೆ ಸಾವಿನ ಸಂಖ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts