More

    ನಕಲಿ ಡಾಕ್ಟರ್​ಗಳಿಂದಾಗಿ ಊರಿನ ತುಂಬಾ ಹರಡಿದ ಕರೊನಾ! ಸಾವಿನ ಮನೆಯ ಕದ ತಟ್ಟುತ್ತಿರುವ ಗ್ರಾಮಸ್ಥರು

    ವಿಜಯನಗರ: ಕರೊನಾ ನಗರಗಳಿಗೆ ಮಾತ್ರ ಸೀಮಿತವಾಗದೆ ಹಳ್ಳಿ ಹಳ್ಳಿಗೂ ಹಬ್ಬಲಾರಂಭಿಸಿದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು ವೈದ್ಯರಂತೆ ನಾಟಕವಾಡಿ ಜನಸಾಮಾನ್ಯರಿಂದ ಹಣ ಲೂಟಿ ಮಾಡುವ ಕೆಲಸಕ್ಕೂ ಮುಂದಾಗಿದ್ದಾರೆ. ಅದೇ ರೀತಿಯ ಘಟನೆ ವಿಜಯನಗರ ಜಿಲ್ಲೆಯಲ್ಲೂ ನಡೆದಿದ್ದು, ಗ್ರಾಮವನ್ನೇ ಸೀಲ್​ಡೌನ್​ ಮಾಡುವಂತಹ ಸ್ಥಿತಿ ಬಂದೊದಗಿದೆ.

    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಕೆಲ ನಕಲಿ ಡಾಕ್ಟರ್​ಗಳು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಕರೊನಾ ಲಕ್ಷಣವಿರುವ ರೋಗಿಗಳಿಗೆ ಅವರೇ ಚಿಕಿತ್ಸೆ ನೀಡುತ್ತಿದ್ದು, ಅದರಿಂದಾಗಿ ಸೋಂಕು ಇನ್ನಷ್ಟು ಹೆಚ್ಚಾಗುತ್ತಿದೆ ಎನ್ನಲಾಗಿದೆ.

    ಈಗಾಗಲೇ ತಂಬ್ರಹಳ್ಳಿ ಗ್ರಾಮದ 61 ಮಂದಿಗೆ ಸೋಂಕು ದೃಢವಾಗಿದೆ. 5 ಸೋಂಕಿತರು ಸಾವನ್ನಪ್ಪಿದ್ದರೆ, 4 ಕ್ಕೂ ಅಧಿಕ ಕೋವಿಡೇತರ ರೋಗಿಗಳು ಕೊನೆಯುಸಿರೆಳೆದಿದ್ದಾರೆ. ಆ ಹಿನ್ನೆಲೆಯಲ್ಲಿ ತಹಶಿಲ್ದಾರ್ ಶರಣಮ್ಮ ಪೂರ್ತಿ ಗ್ರಾಮವನ್ನೇ ಸೀಲ್​ಡೌನ್​ ಮಾಡಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.

    ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

    ಅಜ್ಜಿ-ಮೊಮ್ಮಗನ ಪ್ರಾಣವನ್ನೇ ತೆಗೆದ ಗೋಡೆ! ಸತತ ಮಳೆಯಿಂದಾದ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts