More

    ಅನುಮತಿ ಇಲ್ಲದೆ ಸಂಚರಿಸಿದ್ರೆ ಕ್ರಮ

    ಹರಪನಹಳ್ಳಿ: ಈ ವರ್ಷ ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಇದರಿಂದ ಹೊರಬರಲು ಪರಸ್ಪರ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ ಹೇಳಿದರು.

    ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಅಂಗಡಿ ಮಾಲೀಕರು, ವರ್ತಕರ ಸಭೆಯಲ್ಲಿ ಮಾತನಾಡಿ, ದಾವಣಗೆರೆ ಪಟ್ಟಣದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಅಲ್ಲದೆ ಸಮೀಪದಲ್ಲೇ ಇದೆ. ಹೀಗಾಗಿ ವ್ಯಾಪಾರಸ್ಥರು, ಸಾರ್ವಜನಿಕರು ಜಾಗೃತರಾಗಬೇಕು ಎಂದರು.

    ಅನುಮತಿ ಇಲ್ಲದೆ ಓಡಾಡುವಂತಿಲ್ಲ. ಹೊರ ರಾಜ್ಯದವರು ಬಂದರೆ ಮಾಹಿತಿ ಕೊಡಬೇಕು. ಹರಪನಹಳ್ಳಿ ರಕ್ಷಣೆ ನಿಮ್ಮ ಕೈಯಲ್ಲೇ ಇದೆ ಎಂದು ತಿಳಿಸಿದರು.

    ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾತನಾಡಿ, 42 ದಿನಗಳಿಂದ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ. ಮುಂದೆಯೂ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಪಟ್ಟಣದಲ್ಲಿ ಕರೊನಾ ತಡೆಗೆ ಸಾಕಷ್ಟು ಪ್ರಯತ್ನಿಸಿ ಹಸಿರು ವಲಯದಲ್ಲಿದ್ದೇವೆ ಎಂದರು.

    ಸಿಪಿಐ ಕುಮಾರ, ಪಿಎಸ್‌ಐ ಸಿ. ಪ್ರಕಾಶ್, ವರ್ತಕರು, ಅಂಗಡಿಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts