More

    ಜೈಂಟ್‌ವೀಲ್ ಅಳವಡಿಸೋದಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ ಕುಟುಂಬ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಜಾತ್ರೆಯಲ್ಲಿ ಜೈಂಟ್‌ವೀಲ್ ಅಳವಡಿಸುವ ಎರಡು ಕುಟುಂಬಗಳು ಕರೊನಾದ ಪರಿಣಾಮ ಹಣವಿಲ್ಲದೆ ಊರಿಗೆ ಮರಳಲಾಗದೆ ಐದು ತಿಂಗಳಿನಿಂದ ದೈವಸ್ಥಾನದ ಗದ್ದೆಯಲ್ಲಿ ಡೇರೆ ಹಾಕಿ ಜೀವನ ಸಾಗಿಸುತ್ತಿದೆ. ಕಳ್ಳಿಗೆ ಗ್ರಾಮದ ಕನಪ್ಪಾಡಿತ್ತಾಯ ದೈವಸ್ಥಾನದ ಜಾತ್ರೆ ಸಂತೆಯಲ್ಲಿ ಜೈಂಟ್‌ವೀಲ್ ಅಳವಡಿಸಲು ಮಹಾರಾಷ್ಟ್ರ ಸೋಲಾಪುರದಿಂದ ಬಂದ ಈ ಕುಟುಂಬ ಊರಿಗೆ ಮರಳಲಾಗದೆ ಇಲ್ಲಿಯೇ ಉಳಿಯುವಂತಾಗಿದೆ. ಮಹಿಳೆಯರು, ಸಣ್ಣ ಮಕ್ಕಳು ಸೇರಿದಂತೆ 11 ಮಂದಿಯಿರುವ ಇವರು ಊರಿಗೆ ಮರಳಲು ಹಾತೊರೆಯುತ್ತಿದ್ದಾರೆ.

    ಈ ಕುಟುಂಬ ಪ್ರತಿವರ್ಷ ಕಳ್ಳಿಗೆ ಗ್ರಾಮದ ಕನಪ್ಪಾಡಿತ್ತಾಯ ದೈವಸ್ಥಾನದ ಜಾತ್ರೆಗೂ ಆಗಮಿಸಿ ದೈವಸ್ಥಾನದ ಮುಂಭಾಗದ ಗದ್ದೆಯಲ್ಲಿ ಜೈಂಟ್‌ವೀಲ್ ಅಳವಡಿಸುತ್ತಿದ್ದರು. ಈ ಬಾರಿಯೂ ಈ ಕುಟುಂಬ ಮಾರ್ಚ್ 10ಕ್ಕೆ ಕನಪಾಡಿಗೆ ಆಗಮಿಸಿದೆ. 14ರಿಂದ ಕನಪಾಡಿಯಲ್ಲಿ ಜಾತ್ರೆ ನಡೆದಿದೆ. ಇಲ್ಲಿ ಮುಗಿದು ಪೊಳಲಿ ಜಾತ್ರೆಯಲ್ಲಿ ಆಟದ ಸಾಮಗ್ರಿಗಳನ್ನು ಅಳವಡಿಸಲು ಹೋಗಬೇಕೆನ್ನುವಷ್ಟರಲ್ಲಿ ಮಾರ್ಚ್ 21ರಿಂದ ಕರೊನಾ ಲಾಕ್‌ಡೌನ್ ಆರಂಭಗೊಂಡಿದೆ. ಆ ಬಳಿಕ ತಮ್ಮ ಸೊತ್ತುಗಳೊಂದಿಗೆ ಎಲ್ಲಿಗೂ ಹೋಗಲು ಸಾಧ್ಯವಾಗದೆ ಈ ಕುಟುಂಬ ಐದು ತಿಂಗಳಿನಿಂದ ಇದೇ ಗದ್ದೆಯಲ್ಲಿ ಡೇರೆ ಹಾಕಿ ಜೀವನ ಸಾಗಿಸುತ್ತಿದ್ದಾರೆ. ತಂಡದಲ್ಲಿದ್ದ ಕೆಲವರು ಊರಿಗೆ ಮರಳಿದ್ದಾರೆ, ಕೆಲವರು ಮುಡಿಪು ಪರಿಸರದಲ್ಲಿ ಉಳಿದುಕೊಂಡಿದ್ದಾರೆ. ರಾತ್ರಿ ಮಲಗಲು ದೈವಸ್ಥಾನದ ಹೊರಭಾಗದ ಒಂದು ಕೊಠಡಿಯನ್ನು ಬಳಸಿಕೊಳ್ಳುತ್ತಿದ್ದಾರೆ.

    ಕೂಲಿ ಕೆಲಸ ಅವಲಂಬನೆ
    ಈ ಕುಟುಂಬದ ಪುರುಷರು ಸ್ಥಳೀಯ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆಗೆ ದಾರಿ ಕಂಡುಕೊಂಡಿದ್ದು, ಸ್ಥಳೀಯ ಗದ್ದೆ ಕೆಲಸಗಳು ನಡೆಯುವಾಗ ನಮಗೂ ಕೆಲಸ ಕೊಡಿ ಎಂದು ಜಮೀನು ಮಾಲೀಕರಲ್ಲಿ ಅಂಗಲಾಚುತ್ತಾರೆ. ಊರಿಗೆ ಹೋಗಬೇಕೆಂದರೆ ಅವರ ಸೊತ್ತುಗಳನ್ನು ಸಾಗಿಸಲು ಕನಿಷ್ಠ 15 ಸಾವಿರ ವಾಹನ ಬಾಡಿಗೆ ನೀಡಬೇಕು. ಈಗ ಕೈಯಲ್ಲಿ ನಯಾಪೈಸೆ ಇಲ್ಲದೆ ಊರಿಗೆ ಮರಳುವುದು ಅಸಾಧ್ಯವಾಗಿದೆ.

    ನಾಲ್ಕು ಲಾರಿ ಆಗುವಷ್ಟು ಸಾಮಗ್ರಿಗಳಿದೆ. ಅದನ್ನು ಸಾಗಿಸಲು ನಮ್ಮಲ್ಲಿ ಹಣ ಇಲ್ಲ. ಮುಂದಿನ ಸೀಸನ್‌ವರೆಗೆ ಇಲ್ಲಿಯೇ ಇರಬೇಕಾಗುತ್ತದೆ. ಅಲ್ಲಿವರೆಗೆ ಏನಾದರೂ ತೋಟದ ಕೆಲಸ ಕೂಲಿ ಕೆಲಸ ಮಾಡಿ ಕೊಂಡು ಇಲ್ಲೇ ಇರುತ್ತೇವೆ.
    ಶ್ರೀನಾಥ್, ಊರಿಗೆ ಮರಳಾಗದೆ ಉಳಿದಿರುವ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts