ಚೌಳಹಿರಿಯೂರು ವೈದ್ಯಾಧಿಕಾರಿಗೆ ಸೋಂಕು, ಸಂಪರ್ಕಕ್ಕೆ ಬಂದ 20 ಜನರಿಗೆ ಸಾಂಸ್ಥಿಕ ಕ್ವಾರಂಟೈನ್

blank

ಚೌಳಹಿರಿಯೂರು: ಅಜ್ಜಂಪುರ ತಾಲೂಕು ಚೌಳಹಿರಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ (27 ವರ್ಷ) ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಚಿತ್ರದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಗ್ಯ ಕೇಂದ್ರವನ್ನು ಸ್ಯಾನಿಟೈಸ್ ಮಾಡಿ ಆಸ್ಪತ್ರೆ ಇರುವ ಬೀದಿಯನ್ನು ಸೀಲ್​ಡೌನ್ ಮಾಡಲಾಗಿದೆ.

ಚೌಳಹಿರಿಯೂರಲ್ಲಿ ಎರಡು ದಿನ ವೈದ್ಯರ ಬಳಿ ಚಿಕಿತ್ಸೆ ಪಡೆದ 30 ಜನರನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಅವರನ್ನು ಯಗಟಿ ಬಿಸಿಎಂ ಹಾಸ್ಟೆಲ್​ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಆಸ್ಪತ್ರೆಯ ಎಎನ್​ಎಂ, ಡಿ ಗ್ರೂಪ್ ನೌಕರರು, ಆಶಾ ಕಾರ್ಯಕರ್ತೆಯರು ಸೇರಿ 11 ಜನರ ಆರೋಗ್ಯ ತಪಾಸಣೆ ಮಾಡಿ ಅವರಿಗೆ ಹೋಮ್ ಕ್ವಾರಂಟೈನ್​ನಲ್ಲಿ ಇರಲು ಸೂಚನೆ ನೀಡಲಾಗಿದೆ.

ಆಸ್ಪತ್ರೆಯನ್ನು ಗ್ರಾಪಂನಿಂದ ಸ್ಯಾನಿಟೈಸ್ ಮಾಡಿ ಸೀಲ್​ಡೌನ್ ಮಾಡಲಾಗಿದೆ. ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಅಜ್ಜಂಪುರ ತಹಸೀಲ್ದಾರ್ ವಿಶ್ವನಾಥ್ ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಡಾ. ಹರೀಶ್, ಯಗಟಿ ಪಿಎಸ್​ಐ ಮಂಜುಳಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಪಂ ಸದಸ್ಯರು ಮತ್ತು ಪಿಡಿಒ ಕುಮಾರಸ್ವಾಮಿ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.

ವೈದ್ಯರನ್ನು ವಾರದಲ್ಲಿ ಒಂದು ದಿನ ಕ್ವಾರಂಟೈನ್ ಕೇಂದ್ರಕ್ಕೆ ನಿಯೋಜನೆ ಮಾಡಲಾಗುತ್ತಿದ್ದು, 12ರಂದು ಬೀರೂರು ಬಿಸಿಎಂ ಹಾಸ್ಟೆಲ್​ನ ಕ್ವಾರಂಟೈನ್ ಕೇಂದ್ರ ಹಾಗೂ 15 ಮತ್ತು 17ರಂದು ಕಾಮನಕೆರೆ ಮುರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಕೆಲಸ ಮಾಡಿದ್ದರು.

Share This Article

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…

ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ| Health Tips

ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ…