More

    ವಯೋಮಿತಿ ಬದಲಾವಣೆಗೆ ಕಲಾವಿದರ ಆಗ್ರಹ

    ಶಿವಮೊಗ್ಗ: ಕರೊನಾ ಹಿನ್ನೆಲೆಯಲ್ಲಿ ಕಲಾವಿದರಿಗೆ ಘೋಷಣೆ ಆಗಿರುವ ಆರ್ಥಿಕ ಪ್ಯಾಕೇಜಿನಲ್ಲಿ ವಯೋಮಿತಿ ಬದಲಿಸುವಂತೆ ಆಗ್ರಹಿಸಿ ಯೂತ್ ಆರ್ಟಿಸ್ಟ್ ಗಿಲ್ಡ್ ಪದಾಧಿಕಾರಿಗಳು ಶುಕ್ರವಾರ ಎಡಿಸಿ ಜಿ.ಅನುರಾಧಾ ಮೂಲಕ ಮನವಿ ಸಲ್ಲಿಸಿದರು.
    ಕಳೆದೆರಡು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳು ಸ್ಥಗಿತವಾಗಿವೆ. ಇಂತಹ ಸ್ಥಿತಿಯಲ್ಲಿ ವರ್ಷಕ್ಕೆ 3 ಸಾವಿರ ರೂ. ಸಹಾಯಧನ ಘೋಷಿಸಿರುವುದು ತಪ್ಪು. ಮುಂದಿನ ಆರು ತಿಂಗಳವರೆಗೆ ಅಥವಾ ರಂಗಚಟುವಟಿಕೆಗಳು ಮರಳುವವರೆಗೂ ಪ್ರತಿ ಕಲಾವಿದನಿಗೆ ಪ್ರತಿ ತಿಂಗಳು 10 ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿದರು.
    ಕಲಾವಿದರನ್ನು ಗುರುತಿಸುವ ಸರಿಯಾದ ಸಮೀಕ್ಷೆಗಳು ಈವರೆಗೆ ನಡೆದಿಲ್ಲ. 35ರ ವಯೋಮಿತಿ ಬದಲಿಸಿ 18 ವರ್ಷ ಮೇಲ್ಪಟ್ಟವರನ್ನೂ ಪರಿಗಣಿಸಬೇಕು. ಸರ್ಕಾರ ಅಕಾಡೆಮಿಗಳ ಮುಖಾಂತರ ಇಂತಹ ಯೋಜನೆ ಕೈಗೊಂಡು ರಾಜ್ಯದಲ್ಲಿನ ಕಲಾವಿದರ ಅಂಕಿಅಂಶಗಳು ಸರ್ಕಾರದ ಬಳಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ಅಕಾಡೆಮಿ ಸದಸ್ಯರ ಆಯ್ಕೆಯಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂದು ಕೋರಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಶೇ.40ರಷ್ಟು ಅನುದಾನ ಯುವ ರಂಗಕರ್ಮಿಗಳು ನಡೆಸುವ ಸಂಸ್ಥೆಗಳಿಗೆ ಮೀಸಲಿಡಬೇಕು. ಈಗ ಆರ್ಥಿಕ ನೆರವಿಗೆ ಅರ್ಜಿ ಹಾಕಲು ನಿಗದಿಪಡಿಸಿದ ಕಡೆಯ ದಿನಾಂಕದ ಗಡುವು ಅಲ್ಪಾವಧಿಯಾಗಿದ್ದು, ಗಡುವು ಮುಂದೂಡಬೇಕು ಎಂದು ಆಗ್ರಹಿಸಿದರು.
    ಯುವ ಕಲಾವಿದರಾದ ನಾಗರಾಜ್, ರಂಗನಾಥ, ವಿಶಾಲ್, ಸೋಮಶೇಖರ್, ಸುಮುಖ್, ಆರ್.ಎಸ್.ಹಾಲಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts