More

    ಕರೊನಾ ಸಾವಿನ ಲೆಕ್ಕವೇ ಪಕ್ಕಾ ಇಲ್ಲ : ಒಂದೇ ದಿನ 15 ಮಂದಿ ಬಲಿ ಮಂಗಳವಾರ 1754 ಜನರಿಗೆ ಸೋಂಕು ದೃಢ

    ತುಮಕೂರು : ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸಾವಿನ ಸುದ್ದಿ ಪ್ರತಿದಿನ ಕಿವಿಗೆ ಅಪ್ಪಳಿಸುತ್ತಿದೆ, ಕರೊನಾಗೆ ಸಾಕಷ್ಟು ಜನ ಬಲಿಯಾಗುತ್ತಿದ್ದು ಜನರಿಗೆ ಸಾವಿನ ಪಕ್ಕಲೆಕ್ಕಾ ಜಿಲ್ಲಾಡಳಿತದಿಂದ ಇನ್ನೂ ಲಭ್ಯವಾಗಿಲ್ಲ.
    ಮಂಗಳವಾರ ಜಿಲ್ಲೆಯಲ್ಲಿ 1754 ಜನರಿಗೆ ಸೋಂಕು ದೃಢವಾಗಿದ್ದು 1721 ಜನರು ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಸೋಂಕು 15 ಜನರನ್ನು ಬಲಿತೆಗೆದುಕೊಂಡಿದೆ.

    ತುರ್ತು ನಿಗಾ ಘಟಕದಲ್ಲಿ 130 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಇದ್ದೇಇದೆ, ಜಿಲ್ಲೆಯಲ್ಲಿ 7 ಜನರಲ್ಲಿ ಬ್ಲಾಕ್ ಂಗಸ್ ಕೂಡ ಪತ್ತೆಯಾಗಿದೆ ಎನ್ನಲಾಗಿದ್ದು ಇದು ಜನರನ್ನು ತೀವ್ರ ತೊಂದರೆಗೆ ತಳ್ಳಲಿದೆ. ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಬೇಕಿದೆ.

    ತುಮಕೂರು ನಗರದಲ್ಲಿ ಸೋಂಕು ಹತೋಟಿಗೆ ಬಂದಿದೆ ಎನ್ನಿಸಿರುವ ನಡುವೆಯೇ ಶಿರಾ, ಗುಬ್ಬಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಸಾವಿನ ಸಂಖ್ಯೆಯನ್ನೂ ಹೆಚ್ಚಿಸಿದೆ, ಪ್ರಸ್ತುತ ಜಿಲ್ಲೆಯಲ್ಲಿ ರೋಗ ಲಕ್ಷಣವಿರುವವರಿಗೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದ್ದು ಗ್ರಾಮಗಳಲ್ಲಿ ಸೋಂಕು ಪತ್ತೆಯಾದವರ ಮನೆಯವರನ್ನು ಓಡಾಡಲು ಬಿಟ್ಟಿರುವುದು ಸೋಂಕು ಉಲ್ಭಣವಾಗಲು ಕಾರಣವಾಗಿದೆ.

    ಮಂಗಳವಾರದ ಸೋಂಕಿತರ ಪೈಕಿ 988 ಪುರುಷರು, 766 ಮಹಿಳೆಯರಿದ್ದಾರೆ, ಐದು ವರ್ಷದೊಳಗಿನ 26 ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 257 ಹಿರಿಯರಿಗೆ ಸೋಂಕು ತಗುಲಿದ್ದು ಎಲ್ಲರಿಗೂ ಚಿಕಿತ್ಸೆ ನೀಡುವ ತುರ್ತಿದೆ. ತಿಪಟೂರು ಕೆ.ಆರ್.ಬಡಾವಣೆಯ 40 ವರ್ಷದ ವ್ಯಕ್ತಿ, ಕುಣಿಗಲ್ ತಾಲೂಕು ಹುಲಿಯೂರುದುರ್ಗದ 34 ವರ್ಷದ ಯುವಕ, ಕೊರಟಗೆರೆ ಪಟ್ಟಣದ 60 ವರ್ಷದ ವೃದ್ಧೆ, ಜಂಪೇನಹಳ್ಳಿಯ 37 ವರ್ಷದ ಯುವಕ, ಯರಪ್ಪನಹಳ್ಳಿಯ 70 ವರ್ಷದ ಮಹಿಳೆ, ಪಾವಗಡ ತಾಲೂಕು ಗುಪುರ್ ತಾಂಡದ 43 ವರ್ಷದ ವ್ಯಕ್ತಿ ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದರು.

    ತುಮಕೂರು ಶಿವಮೂಕಾಂಬಿಕ ನಗರದ 59 ವರ್ಷದ ವ್ಯಕ್ತಿ, ಜಯನಗರದ 60 ವರ್ಷದ ವೃದ್ಧ, ಪಿ.ಜಿ.ಲೇಔಟ್ 52 ವರ್ಷದ ವ್ಯಕ್ತಿ, ಕೆ.ಎಚ್.ಬಿ.ಕಾಲನಿಯ 72 ವರ್ಷದ ವೃದ್ಧ, ಸದಾಶಿವನಗರದ 84 ವರ್ಷದ ವೃದ್ಧ, ಪೂರ್ ಹೌಸ್ ಕಾಲನಿಯ 55 ವರ್ಷದ ವ್ಯಕ್ತಿ, ಗೌರಿಪುರದ 70 ವರ್ಷದ ವೃದ್ಧ ಹಾಗೂ ಮಧುಗಿರಿ ತಾಲೂಕು ಮಿಡಿಗೇಶಿಯ 55 ವರ್ಷದ ವ್ಯಕ್ತಿಯನ್ನು ಕರೊನಾ ಬಲಿ ತಗೆದುಕೊಂಡಿದೆ.

     

    ತುಮಕೂರು : ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ್ಲ ತಾಲೂಕು ಅಧಿಕಾರಿಗಳ ಜತೆ ಆಯೋಜಿಸಿದ್ದ ಸಭೆಯಲ್ಲಿ ಕರೊನಾ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಸೂಚನೆಗಳನ್ನು ನೀಡಿದರು.

    ಸೋಂಕು ಮತ್ತು ಸಂಪರ್ಕಿತರ ಪತ್ತೆ, ಕೋವಿಡ್ ಪರೀಕ್ಷೆ, ಕೋವಿಡ್ ಕೇರ್ ನಿರ್ವಹಣೆ ಮತ್ತು ಸೋಂಕಿತರನ್ನು ಕೇರ್‌ಗೆ ಸ್ಥಳಾಂತರಿಸುವುದು, ತ್ವರಿತ ಚಿಕಿತ್ಸೆ, ಜನಜಾಗೃತಿ ಕಾರ್ಯವನ್ನು ಕಟ್ಟುನಿಟ್ಟಾಗಿ ವಾಡಬೇಕು ಎಂದರು. ಸೋಂಕು ಹೆಚ್ಚಿರುವ ಗ್ರಾಪಂಗಳನ್ನು ಹಾಟ್‌ಸ್ಪಾಟ್ ಹಾಟ್‌ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. 20ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮವನ್ನು ರೆಡ್ ರೆನ್, 10ಕ್ಕಿಂತ ಹೆಚ್ಚು ಪ್ರಕರಣಗಳಿರುವ ಹಳ್ಳಿಗಳನ್ನು ಹಾಟ್‌ಸ್ಪಾಟ್ ಪ್ರದೇಶ ಹಾಗೂ 10ಕ್ಕಿಂತ ಕಡಿಮೆ ಪ್ರಕರಣಗಳಿರುವ ಗ್ರಾಮವನ್ನು ಮೈಕ್ರೋ ಕಂಟೇನ್ಮೆಂಟ್ ಎಂದು ಗುರುತಿಸಿ ಹೆಚ್ಚಿನ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ವಾತನಾಡಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಯಾವುದೇ ನ್ಯೂನತೆ ಇಲ್ಲದಂತೆ ಸೋಂಕಿತರನ್ನು ಆರೈಕೆ ವಾಡಬೇಕು. ಸೋಂಕಿತರನ್ನು ನೋಡಲು ಬಂದವರನ್ನು ಕೋವಿಡ್ ಸೆಂಟರ್ ಒಳಗೆ ಬಿಡಬಾರದು ಎಂದು ಸೂಚಿಸಿದರು. ಜಿಪಂ ಸಿಇಒ ಕೆ.ವಿದ್ಯಾಕುವಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಡಿಎಚ್‌ಒ ಡಾ.ನಾಗೇಂದ್ರಪ್ಪ ಇದ್ದರು.

    ಪ್ರಕರಣಗಳು ಹೆಚ್ಚುತ್ತಿರುವ ಹಳ್ಳಿಗಳಲ್ಲಿ ರ‌್ಯಾಟ್ ಟೆಸ್ಟ್ ವಾಡಬೇಕು. ಸೋಂಕು ಪತ್ತೆಯಾದ ತಕ್ಷಣವೇ ಅವರನ್ನು ಮನವೊಲಿಸಿ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಸೋಂಕಿನ ನಿಯಂತ್ರಣಕ್ಕಾಗಿ ಉತ್ತಮ ಕಾರ್ಯ ನಿರ್ವಹಿಸಿದ ಕಾರ್ಯಪಡೆಯನ್ನು ತಾಲೂಕು ಆಡಳಿತ ಗುರುತಿಸಿ ಸನ್ಮಾನಿಸಬೇಕು.
    ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts