More

    ಯುವಕನ ಹಣೆಗೆ ಬೈಕ್​ ಕೀಯಿಂದ ಇರಿದ ಪೊಲೀಸ್​…ಹೆಲ್ಮೆಟ್​ ಧರಿಸದೆ ಇದ್ರೆ ಇಷ್ಟು ಕ್ರೂರ ಶಿಕ್ಷೆನಾ?

    ನವದೆಹಲಿ: ಹೆಲ್ಮೆಟ್​ ಧರಿಸದ ಯುವಕನೋರ್ವನ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್​ ಇದೀಗ ಅಮಾನತು ಗೊಂಡಿದ್ದಾರೆ.
    ಉತ್ತರಾಖಂಡದ ಉದ್ಧಾಮ್ ನಗರದಲ್ಲಿ ಘಟನೆ ನಡೆದಿದೆ. ಯುವಕನೋರ್ವ ಹೆಲ್ಮೆಟ್​ ಧರಿಸದೆ ಬೈಕ್​​ನಲ್ಲಿ ಬಂದಿದ್ದನ್ನು ನೋಡಿದ ಪೊಲೀಸ್​ ಸಿಬ್ಬಂದಿ ಅವನಿಗೆ ಮೊದಲು ಬೈದಿದ್ದಾರೆ. ಆಗ ಇಬ್ಬರಿಗೂ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಪೊಲೀಸ್​ ಅಧಿಕಾರಿ ಯುವಕನ ಬೈಕ್​​ನ ಕೀಲಿಯನ್ನು ಕಿತ್ತುಕೊಂಡು ಅವನ ಹಣೆಗೆ ಜೋರಾಗಿ ಇರಿದಿದ್ದಾರೆ. ಇದರಿಂದ ಯುವಕನ ಹಣೆ ಮೇಲೆ ದೊಡ್ಡ ಗಾಯವೇ ಆಗಿ ರಕ್ತ ಸುರಿದಿದೆ. ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಈ ಯುವಕ ಮತ್ತು ಅವನ ಸ್ನೇಹಿತ ರುದ್ರಪುರ ಮಾರ್ಗವಾಗಿ ಬೈಕ್​ನಲ್ಲಿ ಹೋಗುತ್ತಿದ್ದರು. ಅಲ್ಲೇ ಒಂದು ಕಡೆ ಮೂವರು ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಸದ್ಯ ಕೀಲಿಯಿಂದ ಯುವಕನ ಹಣೆಗೆ ಇರಿದ ಪೊಲೀಸ್​​ನನ್ನು ಅಮಾನತು ಮಾಡಲಾಗಿದೆ ಎಂದು ಸ್ಥಳೀಯ ಎಸ್​ಪಿ ತಿಳಿಸಿದ್ದಾರೆ.  ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣವನ್ನು ತನಿಖೆ ಮಾಡುವಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಆದೇಶ ನೀಡಿದ್ದಾರೆ. ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಪ್ರಚೋದನೆ, ದೂರು ದಾಖಲಿಸಿದ ರಜಪೂತ್​ ತಂದೆ

    ಯುವಕ ಸ್ಥಳೀಯನೇ ಆಗಿದ್ದು, ಅಲ್ಲಿನ ಜನರು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾರೆ. ಸ್ಥಳೀಯ ಎಂಎಲ್​ಎ ರಾಜಕುಮಾರ್ ಥುಕ್ರಾಲ್​ ಅವರು ಭೇಟಿ ನೀಡಿ, ಅವರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    18 ಜಿಲ್ಲೆಗಳಲ್ಲಿ ನೂರು ದಾಟಿದ ಹೊಸ ಸೋಂಕಿತರ ಪ್ರಮಾಣ; ರಾಜ್ಯದಲ್ಲಿ ಮುಂದುವರಿದ ಕರೊನಾ ಏರುಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts