More

    ಮಾಸ್ಕ್​ ಧರಿಸದವರಿಗೆ ರೈಲ್ವೆ ಟ್ರ್ಯಾಕ್ ಬಳಿ ಉರುಳುವ ಶಿಕ್ಷೆ !

    ಲಕ್ನೋ: ಮಾಸ್ಕ್​ ಧರಿಸದೆ ಮನೆಯಿಂದ ಹೊರ ಬಂದಿದ್ದ ಇಬ್ಬರಿಗೆ ಪೊಲೀಸರೊಬ್ಬರು ರೈಲ್ವೆ ಹಳಿಯ ಪಕ್ಕದ ರಸ್ತೆಯಲ್ಲಿ ಉರುಳು ಸೇವೆ ಮಾಡಿಸಿ ಬಿಸಿ ಮುಟ್ಟಿಸಿದ್ದರು. ಈ ದೃಶ್ಯ ವೈರಲ್​ ಆಗುತ್ತಿದ್ದಂತೆ, ಎಚ್ಚೆತ್ತ ಮೇಲಧಿಕಾರಿಗಳು ಆ ಪೊಲೀಸ್​ನನ್ನು ಅಮಾನತು ಮಾಡಿದ್ದಾರೆ.

    ಕರೊನಾ ಭೀತಿ ಇದ್ದರೂ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕೊಟ್ವಾಲಿ ಪ್ರದೇಶದ ಮಂಗಳವಾರ ವ್ಯಕ್ತಿಗಳಿಬ್ಬರು ಮಾಸ್ಕ್​ ಹಾಕದೆ ಸಾರ್ವಜನಿಕವಾಗಿ ಓಡಾಡುತ್ತಿದ್ದರು. ಅವರನ್ನು ತಡೆದು ಪ್ರಶ್ನಿಸಿದ ಕೀ ಹೈಲೈಟ್ಸಾ ಠಾಣೆಯ ಪೊಲೀಸರೊಬ್ಬರು, ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುವ ಭರದಲ್ಲಿ ರೈಲ್ವೆ ಕ್ರಾಸಿಂಗ್​ ಪಕ್ಕದ ರಸ್ತೆಯಲ್ಲಿ ಸ್ವಲ್ಪ ದೂರ ಉರುಳುವ ಶಿಕ್ಷೆ ವಿಧಿಸಿದ್ದಾರೆ. ಪೊಲೀಸ್​ ಜತೆಯಲ್ಲೇ ಇದ್ದ ಹೋಂಗಾರ್ಡ್​ ಕೂಡ ಆ ವ್ಯಕ್ತಿಗಳಿಗೆ ಉರುಳುವಂತೆ ಒತ್ತಾಯಿಸಿದ್ದರು.

    ಇದನ್ನೂ ಓದಿರಿ ಯುಪಿಎಸ್​​​ಸಿ : ಪೂರ್ವಭಾವಿ ಪರೀಕ್ಷೆ ದಿನಾಂಕ ಪ್ರಕಟಿಸಲು ನಿರ್ಧಾರ

    ಮಾಸ್ಕ್​ ಧರಿಸುವಲ್ಲಿ ನಿರ್ಲಕ್ಷ್ಯ ತೋರಿ ಪೊಲೀಸ್​ ಕೋಪಕ್ಕೆ ಗುರಿಯಾದ ವ್ಯಕ್ತಿಗಳಿಬ್ಬರು ರಸ್ತೆಯಲ್ಲಿ ಉರುಳುವಾಗ ಪಕ್ಕದಲ್ಲೇ ಇದ್ದ ರೈಲ್ವೆ ಹಳಿ ಮೇಲೆ ರೈಲು ಹಾದುಹೋಗಿದೆ. ಆ ವೇಳೆ ಬಿಸಿಲು ಕೂಡ ಹೆಚ್ಚಾಗಿತ್ತು. ಆ ವ್ಯಕ್ತಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಉರುಳುವಂತೆ ಪಕ್ಕದಲ್ಲೇ ನಿಂತು ಹೋಂ ಗಾರ್ಡ್ ನಿರ್ದೇಶಿಸುತ್ತಿದ್ದ. ಈ ವೇಳೆ ಉಳುರುವುದನ್ನು ನಿಲ್ಲಿಸಿದ ಒಬ್ಬನ ಮೇಲೆ ಹೋಂ ಗಾರ್ಡ್ ಹಲ್ಲೆ ಮಾಡಿದ್ದಾನೆ. ಇದೆಲ್ಲದರ ವಿಡಿಯೋ ವೈರಲ್​ ಆಗಿದೆ. ರೈಲ್ವೆ ಹಳಿ ಪಕ್ಕದಲ್ಲೇ ಉರುಳುವಂತೆ ಮಾಡಿದ್ದು ಅಪಾಯಕಾರಿ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

    ಇದು ಅರಿವಿಗೆ ಬರುತ್ತಿದ್ದಂತೆ ಎಚ್ಚತ್ತ ಹಾಪುರ್ ಪೊಲೀಸ್​ ಅಧೀಕ್ಷಕರು, ರೈಲ್ವೆ ಹಳಿ ಪಕ್ಕದಲ್ಲಿ ಉರುಳುವಂತೆ ಮಾಡಿ ಅಜಾಗರೂಕತೆಯಿಂದ ವರ್ತಿಸಿದ ಪೊಲೀಸ್​ಗೆ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿರಿ ಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts