More

    ಬಿಜೆಪಿ ಜತೆ ಜೆಡಿಎಸ್ ಶಾಶ್ವತ ಮೈತ್ರಿ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ನೆಲ, ಜಲ, ಭಾಷೆಯ ವಿಚಾರದಲ್ಲಿ ಸದಾ ಜನರ ಪರವಾಗಿ ಕೆಲಸ ಮಾಡುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಅವರೊಂದಿಗೆ ಕೈ ಜೋಡಿಸಲು ತೀರ್ಮಾನಿಸಿದ್ದಾರೆ. ಮೋದಿ ಅವರಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅರಿತಿರುವ ಈ ನಾಯಕರು ಬಿಜೆಪಿ ಜತೆ ಶಾಶ್ವತ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
    ದೇವನಹಳ್ಳಿಯಲ್ಲಿ ಜೆಡಿಎಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಸೋಮವಾರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದರು. ಈ ಮೈತ್ರಿಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿದ್ದೇವೆ. ಬಿಜೆಪಿ-ಜೆಡಿಎಸ್ ಗುರುತಾದ ಕೇಸರಿ ಮತ್ತು ಹಸಿರು ದೇಶದ ಮತ್ತು ರಾಜ್ಯದ ಉಸಿರಾಗಿದೆ ಎಂದರು.
    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತಕ್ಕಾಗಿ ಒಂದಾಗಿ ಕೈ ಜೋಡಿಸಿದ್ದಾರೆ. ಅದೇ ರೀತಿ ವಿಕಸಿತ ಚಿಕ್ಕಬಳ್ಳಾಪುರಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂಬ ಸಂದೇಶ ರವಾನೆಯಾಗಿದೆ. ಅದರಂತೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಭೆಗಳು ನಡೆಯುತ್ತಿದ್ದು, ಎಲ್ಲರೂ ಒಂದಾಗಿ ಕೆಲಸ ಮಾಡುವ ಪಣ ತೊಟ್ಟಿದ್ದಾರೆ ಎಂದರು.
    ಕಾಂಗ್ರೆಸ್ ಕಿತ್ತುಕೊಳ್ಳುವ ಸರ್ಕಾರ:
    ರಾಜ್ಯದ ಕಾಂಗ್ರೆಸ್ ನೀಡುವ ಗ್ಯಾರಂಟಿಗೂ ಕೇಂದ್ರ ಸರ್ಕಾರ ನೀಡುವ ಗ್ಯಾರಂಟಿಗೂ ವ್ಯತ್ಯಾಸವಿದೆ. ಕಾಂಗ್ರೆಸ್ ಎಂದರೆ ಕಿತ್ತುಕೊಳ್ಳುವ ಸರ್ಕಾರ ಎಂದು ಆರೋಪಿಸಿದ ಸುಧಾಕರ್ ಬಿಜೆಪಿ ಸರ್ಕಾರ ನೀಡಿದ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ದಲಿತರ 11 ಸಾವಿರ ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಮೋದಿ ಮಹಿಳೆಯರಿಗೆ 11 ಕೋಟಿ ಶೌಚಗೃಹ, ಉಚಿತ ಅನಿಲ ಸಿಲಿಂಡರ್, ರೈತರಿಗಾಗಿ ಫಸಲ್ ಬಿಮಾ ಯೋಜನೆ ನೀಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಎಂದರೆ ಹಬ್ಬಕ್ಕೆ ಮಾತ್ರ ಊಟ ನೀಡುವ ಗ್ಯಾರಂಟಿ. ಆದರೆ ಮೋದಿ ಗ್ಯಾರಂಟಿ ಎಂದರೆ ಬದುಕನ್ನು ಕಟ್ಟಿಕೊಡುವ ಗ್ಯಾರಂಟಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts