More

    ಸಿಟಿ ಸಹಕಾರ ಬ್ಯಾಂಕಿಗೆ 85 ಲಕ್ಷ ರೂ. ನಿವ್ವಳ ಲಾಭ

    ಶಿವಮೊಗ್ಗ: ನಗರದಲ್ಲಿ 110 ವರ್ಷಗಳ ಹಿಂದೆ ಸ್ಥಾಪನೆಯಾದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಗಣನೀಯ ಪ್ರಗತಿ ಸಾಧನೆ ಮಾಡಿದ್ದು, ಪ್ರಸ್ತುತ 85 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಂ.ಉಮಾಶಂಕರ ಉಪಾಧ್ಯ ತಿಳಿಸಿದರು.
    3.45 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 85.32 ಲಕ್ಷ ರೂ. ಠೇವಣಿಯಿದೆ. 105 ಕೋಟಿ ರೂ. ದುಡಿಯುವ ಬಂಡವಾಳವಿದ್ದು, 32.48 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 8,338 ಸದಸ್ಯರಿದ್ದಾರೆ. ಎನ್‌ಪಿಎ ಪ್ರಮಾಣ ಶೇ.6.95 ಇದೆ. ನೆಫ್ಟ್, ಆರ್‌ಟಿಜಿಎಸ್, ಸೇಫ್ ಡಿಪಾಜಿಟ್ ಲಾಕರ್, ಇ-ಸ್ಟಾಂಪಿಂಗ್ ಸೌಲಭ್ಯವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಕೋಟೆ ರಸ್ತೆಯಲ್ಲಿ ಮುಖ್ಯ ಕಚೇರಿಯಿದ್ದು, ಎಎ ವೃತ್ತದಲ್ಲಿ ಶಾಖಾ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಎಲ್‌ಎಲ್‌ಆರ್ ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಿಸಲು ನಿವೇಶನ ಖರೀದಿಸಿದ್ದು, ನಿರ್ಮಾಣಕ್ಕೆ ನಗರ ಪಾಲಿಕೆಯಿಂದ ಪರವಾನಗಿ ದೊರೆತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಆ.7ರ ಬೆಳಗ್ಗೆ 11ಕ್ಕೆ ಮಾರಿಕಾಂಬ ದೇವಸ್ಥಾನದ ಸಮುದಾಯ ಭವನದಲ್ಲಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯನ್ನು ಏರ್ಪಡಿಸಲಾಗಿದೆ. ಸದಸ್ಯರು ಗುರುತಿನ ಚೀಟಿಯೊಂದಿಗೆ ಸಭೆಗೆ ಹಾಜರಾಗಬೇಕು. ಐದು ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ ಯಾವುದೇ ಎರಡು ಸಭೆಗೆ ಸದಸ್ಯರು ಹಾಜರಾಗುವುದು ಕಡ್ಡಾಯವಾಗಿದೆ ಎಂದು ಹೇಳಿದರು.
    ಸಾಲ ವಿತರಣೆ ಸ್ಥಗಿತ: ಬ್ಯಾಂಕ್ ಆರ್‌ಬಿಐ ನಿಯಮಾವಳಿಗಳ ಅನ್ವಯ ಕಾರ್ಯನಿರ್ವಹಿಸಬೇಕಿದ್ದು, ಆರ್‌ಬಿಐ ಮಿತಿಯಂತೆ ಈಗಾಗಲೇ ಒಂದು ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಹೀಗಾಗಿ ಸದ್ಯಕ್ಕೆ ಸಾಲ ವಿತರಣೆ ಸ್ಥಗಿತಗೊಳಿಸಲಾಗಿದೆ. ಸದಸ್ಯರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಬ್ಯಾಂಕ್ ಸದೃಢವಾಗಿದೆ ಎಂದು ಬ್ಯಾಂಕ್‌ನ ನಿರ್ದೇಶಕ ಎಸ್.ಕೆ.ಮರಿಯಪ್ಪ ತಿಳಿಸಿದರು. ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಕೆ.ರಂಗನಾಥ್, ಎಂ.ರಾಕೇಶ್, ರೇಖಾ ಚಂದ್ರಶೇಖರ್, ಎಸ್.ಕೆ.ರಘುಕೃಷ್ಣ ಸಿಂಗ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts