More

    ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ: ಸರ್ಕಾರದ ವಿರುದ್ಧ ಕೆಂಪಣ್ಣ ಕಿಡಿ

    ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇದೀಗ ಕಾಂಗ್ರೆಸ್​ ವಿರುದ್ಧವೂ ಕಿರಿಕಾರಿದ್ದು, ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದಿದ್ದಾರೆ.

    ನಮಗೂ ಕಂಟ್ರಾಕ್ಟರ್ ಭಾಗ್ಯ ಕೊಡಿ 

    ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಂಪಣ್ಣ, 25 ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಈ ಬಗ್ಗೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಹಾಗು ಸಚಿವರನ್ನು ಭೇಟಿ ಮಾಡುತ್ತೇವೆ. ಮುಂದೆ ಕಾದು ನೋಡಿ ಮೀಟಿಂಗ್ ಕರೆದು ತಿರ್ಮಾನ ಮಾಡುತ್ತೇವೆ. ಎಷ್ಟೋ ಭಾಗ್ಯಗಳನ್ನು ಸರ್ಕಾರ ಕೊಟ್ಟಿದೆ. ನಮಗೂ ಕಂಟ್ರಾಕ್ಟರ್ ಭಾಗ್ಯ ಕೊಡಿ ಎಂದು ಕೇಳಿದರು.

    ಇದನ್ನೂ ಓದಿ: ತಂಗಿ ಕಾಣೆಯಾಗಿದ್ದಾಳೆಂದು ರಾತ್ರಿ ದೂರು ನೀಡಿದ ಅಕ್ಕ: ಮುಂಜಾನೆ ಎದ್ದು ನೋಡಿದಾಗ ಕಾದಿತ್ತು ಬಿಗ್​ ಶಾಕ್​

    ಸಾಯುವ ಪರಿಸ್ಥಿತಿ ಬಂದಿದೆ

    ಈಗಾಗಲೇ ಏಳು ತಿಂಗಳಿಂದ ಬಾಕಿ ಬರಬೇಕು. ಕೆಲವಷ್ಟು ಹಣ ಬಿಡುಗಡೆ ಆಗಿದೆ. ಆದರೆ, ನೂರು ಕೋಟಿ ಸಾಲಲ್ಲ ಎಂದು ಸಿಎಂ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದ್ರು. ಅದಕ್ಕೆ ಮೂರು ವರ್ಷದಿಂದ ಬಿಡುಗಡೆಯಾಗಿಲ್ಲ ಎಂದು ಹೇಳಿದೆವು. ಅದಕ್ಕೆ ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ ಎಂದರು.

    ವಿಪಕ್ಷ ನಾಯಕ ಕರೆಯಲಿ ಹೋಗ್ತೀನಿ

    ಯಾವುದೇ ಕಂಟ್ರಾಕ್ಟರ್ ಇಷ್ಟು ಪರ್ಸೆಂಟೇಜ್ ಕೊಡಿ ಅಂತ ಕೇಳುತ್ತಿದ್ದಾರೆ ಎಂದು ನನ್ನ ಬಳಿ ದೂರು ಹೇಳಿಲ್ಲ. ಆದರೆ ಯಾರೋ ಕೊಟ್ಟಿರಬಹುದು. ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು. ನಾವು ಮೊದಲು ಆರೋಪ ಮಾಡಿದಾಗ ಸಿಎಂ ಯಡಿಯೂರಪ್ಪಗೆ ಪತ್ರ ಕೊಟ್ಟೆವು. ಬಳಿಕ ಪ್ರಧಾನಿಗೂ ಪತ್ರ ಕೊಟ್ಟೆವು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೂ ಪತ್ರ ಕೊಟ್ಟೆವು. ಕುಮಾರಸ್ವಾಮಿ ನಮ್ಮ ಕೇಸ್ ತಗೋಳಲಿಲ್ಲ. ಸಿದ್ದರಾಮಯ್ಯ ಕೂಡ ಕೇಸ್ ತೆಗೆದುಕೊಳ್ಳಲಿಲ್ಲ. ವಿಪಕ್ಷದ ನಾಯಕನಾಗಿ ಸಿದ್ದರಾಮಯ್ಯ ನನ್ನನ್ನು ಕರೆದರು. ಅದಕ್ಕೆ ಹೋದೆ. ವಿಪಕ್ಷ ನಾಯಕ ಕರೆದ್ರೆ ಹೋಗಲ್ಲ ಅನ್ನೋದಕ್ಕೆ ಆಗಲ್ಲ. ಈಗ ಬಿಜೆಪಿಯ ವಿಪಕ್ಷ ನಾಯಕ ಕರೆಯಲಿ ಹೋಗ್ತೀನಿ. ಈ ಹಿಂದೆ ಬೊಮ್ಮಾಯಿ ಸಿಎಂ ಆಗಿದ್ದಾಗ ನಾವು ಪತ್ರ ಕೊಟ್ಟಾಗ ಅದನ್ನು ಜೇಬಿನಲ್ಲಿ ಇಟ್ಟುಕೊಂಡರು ಎಂದು ಆರೋಪಿಸಿದರು.

    ದಾಖಲೆ ನೀಡುತ್ತೇವೆ

    ನಾವು ಈ ಹಿಂದೆ 40% ಭ್ರಷ್ಟಾಚಾರ ನಡೀತಿದೆ ಅಂತ ಆರೋಪ ಮಾಡಿದ್ದೆವು. ಅದಕ್ಕೆ ಪೂರಕವಾದ ದಾಖಲೆಗಳು ನಮ್ಮ ಬಳಿ ಇದೆ. ಒನ್ ಮ್ಯಾನ್ ಕಮಿಷನ್ ಬಳಿ ಹೋಗಿ ದಾಖಲೆ ಕೊಡ್ತೀನಿ. 40 ಪರ್ಸೆಂಟ್ ಕಮಿಷನ್ ಬಗ್ಗೆ ಸರ್ಕಾರ ನ್ಯಾಯಾಂಗ ತನಿಖೆ ಮಾಡಲಿದೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆಗ ನಾವು ದಾಖಲೆ ನೀಡುತ್ತೇವೆ ಎಂದರು.

    ಅವರ ಪರವಾಗಿ ನಿಲ್ಲುತ್ತೇವೆ 

    ಎಲ್ಲಾ ಕಾಮಗಾರಿ ತನಿಖೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಗ್ಯಾರಂಟಿ ಪೀರಿಯಡ್ ಇರೋದು ಒಂದು ವರ್ಷ. ಮೂರು ವರ್ಷವಾದ್ರೂ ಹಣ ಬಿಡುಗಡೆ ಮಾಡಿಲ್ಲ. ನಾವು ಕಾಂಗ್ರೆಸ್ ಸರ್ಕಾರ ಹಾಕಿರೋ ಕಂಡೀಷನ್ ವಿರೋಧ ಮಾಡ್ತೀವಿ. ಹಣ ಬಿಡುಗಡೆ ಮಾಡುವಾಗ ತನಿಖೆ ಮಾಡ್ತಾರೆ. ಚೀಫ್ ಕಮೀಷನರ್ ಮಾಡೋ ನೀತಿಗೆ ನಮ್ಮ ವಿರೋಧ ಇದೆ. ಗುತ್ತಿಗೆದಾರರು ಸರಿಯಾಗಿದ್ದು, ನಮ್ಮ ಬಳಿ ಬಂದು ಮನವಿ ಮಾಡಿಕೊಂಡ್ರೆ ಅವರ ಪರವಾಗಿ ನಿಲ್ಲುತ್ತೇವೆ ಎಂದರು.

    ಇದನ್ನೂ ಓದಿ: ಸಿಎಂ ಗುಡುಗು; ನಾವು ಕಮಿಷನ್ ಹಿಂದೆ ಬಿದ್ದಿಲ್ಲ, ಕಮಿಷನ್ ಹಗರಣದ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ!

    ಭೇಟಿಯಾಗಲಿದ್ದೇವೆ

    ಡಿಕೆಶಿ ನಡೆಗೆ ಅಸಮಾಧಾನ ಹೊರಹಾಕಿದರ ಕೆಂಪಣ್ಣ, ಕಾಮಗಾರಿಗಳ ತನಿಖೆಗೆ ಎಸ್ ಐಟಿ ತನಿಖೆ ಬೇಡ ಎಂದರು. ಡಿಕೆಶಿ ಸುಳ್ಳು ಹೇಳ್ತಾರೋ, ಸತ್ಯ ಹೇಳ್ತಾರೋ ಗೊತ್ತಿಲ್ಲ. ನಾಲ್ಕು ವರ್ಷದ ಹಿಂದೆ ಕೆಲಸ ಆಗಿರೋದು. ಆ ನಂತರ ಬಿಲ್ ಸಬ್ಮಿಟ್ ಆಗಿರೋದು. ನಮಗೆ ಒಂದು ವರ್ಷದೊಳಗೆ ಹಣ ಬಿಡುಗಡೆ ಆಗಬೇಕು. ಬಿಬಿಎಂಪಿ ಬಗ್ಗೆ ನಾವು ಆಗ ಮಾತಾಡಿರಲಿಲ್ಲ. ಎಲ್ಲಾ ಇಲಾಖೆ ಬಗ್ಗೆ ಮಾತಾಡಿದ್ದೆವು. ಬಿಬಿಎಂಪಿಯಲ್ಲಿ ಕಾಂಟ್ರಾಕ್ಟರ್ಸ್‌ ಎಲ್ಲಾ ಕೆಲಸ ನಿಲ್ಲಿಸಿದ್ದೇವೆ. ನಾವು ಮತ್ತೆ ಸಿಎಂ ಹಾಗೂ ಡಿಸಿಎಂ ಭೇಟಿಯಾಗ್ತೀವಿ. ಹಣ ಬಿಡುಗಡೆ ಮಾಡಿ, ಇಲ್ಲದಿದ್ರೆ ಕಾಮಗಾರಿ ಮಾಡಲ್ಲ ಅಂತ ಮನವಿ ಮಾಡಲಿದ್ದೇವೆ‌. ಇನ್ನೊಂದು ವಾರದಲ್ಲಿ ಇಬ್ಬರನ್ನೂ ಭೇಟಿಯಾಗಲಿದ್ದೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ‘ನನ್ನ ಮುದ್ದು ಬೊಮ್ಮ ಆ ಸುಂದರ ನಗು ಹಾಗೆ ಇರಲಿ…’, ಜೈಲಿನಿಂದಲೇ ಜಾಕ್ವೆಲಿನ್‌ಗೆ ವಿಶ್ ಮಾಡಿದ ಸುಕೇಶ್

    ತಂಗಿ ಕಾಣೆಯಾಗಿದ್ದಾಳೆಂದು ರಾತ್ರಿ ದೂರು ನೀಡಿದ ಅಕ್ಕ: ಮುಂಜಾನೆ ಎದ್ದು ನೋಡಿದಾಗ ಕಾದಿತ್ತು ಬಿಗ್​ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts