More

    ಮುಂದುವರಿದ ಕಸ ತೆರವು ಕಾರ್ಯ

    ಹೊಳೆನರಸೀಪುರ: ಪಟ್ಟಣದಲ್ಲಿ ಭಾನುವಾರ ನಡೆದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ರಥ ಸಾಗಿದ ಮಾರ್ಗದಲ್ಲಿ ಸಂಗ್ರಹವಾಗಿದ್ದ ಕಸವನ್ನು ತೆರವು ಮಾಡುವ ಕಾರ್ಯ ಮಂಗಳವಾರವೂ ಮುಂದುವರಿದಿತ್ತು.

    ಹಣ್ಣು-ದವನ, ಪ್ರಸಾದ ತಿಂದು ಅಲ್ಲಲ್ಲಿ ಬಿಸಾಡಿದ್ದ ಅಡಕೆ ಪೊಟ್ಟಣಗಳು, ಪ್ಲಾಸ್ಟಿಕ್ ಕವರ್‌ಗಳು, ರಟ್ಟಿನ ಪೆಟ್ಟಿಗೆಗಳು, ಎಳನೀರು ಬುರುಡೆ, ಕಬ್ಬಿನ ಸಿಪ್ಪೆಯನ್ನು ತೆರವು ಮಾಡುವ ಕಾರ್ಯ ಸೋಮವಾರ ಮುಂಜಾನೆಯಿಂದಲೇ ಆರಂಭವಾಗಿತ್ತು. ಇದೀಗ ಈ ಕಾರ್ಯವನ್ನು ಪೌರಕಾರ್ಮಿಕರು ಎರಡನೇ ದಿನವೂ ಮುಂದುವರಿಸಿದ್ದರು.

    ಪ್ರತಿ ದಿನ ಪಟ್ಟಣದಲ್ಲಿ 3.5 ಟನ್ ಕಸ ಸಂಗ್ರಹವಾಗುತ್ತದೆ. ಜಾತ್ರೆ ಹಿನ್ನೆಲೆಯಲ್ಲಿ ಒಟ್ಟು 10 ಟನ್ ಕಸ ಸಂಗ್ರಹವಾಗಿದ್ದು, ಪೌರಕಾರ್ಮಿಕರು ನಿತ್ಯದ ಕೆಲಸದೊಂದಿಗೆ ಹೆಚ್ಚುವರಿ ಕೆಲಸವನ್ನೂ ಶ್ರದ್ಧೆಯಿಂದ ಮಾಡಿದ್ದಾರೆ ಎಂದು ಮುಖ್ಯಾಧಿಕಾರಿ ಮಹೇಂದ್ರ ತಿಳಿಸಿದರು.

    ಸ್ವಚ್ಛತಾ ಕಾರ್ಯ ಮೇಲ್ವಿಚಾರಕರಾದ ವೆಂಕಟೇಶ್, ಮಾದಯ್ಯ, ಪ್ರಭಾರಿ ಮೇಲ್ವಿಚಾರಕ ಚಲುವ ಸೇರಿದಂತೆ ಹಲವರು ಈ ಕಾರ್ಯದಲ್ಲಿ ತೊಡಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts