More

    ಕಂಟೇನ್ಮೆಂಟ್ ಪ್ರದೇಶದ ಜನರಿಗೆ ದಾನಿಗಳಿಂದ ಆಹಾರ ವ್ಯವಸ್ಥೆ ಶೀಘ್ರ, ಹೊಸಪೇಟೆ ಎಸಿ ತನ್ವೀರ್ ಶೇಕ್ ಆಸಿಫ್ ಭರವಸೆ

    ಕಂಪ್ಲಿ: ಕರೊನಾ ಸೋಂಕಿತ ಕಾಣಿಸಿಕೊಂಡ ಕಂಟೇನ್ಮೆಂಟ್ ಪ್ರದೇಶ ಮಾರುತಿನಗರದ ಜನತೆಗೆ ದಾನಿಗಳ ಸಹಾಯದಿಂದ ಊಟ, ಉಪಾಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೊಸಪೇಟೆ ಎಸಿ ತನ್ವೀರ್ ಶೇಕ್ ಆಸಿಫ್ ಹೇಳಿದರು.

    ಪಟ್ಟಣದ ಮಾರುತಿನಗರಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಕರೊನಾ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಆರು ಜನರ ವರದಿ ನೆಗೆಟಿವ್ ಬಂದಿದೆ. ದಾನಿಗಳೊಬ್ಬರು ಕಂಟೇನ್ಮೆಂಟ್ ಪ್ರದೇಶದ ಜನರಿಗೆ ಈಗಾಗಲೇ ಪಡಿತರ, ತರಕಾರಿ ವಿತರಿಸಿದ್ದಾರೆ. ಸರ್ಕಾರದಿಂದ ಉಚಿತವಾಗಿ ವಿತರಿಸಲು ಅವಕಾಶಗಳಿಲ್ಲ. ದಾನಿಗಳ ನೆರವಿಂದ ಅಗತ್ಯ ಪಡಿತರ ಒದಗಿಸಲಾಗುವುದು. ಈಗಾಗಲೇ ಹಾಲಿನ ಪ್ಯಾಕೇಟ್ ಒದಗಿಸಲಾಗಿದೆ. ಕಂಟೇನ್ಮೆಂಟ್ ಹಾಗೂ ಬಫರ್ ಜೋನ್‌ನಲ್ಲಿನ ಜನತೆಯ ಆರೋಗ್ಯದ ಮೇಲೂ ನಿಗಾವಹಿಸಿದ್ದು, ಕೆಮ್ಮು, ನೆಗಡಿ, ಶೀತ, ಜ್ವರ ಕಾಣಿಸಿಕೊಂಡಲ್ಲಿ ಕೂಡಲೇ ಕೋವಿಡ್ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಬೇಕು. ಅಲ್ಲದೆ, ಹೆಲ್ತ್ ವಾಚ್ ಆ್ಯಪ್ ಮೂಲಕವೂ ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಅಗತ್ಯವಿದ್ದರಿಗೆ ಚಿಕಿತ್ಸೆ ನೀಡಲಾಗುವುದು ಎಂದರು.

    ಪಟ್ಟಣದಲ್ಲಿ ಎಲ್ಲ ಅಂಗಡಿಗಳು ತೆರೆದಿದ್ದು ಕರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸಿದಲ್ಲಿ ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳು ದಂಡ ವಿಧಿಸಲಿದ್ದು, ಪದೇಪದೆ ನಡೆದರೆ ಲೈಸೆನ್ಸ್ ರದ್ದುಗೊಳಿಸಲಾಗುವುದು. ಈ ಹಿಂದೆ ತೀರ್ಮಾನಿಸಿದಂತೆ ಪುರಸಭೆ ಆಡಳಿತ ಮನೆ, ನಲ್ಲಿ ತೆರಿಗೆ ಹೆಚ್ಚಿಸಿದೆ. ಈ ಕುರಿತು ಡಿಸಿಯೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts