ಗೋಕಾಕ: ಸ್ವಾತಂತ್ರೃ ಮತ್ತು ಸಂವಿಧಾನದ ಆಶಯವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದ್ದಾರೆ.
ಭಾನುವಾರ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಬಗ್ಗೆ ಗೌರವ ಹಾಗೂ ಜನರ ಕಷ್ಟ-ನೋವು ಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿರಿಯ ನ್ಯಾಯವಾದಿ ಬಿ.ಆರ್. ಕೊಪ್ಪ, ವೈ.ಬಿ.ನಾಯಿಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ರೋಟರಿ ಸದಸ್ಯ ಸೋಮಶೇಖರ ಮಗದುಮ್ಮ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಅಶೋಕ ಪೂಜಾರಿ, ಎಸ್.ಎ. ಕೋತವಾಲ, ಜ್ಯೋತಿಬಾ, ಡಿಎಸ್‌ಸ್ಪಿ ಡಿ.ಟಿ.ಪ್ರಭು, ಬಿಇಒ ಜಿ.ಬಿ.ಬಳಗಾರ ಇದ್ದರು.
ಜೈ ಕರ್ನಾಟಕ ಸಂಘದಲ್ಲಿ: ಗೋಕಾಕ ನಗರದ ಅಂಬಿಗೇರ ಗಲ್ಲಿಯ ಜೈ ಕರ್ನಾಟಕ ಸಂಘದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿದರು. ಬಾಳಪ್ಪ ಅಂಬಿ, ಸಿದ್ದಪ್ಪ ಮುತ್ನಾಳ, ಶ್ರೀಶೈಲ ಪೂಜಾರಿ, ಬಸವರಾಜ ಹಿರೇಮಠ, ರಾಜು ನಂದಗಾವಿ, ತುಕ್ಕಪ್ಪ ಮುತ್ನಾಳ ಉಪಸ್ಥಿತರಿದ್ದರು.
ಕಟಕೋಳ ವರದಿ : ಪ್ರತಿಯೊಬ್ಬರೂ ಸಂವಿಧಾನಕ್ಕೆ ಅಪಚಾರವಾಗದಂತೆ ನಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಸ್ಪೋಕೋ ಸಂಸ್ಥೆ ನಿರ್ದೇಶಕ ಎಂ.ಎಸ್.ಮನೋಳಿ ಕರೆ ನೀಡಿದ್ದಾರೆ. ಸಮೀಪದ ಚಂದರಗಿಯ ಕ್ರೀಡಾ ವಸತಿ ಪಿಯು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ದೇಶ ಭಕ್ತಿ ಬೆಳೆಸಿಕೊಳ್ಳಬೇಕು ಎಂದರು. ಸ್ಪೋಕೋ ಸಂಸ್ಥೆ ನಿರ್ದೇಶಕರಾದ ಎಸ್.ಆರ್.ನವರಕ್ಕಿ, ಎಸ್.ಬಿ.ಯರಗಣವಿ, ಉದಯಕುಮಾರ ಸೋಮನಟ್ಟಿ, ಪ್ರಾಚಾರ್ಯರಾದ ಎ.ಎನ್.ಮೋದಗಿ ಮತ್ತು ರಜನೀಶ ಗೌತಮ, ಎಸ್.ಬಿ.ಇಬ್ರಾಹಿಂಪುರ ಇತರರು ಇದ್ದರು.
ಕೋ.ಶಿವಾಪುರ ವರದಿ: ಗ್ರಾಮದ ಗ್ರಾಪಂ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪಿಡಿಒ ಈರಪ್ಪ ಹವಳಪ್ಪನವರ, ಗ್ರಾಪಂ ಅಧ್ಯಕ್ಷ ಭೀಮಪ್ಪ ದಾಸಯ್ಯಗೋಳ, ಗ್ರಾಪಂ ಉಪಾಧ್ಯಕ್ಷೆ ದಾಕ್ಷಾಯಣಿ ತೋಟಗಿ, ಗ್ರಾಮ ಲೆಕ್ಕಾಧಿಕಾರಿ ಮಲ್ಲಮ್ಮ ಬಾಳಗೊಣ್ಣವರ, ಗ್ರಾಪಂ ಕಾರ್ಯದರ್ಶಿ ಎ.ಎಸ್.ಮುಲ್ಲಾ, ತಿಪ್ಪವ್ವ ಕುಂದರಗಿ, ಮುಕ್ತುಂಬಿ ಮುಘಟಖಾನ್, ಮುತ್ತೆಪ್ಪ ಚಂದರಗಿ ಇದ್ದರು.
ಸಮತಾ ಸೈನಿಕ ದಳದಲ್ಲಿ
ಘಟಪ್ರಭಾದ ಸಮತಾ ಸೈನಿಕದಳದ ಕಚೇರಿಯಲ್ಲಿ ಭಾನುವಾರ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು. ಬಸವರಾಜ ಹುದ್ದಾರ, ಪಿಎಸ್‌ಐ ಹಾಲಪ್ಪ ಬಾಲದಂಡಿ, ಡಿ.ಎಂ.ದಳವಾಯಿ, ಗ್ರಾಪಂ ಅಧ್ಯಕ್ಷ ಎಸ್. ಐ.ಬೆನವಾಡಿ, ಮಲ್ಲು ಕೋಳಿ, ಸುರೇಶ ಪೂಜಾರಿ, ಈರಣ್ಣ ಕಲಕುಟಗಿ, ಶೇಖರ ಕುಲಗೋಡ, ಇಮ್ರಾನ ಬಟಕುರ್ಕಿ, ರಾಮಣ್ಣ ನಾಯಿಕ, ಅಲ್ತಾಫ್ ಉಸ್ತಾದ, ಪರಶುರಾಮ ಗೋಕಾಕ, ಅರ್ಜುನ ಗಂಡವ್ವಗೊಳ, ಶಂಕರ ಸಣ್ಣಕ್ಕಿ, ಕೃಷ್ಣಾ ಗಂಡವ್ವಗೋಳ, ಪಪಂ ಮುಖ್ಯಾಧಿಕಾರಿ ಕೆ.ಬಿ.ಪಾಟಿಲ ಇತರರು ಇದ್ದರು.