More

    ಸಂವಿಧಾನ ಜಾಗೃತಿ ಜಾಥಾ ರಥ ಸಂಚಾರ

    ಹನಗೋಡು: ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ರಥ ಸಂಚರಿಸಿತು.

    ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಜಾಗೃತಿ ರಥ ಆಗಮಿಸುತ್ತಿದ್ದಂತೆ ಗ್ರಾಪಂ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕರು ಸ್ವಾಗತಿಸಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಯುವತಿಯರು, ಶಾಲಾ ಮಕ್ಕಳು ರಾಷ್ಟ್ರಧ್ವಜ ಹಿಡಿದು ಬರಮಾಡಿಕೊಂಡರು. ಬಳಿಕ ನೇರಳಕುಪ್ಪೆ ಪ್ರೌಢಶಾಲಾ ಆವರಣಕ್ಕೆ ರಥ ಆಗಮಿಸಿತು.

    ಬಳಿಕ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರಾದ ಉಮಾ ಮತ್ತು ಪ್ರೀತಿ ಮಾತನಾಡಿ, ಸಂವಿಧಾನ ಜಾರಿಗೆ ಬಂದು 75 ವರ್ಷ ಸಂದ ಹಿನ್ನೆಲೆಯಲ್ಲಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಗೀತಾ ಸುರೇಶ್, ಉಪಾಧ್ಯಕ್ಷೆ ರುಕ್ಷ್ಮಿಣಿ ಸುರೇಶ್, ಪಿಡಿಒ ದೇವರಾಜ್, ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಗ್ರಾಪಂ ಸದಸ್ಯರಾದ ಅಮಾಸೇಗೌಡ, ರಂಗಯ್ಯ, ಜವರಮ್ಮ, ನಾಣ್ಯಕುಮಾರಿ, ಕಾರ್ಯದರ್ಶಿ ಗೀತಾ, ಶಿಕ್ಷಣ ಇಲಾಖೆಯ ಇಸಿಒ ಕೇಶವಮೂರ್ತಿ, ಸಿಆರ್‌ಪಿ ಧರ್ಮರಾಜ್, ಸಮಾಜ ಕಲ್ಯಾಣ ಇಲಾಖೆಯ ಗಣಪತಿ ಜಕಾತಿ, ಪ್ರೌಢಶಾಲೆ ಮುಖ್ಯಶಿಕ್ಷಕ ಕುಮಾರಸ್ವಾಮಿ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ದೊಡ್ಡಸ್ವಾಮಿ, ಆಶ್ರಮ ಶಾಲೆ ಶಿಕ್ಷಕರಾದ ರಾಜು, ಸ್ವಾಮಿ, ಲೋಕೇಶ್, ಕಚುವಿನಹಳ್ಳಿ ಶಾಲೆಯ ರಂಗಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts