More

    ಕಾನ್‌ಸ್ಟೆಬಲ್ ನೇಮಕಾತಿಗೆ ಫೆ. 25ರಂದು ಲಿಖಿತ ಪರೀಕ್ಷೆ

    ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1137 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸಲು ಪೊಲೀಸ್ ನೇಮಕಾತಿ ವಿಭಾಗ ಫೆ.25ಕ್ಕೆ ದಿನಾಂಕ ನಿಗದಿ ಮಾಡಿದೆ.

    ಮಹಿಳಾ ಅಭ್ಯರ್ಥಿಗಳು ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಲೋಹದ ಆಭರಣ ಧರಿಸದಂತೆ ವಸ ಸಂಹಿತೆ ವಿಧಿಸಿ ಆದೇಶಿಸಿದೆ. ಸಿವಿಲ್ ಕಾನ್‌ಸ್ಟೆಬಲ್ (ಪುರುಷ, ಮಹಿಳಾ, ತೃತೀಯ ಲಿಂಗಿ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ 1137 ಹುದ್ದೆಗಳ ನೇಮಕಾತಿಗೆ ರಾಜ್ಯ ವ್ಯಾಪಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳಿಗೆ ಕರೆಪತ್ರದ ಬಗ್ಗೆ ಮೊಬೈಲ್ ಎಸ್‌ಎಂಎಸ್ ಮೂಲಕ ಮಾಹಿತಿ ಬರಲಿದೆ. ರಾಜ್ಯ ಪೊಲೀಸ್ ಇಲಾಖೆ ಅಧಿಕೃತ ವೆಬ್‌ಸೈಟ್‌ನಿಂದ ಕರೆಪತ್ರ ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು ಎಂದು ಪೊಲೀಸ್ ನೇಮಕಾತಿ ವಿಭಾಗ ಪ್ರಕಟಣೆ ಹೊರಡಿಸಿದೆ.

    ಪುರುಷ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು ಅರ್ಧ ತೋಳಿನ, ಕಾಲರ್‌ರಹಿತ ಶರ್ಟ್ ಧರಿಸಬೇಕು. ಜಿಪ್ ಪ್ಯಾಕೆಟ್, ದೊಡ್ಡ ಬಟನ್, ಜೀನ್ಸ್, ಹೆಚ್ಚಿನ ಜೇಬುಗಳ ಪ್ಯಾಂಟ್ ಧರಿಸದಂತೆ ಸೂಚಿಸಲಾಗಿದೆ. ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂವು, ಬ್ರೂಚ್, ಬಟನ್ ಹೊಂದಿರುವ ಬಟ್ಟೆ ಧರಿಸದಂತೆ ಸೂಚಿಸಲಾಗಿದೆ. ಹಿಮ್ಮಡಿ ಎತ್ತರವಿರುವ ಶೂ/ಚಪ್ಪಲಿ ಧರಿಸಬಾರದು. ಬದಲಿಗೆ ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿ ಧರಿಸಬೇಕು ಎಂದು ಕಟ್ಟಾಜ್ಞೆ ಹೊರಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts