More

    ಕಾಂಗ್ರೆಸ್​ನ ಮೂರನೇ ಪಟ್ಟಿ ಪ್ರಕಟ; ರಾಜ್ಯದ 17 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

    ನವದೆಹಲಿ: ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಂಗ್ರೆಸ್​ ಪಕ್ಷ 57 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದ 17 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಘೋಷಿಸಲಾಗಿದ್ದು, ನಾಲ್ಕು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

    ಸದ್ಯ ಬಿಡುಗಡೆ ಮಾಡಲಾಗಿರುವ ಮೂರನೇ ಪಟ್ಟಿಯಲ್ಲಿ ಕರ್ನಾಟಕ (17), ತೆಲಂಗಾಣ (05), ಪಶ್ಚಿಮ ಬಂಗಾಳ (08), ರಾಜಸ್ಥಾನ (06), ಮಾಹಾರಾಷ್ಟ್ರ (07), ಅರುಣಾಚಲ ಪ್ರದೇಶ (02), ಗುಜರಾತ್​ (11) ರಾಜ್ಯಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

    ಬಿಡುಗಡೆ ಮಾಡಲಾಗಿರುವ ಕರ್ನಾಟಕದ ಎರಡನೇ ಪಟ್ಟಿಯಲ್ಲಿ ಸಚಿವರ ಮಕ್ಕಳು ಹಾಗೂ ಮಡದಿಗೆ ಕಾಂಗ್ರೆಸ್​ ಹೈಕಮಾಂಡ್​ ಮಣೆ ಹಾಕಿದ್ದು, ಸುರಪುರ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ. ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್‌ಗೆ ಟಿಕೆಟ್ ನೀಡಲಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಮೂರು ದಿನ ಮಳೆ: ಹವಾಮಾನ ಇಲಾಖೆ ಮೂನ್ಸೂಚನೆ

    ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ

    ಚಿತ್ರದುರ್ಗ – ಚಂದ್ರಪ್ಪ, ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆ – ಸಂಯುಕ್ತ ಪಾಟೀಲ್, ಧಾರವಾಡ- ವಿನೋದ್ ಅಸೂಟಿ, ದಾವಣಗೆರೆ – ಡಾ. ಪ್ರಭಾ ಮಲ್ಲಿಕಾರ್ಜುನ, ಕೊಪ್ಪಳ – ರಾಜಶೇಖರ್ ಹಿಟ್ನಾಳ್, ಬೀದರ್ – ಸಾಗರ್​ ಖಂಡ್ರೆ, ದಕ್ಷಿಣ ಕನ್ನಡ- ಪದ್ಮರಾಜ್, ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗಡೆ, ಬೆಂಗಳೂರು ದಕ್ಷಿಣ – ಸೌಮ್ಯರೆಡ್ಡಿ, ಬೆಂಗಳೂರು ಸೆಂಟ್ರಲ್- ಮನ್ಸೂರ್ ಅಲಿಖಾನ್, ಬೆಂಗಳೂರು ಉತ್ತರ -ಪ್ರೊ ರಾಜೀವ್ ಗೌಡ, ಮೈಸೂರು – ಎಂ. ಲಕ್ಷ್ಮಣ್, ರಾಯಚೂರು- ಕುಮಾರ್ ನಾಯ್ಕ್, ಉತ್ತರ ಕನ್ನಡ -ಅಂಜಲಿ ನಿಂಬಾಳ್ಕರ್, ಕಲಬುರಗಿ – ರಾಧಾಕೃಷ್ಣ ದೊಡ್ಡಮನಿಗೆ ಟಿಕೆಟ್​ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts