More

    ಕಷ್ಟ ಹೇಳಲು ಬಂದವರೆದುರು ಕೈ​ ಶಾಸಕನ ಉದ್ಧಟತನ; ವೋಟು ಕೇಳೋಕೆ ಬಂದಾಗ ನೋಡ್ಕೋತಿವಿ ಎಂದ್ರು ಮಹಿಳೆಯರು

    ಬೆಳಗಾವಿ: ಕರೊನಾ ವೈರಸ್​ನಿಂದಾಗಿ ಅದೆಷ್ಟೋ ಮಂದಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ಅಂಥವರ ಯೋಗಕ್ಷೇಮ ನೋಡಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ.

    ಆದರೆ ಕಾಂಗ್ರೆಸ್​ ಶಾಸಕನೋರ್ವ ತನ್ನ ಬಳಿ ಸಹಾಯ ಕೇಳಲು ಬಂದ ಕ್ಷೇತ್ರದ ಮಹಿಳೆಯರೊಂದಿಗೆ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಶಾಸಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    ಇದನ್ನೂ ಓದಿ: ರಷ್ಯಾದ ಪ್ರೇಯಸಿ ಜತೆ ಟ್ರಕ್​ನಲ್ಲಿ ಅಡಗಿ ಪ್ರಯಾಣಿಸುತ್ತಿದ್ದ ಯುವಕ; ಊರು ಸ್ವಲ್ಪ ದೂರದಲ್ಲಿದ್ದಾಗ ಟ್ವಿಸ್ಟ್​ ಕೊಟ್ರು ಪೊಲೀಸ್​

    ಬೈಲಹೊಂಗಲದ ಕಾಂಗ್ರೆಸ್ ಶಾಸಕ ಮಹಂತೇಶ ಕೌಜಲಗಿ ಹೀಗೆ ಉದ್ಧಟತನ ತೋರಿದವರು. ಲಾಕ್​ಡೌನ್​ನಿಂದ ಕಷ್ಟವಾಗುತ್ತಿದೆ, ಏನಾದರೂ ಸಹಾಯ ಮಾಡಿ ಎಂದು ಕೇಳಲು ಸ್ವಲ್ಪ ಜನ ಶಾಸಕ ಮಹಂತೇಶ್​ ಅವರ ಮನೆಯ ಬಳಿ ಹೋಗಿದ್ದರು. ಆ ವೇಳೆ ಶಾಸಕರು ವಾಕಿಂಗ್​ಗೆ ತೆರಳಿದ್ದರು. ವಾಪಸ್​ ಬಂದು ಜನರ ಸಂಕಷ್ಟವನ್ನು ಆಲಿಸುವ ಬದಲು, ರಸ್ತೆಯ ಮೇಲೆ ನಿಂತು ಅವರಿಗೆ ಬೈದಿದ್ದಾರೆ.

    ಎಲ್ಲ ಅಂಗಡಿಗಳೂ ಓಪನ್​ ಆಗಿವೆ. ನೀವಿನ್ನು ಕೆಲಸಕ್ಕೆ ಹೋಗಿ. ಸುಮ್ಮನೆ ಇಲ್ಲಿ ಗುದ್ದಾಡಿಕೊಂಡು ಕುಳಿತುಕೊಳ್ಳಬೇಡಿ..ಹೋಗಿ ಹೋಗಿ ಎಂದು ಬೇಜವಾಬ್ದಾರಿಯುತವಾಗಿ ಉತ್ತರ ನೀಡಿದ ಶಾಸಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಇದನ್ನೂ ಓದಿ: ಆಹಾರವೆಂದು ಸಿಡಿಮದ್ದು ತಿಂದ ಗರ್ಭಿಣಿ ಎಮ್ಮೆ ಬಾಯಿ ಛಿದ್ರ: ಮಾನವನ ಎಡವಟ್ಟಿಗೆ ಮೂಕ ಪ್ರಾಣಿಗೇಕೆ ಶಿಕ್ಷೆ?

    ಶಾಸಕರ ಮಾತು ಕೇಳಿದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತ ಅಲ್ಲಿಂದ ತೆರಳಿದ್ದಾರೆ. ‘ಇವರು ಎರಡನೇ ಸಲ ಹೀಗೆ ಮಾಡ್ತಿರೋದು. ವೋಟು ಕೇಳಲು ಬಂದಾಗ ಸಾಹೇಬ್ರಿಗೆ ನಾವೂ ಹೇಳುತ್ತೇವೆ’ ಎನ್ನುತ್ತ ಹೋಗಿದ್ದು ವಿಡಿಯೋದಲ್ಲಿ ನೋಡಬಹುದು. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕರೆಂಟ್ ಬಿಲ್ ಹೊರೆ ಗ್ರಾಹಕರ ಗಾಯಕ್ಕೆ ಬರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts