More

    ಜೆಡಿಎಸ್ ಜೊತೆ ನವರಂಗಿ ಆಟ ಬಿಡಿ ಎಂದು ಡಿಕೆಶಿ ಮೇಲೆ ಹರಿಹಾಯ್ದ ರಮೇಶ್ ಕುಮಾರ್

    ಬೆಂಗಳೂರು: ಮೈಸೂರು ಮೇಯರ್ ಎಲೆಕ್ಷನ್ ಗಲಾಟೆ ವಿಚಾರವಾಗಿ ಸಿದ್ದರಾಮಯ್ಯರ ಬೆಂಗಳೂರಿನ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರು ಗರಂ ಆದ ಘಟನೆ ನಡೆದಿದೆ. ಜೆಡಿಎಸ್ ಜತೆ ಮೈತ್ರಿಯನ್ನುವ ನವರಂಗಿ ಆಟ ಬಿಡಿ ಅಂತ ಹಿರಿಯ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಕೆಶಿ ಮೇಲೆ ಗರಂ ಆಗಿದ್ದಾರೆ.
    ಪಕ್ಷದಲ್ಲಿ ಚರ್ಚೆ ಮಾಡದೇ ನೀವು ಹೇಗೆ ನಿರ್ಧಾರ ಮಾಡಿದ್ರೀ, ಸಿಎಲ್​ಪಿ ನಾಯಕರ ಅನುಮತಿ ಪಡೆದುಕೊಂಡ್ರಾ? ಎಲ್ಲವೂ ನೀವು ಒಬ್ಬರೇ ನಿರ್ಧಾರ ಮಾಡಕ್ಕೆ ನಾವು ಏಕೆ ಇರಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟು ಕೊಟ್ಟ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಕೆಶಿ, ಇದು ನನ್ನ ನಿರ್ಧಾರವಲ್ಲ. ತನ್ವೀರ್ ಸೇಠ್ ನಿರ್ಧಾರ ಎಂದಿದ್ದಾರೆ. ನಮ್ಮ ಲೋಕಲ್ ಪಾಲಿಟಿಕ್ಸ್ ಗೆ ಯಾವ ಹೈಕಮಾಂಡ್ ಇಲ್ಲ ಎಂದಿದ್ದಾರೆ. ಹೀಗಾಗಿ ಸರಿ ನೀವು ಮುಂದುವರೆಯಿರಿ ಅಂತ ಹೇಳಿದೆ ಇದರಲ್ಲಿ ನನ್ನ ತಪ್ಪಿಲ್ಲ ಎಂದಿದ್ದಾರೆ ಡಿಕೆಶಿ.
    ಈ ವೇಳೆ ಹಿರಿಯ ನಾಯಕರು, ಹಾಗಾದ್ರೆ ಎಲ್ಲವೂ ಅವನೇ ನಿರ್ಧಾರ ಮಾಡ್ತಾನಾ? ಸಿಎಲ್​ಪಿ ನಾಯಕರು ಬೇಡ್ವಾ? ಮೊದಲು ನೋಟೀಸ್ ಜಾರಿ ಮಾಡಿ ಅಂತ ಒತ್ತಯ ಮಾಡಿದರು.
    ರಮೇಶ್ ಕುಮಾರ್ ಮಾತಿಗೆ ಕೃಷ್ಣಬೈರೇಗೌಡ ಸಾಥ್ ನೀಡಿದರು. ಸಿದ್ದರಾಮಯ್ಯ ಜತೆ ನೀನು ಹೋದ್ರೆ ಪಕ್ಷ ಉಳಿಯುತ್ತೆ, ಇಲ್ಲದಿದ್ರೆ ನಮಗೆ ವಿರೋಧ ಪಕ್ಷದ ಸ್ಥಾನ ಗಟ್ಟಿ ಆಗುತ್ತೆ ಎಂದ ರಮೇಶ್ ಕುಮಾರ್, ಅವರು ಈಗ ಬಿಜೆಪಿ ಜತೆ ಸಹ ಚೆನ್ನಾಗಿದ್ದಾರೆ..ಮೈಸೂರಿನಲ್ಲಿ ಬಿಜೆಪಿ ಜತೆ ಹೋಗಿದ್ರೆ ಎಲ್ಲಿ ನಿಮ್ಮ ಜಾತ್ಯಾತೀತತೆ ಅಂತ ಪ್ರಶ್ನೆ ಮಾಡಬಹುದಿತ್ತು ನಿಮ್ಮ ಸ್ವಾರ್ಥಕ್ಕೆ ನಮ್ಮನ್ನ ಬಲಿ ಹಾಕಬೇಡಿ ಎಂದಿದ್ದಾರೆ.
    ಇದಕ್ಕೂ ನನಗೂ ಸಂಬಂಧವೇ ಇಲ್ಲ ಅಂತ ಕೂತಿದ್ದ ಸಿದ್ದರಾಮಯ್ಯ ನಿನ್ನೆ ಬೆಳವಣಿಗೆ ನನಗೆ ಬೇಸರ ತರಿಸಿದೆ ಎಂದಷ್ಟೇ ಹೇಳಿದ್ದಾರೆ. (ವಿಜಯವಾಣಿ)

    ಉಪ ಚುನಾವಣೆಯಲ್ಲಿ ಜೆಡಿ ಎಸ್ ಸ್ಪರ್ಧೆಯ ಕುರಿತು ಕುಮಾರಸ್ವಾಮಿ ಹೇಳಿದ್ರು ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts