More

    ಕಾಂಗ್ರೆಸ್ ಗ್ಯಾರಂಟಿಯಿಂದ ಮಹಿಳಾ ಸ್ವಾವಲಂಬನೆ

    ಮೈಸೂರು: ದೇಶದ ಪ್ರತಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಕಾಂಗ್ರೆಸ್ ಗ್ಯಾರಂಟಿ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ತಿಳಿಸಿದರು.

    ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಶನಿವಾರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 25 ಗ್ಯಾರಂಟಿ ಘೋಷಿಸಿದೆ. ಬಡ ಕುಟುಂಬದ ಪ್ರತಿ ಮಹಿಳೆಗೆ ಲಕ್ಷ ರೂ. ನೀಡಲಾಗುವುದು. ಇದರಿಂದ ಮಹಿಳೆಯರ ಸಂಪೂರ್ಣ ಸ್ವಾವಲಂಬನೆ ಆಗಬಹುದು ಎಂದರು.


    ಬಡತನ ನಿರ್ಮೂಲನೆ, ಶ್ರೀಮಂತರಿಂದ ತೆರಿಗೆ ಪಡೆದು ಬಡವರಿಗೆ ಹಂಚಬೇಕು. ಆದರೆ ಬಿಜೆಪಿ ಸರ್ಕಾರ ಬಡವರಿಂದ ಕಿತ್ತು ಶ್ರಿಮಂತರನ್ನು ಶ್ರೀಮಂತರನ್ನಾಗಿಸುತ್ತಿದೆ. ಶ್ರೀಮಂತರ 25 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ರೈತರ ಒಂದು ಪೈಸೆ ಸಾಲ ಮನ್ನಾ ಮಾಡಲಿಲ್ಲ. ‘ಇಂಡಿಯಾ’ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ ಎಂದು ಭರವಸೆ ನೀಡಿದರು.


    ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ ಇದ್ದರೂ ಕೇಂದ್ರ ಸರ್ಕಾರ ನಯಾಪೈಸೆ ಕೊಡಲಿಲ್ಲ. ಎನ್‌ಡಿಆರ್‌ಎಫ್ ಮೂಲಕ 18 ಸಾವಿರ ಕೋಟಿ ರೂ. ಅನುದಾನಕ್ಕೆ ಕೋರಲಾಯಿತು. ಈವರೆಗೆ ಐದು ಪೈಸೆ ಕೊಟ್ಟಿಲ್ಲ. ತೆರಿಗೆ ಮೂಲಕ ಸಂಗ್ರಹಿಸಿದ ನಮ್ಮ ಪಾಲಿನ ಹಣವನ್ನೂ ನೀಡಲಿಲ್ಲ. ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಎಂದು ಟೀಕಿಸಿದರು.

    ಪ್ರತಾಪ್ ಸಿಂಹ ಅವರಿಗೆ ಏಕೆ ಟಿಕೆಟ್ ತಪ್ಪಿತು? ಭ್ರಷ್ಟಾಚಾರದ ಆರೋಪ, ಸಿ.ಡಿ., ಗಿಡಿ ಏನಾದರೂ ಇತ್ತೇ? 10 ವರ್ಷ ಪ್ರತಾಪ್ ಸಿಂಹ ಮಾಧ್ಯಮದ ಮುಂದೆ ಬೈಯುವುದು ಬಿಟ್ಟರೆ ಬೇರೇನೂ ಮಾಡಲಿಲ್ಲ. ನಿಮ್ಮ ಸೇವಕನಾಗಿ ಕೆಲಸ ಮಾಡಲು ನಮಗೊಂದು ಅವಕಾಶ ನೀಡುವಂತೆ ಕೋರಿದರು.

    ಎಂ.ಲಕ್ಷ್ಮಣ್ ಅವರಿಂದ ಬಿರುಸಿನ ಮತಪ್ರಚಾರ


    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಬಿರುಸಿನ ಮತಪ್ರಚಾರ ನಡೆಸಿದರು. ನಾಗನಹಳ್ಳಿ, ಸಿದ್ದಲಿಂಗಪುರ, ಕೆ.ಆರ್.ಮಿಲ್ ಕಾಲನಿ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಆಲನಹಳ್ಳಿ ಹಾಗೂ ಹೊಸುಂಡಿ ಗ್ರಾಮಗಳಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಜತೆಗೂಡಿ ಮತಯಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts