More

    ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಗೆ ಗಡುವು

    ಚಿತ್ರದುರ್ಗ ಪಕ್ಷದ ಮಹಾತ್ವಾಕಾಂಕ್ಷಿ ಭರವಸೆ ಯೋಜನೆಗಳಾದ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳನ್ನು ಈಡೇರಿಸುವ ಗ್ಯಾರಂಟಿ ಕಾರ್ಡ್‌ನ್ನು ಪ್ರತಿ ಮನೆಗೂ 10 ದಿನದೊಳಗೆ ವಿತರಿಸುವಂತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖಂಡರು, ಕಾರ‌್ಯಕರ್ತರಿಗೆ ಸೂಚಿಸಿದರು.

    ನಗರದ ವಿನಾಯಕ ಕಲ್ಯಾಣ ಮಂದಿರದಲ್ಲಿ ಸೋಮವಾರ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಜಿ ಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಎಲ್ಲರ ಮನೆಗೂ ಈ ಕಾರ್ಡಗಳನ್ನು ತಲುಪಿಸುವ ಮೂಲಕ ಪಕ್ಷದ ಭರವಸೆ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸ ಬೇಕೆಂದರು.

    ಉಚಿತ ವಿದ್ಯುತ್‌ಗೆ ಎಲ್ಲಿಂದ ಹಣ ತರುತ್ತೀರಿ ಎಂದು ಕೇಳಿದರೆ,ರಾಜ್ಯಬಜೆಟ್ ಮೊತ್ತದಲ್ಲಿ ಶೇ.40 ಅನುದಾನ,ಭ್ರಷ್ಟಾಚಾರದಲ್ಲಿ ಮು ಳುಗಿರುವ ಬಿಜೆಪಿ ಪಾಲಾಗುತ್ತಿದೆ. ಇದನ್ನು ರಕ್ಷಿಸಿ,ಇದರಲ್ಲಿ ಉಚಿತ ವಿದ್ಯುತ್‌ಗೆ ಖರ್ಚು ಮಾಡುತ್ತೇವೆ ಎಂದು ಮತದಾರರಿಗೆ ತಿಳಿಸಿ. ನ ಮ್ಮ ಸರ್ಕಾರದ ಮೊದಲ ದಿನವೇ ಉಚಿತ ವಿದ್ಯುತ್ ಮತ್ತು ಮಾಸಿಕ 2 ಸಾವಿರ ರೂ.ಕೊಡುವುದಕ್ಕೆ ಆದೇಶ ಹೊರಡಿಸಲಾಗುವುದು. ನ ಮ್ಮ ಯಾವೊಬ್ಬ ಶಾಸಕರು,ಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗುವುದಿಲ್ಲವೆಂದು ವಾಗ್ದಾನ ಮಾಡಿದರು.

    ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹಲವು ಆಕಾಂಕ್ಷಿಗಳಿದ್ದಾರೆ. ಸಮೀಕ್ಷೆಯಲ್ಲಿ ಗೆಲುವಿನ ಅವಕಾಶ ಹೆಚ್ಚಿರುವಂಥವರಿಗೆ ಟಿಕೆಟ್ ಕೊಡ ಲಾಗುವುದು. ಉಳಿದವರನ್ನು ಕಡೆಗಣಿಸದೆ ಸರ್ಕಾರದಲ್ಲಿ ಅವರಿಗೂ ಸೂಕ್ತ ಸ್ಥಾನ ಮಾನ ನೀಡಲಾಗುವುದು.

    ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಕಾಂಗ್ರೆಸ್ ಘೋಷಿಸಿರುವ ಈ ಜನಪ್ರಿಯ ಯೋಜನೆಗಳನ್ನು ಸಹಿಸಲಾಗದೆ ಬಿಜೆಪಿ ಮಂತ್ರಿ ಯೊಬ್ಬರು ಸಿದ್ದರಾಮಯ್ಯ ಅವರ ಹೊಡೆದುಹಾಕಿ ಎಂದು ಕರೆ ನೀಡಿದ್ದಾರೆ. ಮಹಾತ್ಮಗಾಂಧಿಯಿಂದ ಹಿಡಿದು ಅನೇಕ ಕಾಂಗ್ರೆಸ್ ನಾಯ ಕರ ಬಲಿದಾನವಾಗಿದೆ. ಇವತ್ತು ಸಿದ್ದರಾಮಯ್ಯ,ನಾಳೆ ನಮ್ಮ ಹಲವು ನಾಯಕರ ಹತ್ಯೆಗೆ ಬಿಜೆಪಿ ಕರೆ ನೀಡ ಬಹುದು.

    ಮಂತ್ರಿ ಅಶ್ವತ್ಥ್ ನಾರಾಯಣ ಹೇಳಿಕೆಗೆ ಬಹಿರಂಗ ಕ್ಷಮೆ ಯಾಚಿಸಿ ಅಥವಾ ಅವರನ್ನು ಜೈಲಿಗೆ ಕಳಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರಿಗೆ ಸವಾಲೆಸೆದರು. ಶೇ.40 ಕಮಿಷನ್‌ನಲ್ಲಿ ಮುಳುಗಿರುವ ಬೊ ಮ್ಮಾಯಿ ಸರ್ಕಾರದ ಬಗ್ಗೆ ಮಾತನಾಡದೆ ಪ್ರಧಾನಿ ನರೇಂದ್ರ ಮೋದಿ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಎಸ್‌ಸಿ, ಎಸ್‌ಟಿ, ಅಲ್ಪ ಸಂ ಖ್ಯಾತರು,ಹಿಂದುಳಿದವರ,ಬಡವರಿಗೆ ನೀಡಿದ ಭರವಸೆಗಳನ್ನು ಪ್ರಧಾನಿ ಈಡೇರಿಸಿಲ್ಲವೆಂದು,ಕಾಡುಗೊಲ್ಲ ಸಮುದಾಯದ ಸಮಸ್ಯೆ ಉದಾಹರಿಸಿದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ,ಕಾಂಗ್ರೆಸ್ಸ್ ಭದ್ರಕೋಟೆಯಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕಿದೆ. ಈ ಬಾರಿ ಕೈ ತಪ್ಪಿದರೆ ರಾಜ್ಯ ಮತ್ತೆ ಕಾಂಗ್ರೆಸ್ ಕೈಗೆ ಸಿಗದು. ನಮ್ಮ ಈ ಭರವಸೆಗಳಿಗೆ ಬಿಜೆಪಿ ತತ್ತರಿಸಿದೆ. ಭ್ರಷ್ಟಾ ಚಾರದಿಂದಾಗಿ ದೇಶದಲ್ಲಿ ಕರ್ನಾಟಕದ ಘನತೆಗೆ ಕುಂದುಂಟಾಗಿದೆ ಎಂದರು. ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್‌ಹುಸೇನ್ ಮಾತ ನಾಡಿ,ಜಿಲ್ಲೆಯ ಆರು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಬೇಕೆಂದರು. ಈ ವೇಳೆ ಪಕ್ಷದ ಹಿರಿಯ ನಾಯಕರು,ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಸಾಧನೆ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

    ಎಐಸಿಸಿ ಪ್ರಧಾನ ಕಾರ‌್ಯದರ್ಶಿ ಮಯೂರ ಜಯಕುಮಾರ್, ಮಾಜಿ ಶಾಸಕರಾದ ಶಿವಮೂರ್ತಿ ನಾಯ್ಕ, ಡಿ.ಸುಧಾಕರ್, ಬಿ.ಜಿ. ಗೋವಿಂದಪ್ಪ, ಎ.ವಿ.ಉಮಾಪತಿ, ಎಸ್.ತಿಪ್ಪೇಸ್ವಾಮಿ, ಮಾಜಿ ಸಂಸದರಾದ ಎಚ್.ಹನುಮಂತಪ್ಪ, ಬಿ.ಎನ್.ಚಂದ್ರಪ್ಪ, ಹಾಗೂ,ಹನುಮಲಿ ಷ ಣ್ಮುಖಪ್ಪ,ಎಂ.ಕೆ.ತಾಜ್‌ಪೀರ್,ಹಿರಿಯೂರು ಜಿ.ಎಸ್,ಮಂಜುನಾಥ್,ಅನಿಲ್,ಸೋಮಶೇಖರ್, ಆರ್.ಕೆ.ಸರ್ದಾರ್,ಯೋಗೇಶ್‌ಬಾ ಬು,ಗೀತಾನಂದಿನಿಗೌಡ, ಮೈಲಾರಪ್ಪ, ಸಂಪತ್‌ಕುಮಾರ್, ಲಕ್ಷ್ಮೀಕಾಂತ್,ಅಂಜಿನಪ್ಪ,ಶಂಕರ್,ಜೆಜೆಹಟ್ಟಿ ತಿಪ್ಪೇಸ್ವಾಮಿ,ರಘು,ಹಾಲಸ್ವಾ ಮಿ,ಮರಳುರಾಧ್ಯ,ಕಾರೇಹಳ್ಳಿಉಲ್ಲಾಸ್,ಮಹಡಿ ಶಿವಮೂರ್ತಿ,ಬಾಲಕೃಷ್ಣ ಯಾದವ್,ಸಚಿನ್‌ಮಿಗಾ,ಜಯಸಿಂಹ ಸೇರಿ ಪಕ್ಷದ ನಾನಾ ಘಟಕಗಳ ಮುಖಂಡರು,ಪ್ರಮು ಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts