More

    ಎಲ್ಲವನ್ನೂ ಕೊಟ್ಟ ಕಾಂಗ್ರೆಸ್​ಗೆ ನೀವೆಷ್ಟು ನಿಷ್ಠರು? ಸಾಬೀತುಮಾಡಿ…: ಸಚಿನ್​ ಪೈಲಟ್​ಗೆ ಸವಾಲು

    ಜೈಪುರ: ರೆಬಲ್​ ನಾಯಕ ಸಚಿನ್​ ಪೈಲಟ್​ರನ್ನು ರಾಜಸ್ಥಾನ ಪಿಸಿಸಿ​ ಅಧ್ಯಕ್ಷ ಹಾಗೂ ಡಿಸಿಎಂ ಸ್ಥಾನದಿಂದ ವಜಾಗೊಳಿಸದ ಕಾಂಗ್ರೆಸ್​ ಇಂದು ಒಂದು ನೇರ ಸಂದೇಶವನ್ನು ಕಳಿಸಿದೆ.

    ಪಕ್ಷದ ಸಭೆಗಳಿಗೆ ಹಾಜರಾಗದೆ, ತಮ್ಮ ಮುನಿಸನ್ನು ಮುಂದುವರಿಸಿರುವ ಸಚಿನ್​ ಪೈಲಟ್​ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ, ನಾನು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿದ್ದಾರೆ.

    ಅದಾದ ಕೆಲವೇ ಹೊತ್ತಿನ ಬಳಿಕ ಕಾಂಗ್ರೆಸ್ ವಕ್ತಾರ ರಣದೀಪ್​ ಸರ್ಜೇವಾಲಾ ಅವರು ಮಾತನಾಡಿ, ಸಚಿನ್​ ಪೈಲಟ್​ ಅವರು ಬಿಜೆಪಿ ಸೇರುವುದಿಲ್ಲ ಎಂದು ಮಾಧ್ಯಮಗಳ ಮೂಲಕ ಕಾಂಗ್ರೆಸ್​ಗೆ ತಿಳಿಸಿದ್ದಾರೆ. ​ ಹಾಗಿದ್ದ ಮೇಲೆ ಅವರು ಕಾಂಗ್ರೆಸ್​ಗೆ ಎಷ್ಟು ನಿಷ್ಠರು ಎಂಬುದನ್ನು ಸಾರ್ವಜನಿಕವಾಗಿ ತೋರಿಸಲಿ. ಗುರ್​ಗಾಂವ್​ನ ಹೊಟೆಲ್​ನಿಂದ ವಾಪಸ್​ ಪಕ್ಷದ ಕಚೇರಿಗೆ ಬರಲಿ. ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಕ್ ಖಟ್ಟರ್​ ಅವರ ಹಿಡಿತದಲ್ಲಿ ಇರುವ ಬದಲು ಇಲ್ಲಿಗೆ ಬರಲಿ ಎಂದು ಹೇಳಿದ್ದಾರೆ.

    ಸಚಿನ್​ ಪೈಲಟ್​ಗೆ ಕಾಂಗ್ರೆಸ್​ನಿಂದ ಅಪಾರ ಬೆಂಬಲ ಸಿಕ್ಕಿದೆ. ಅವರನ್ನು ಸಂಸದನಿಂದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಅಲ್ಲಿಂದ ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷನ ಪಟ್ಟ ಸಿಕ್ಕಿತು. ನಂತರ ಡಿಸಿಎಂ ಹುದ್ದೆಯೂ ಸಿಕ್ಕಿತು. ಕಾಂಗ್ರೆಸ್ ಅಥವಾ ಬಿಜೆಪಿಯ ಯಾವುದಾದರೂ ನಾಯಕನಿಗೆ ಅವರ ಹಿರಿಯರಿಂದ ಇಷ್ಟೊಂದು ಬೆಂಬಲ ಸಿಕ್ಕಿದ ಉದಾಹರಣೆಗಳಿದೆಯಾ ಎಂದು ರಣದೀಪ್​ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆಲ್ಕೋಹಾಲ್​ ಖರೀದಿಸಲು ಯುವತಿ ಮಾಡಿದ ಉಪಾಯ ಕೇಳಿದ್ರೆ ನೀವು ಬೆರಗಾಗ್ತೀರಾ…!

    ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡಿದೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ರಣದೀಪ್​ ಅವರು, ನಾವು ಸಚಿನ್​ ಪೈಲಟ್​ ಹಾಗೂ ಅವರೊಂದಿಗೆ ಇರುವ ಶಾಸಕರಿಗೆ ವಾಪಸ್​ ಬರುವಂತೆ ಕರೆಯುತ್ತಲೇ ಇದ್ದೇವೆ. ಅವರಿಗೆ ಯಾವುದೇ ಸಮಸ್ಯೆಯಿದ್ದರೂ ಸರಿಪಡಿಸಲು ಹೈಕಮಾಂಡ್​ ಕೂಡ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    20 ಸೆಕೆಂಡ್‌ನಲ್ಲಿ ಬ್ಯಾಂಕ್‌ನಿಂದ 10 ಲಕ್ಷ ಎಗರಿಸಿದ ಬಾಲಕ! ಸಿಸಿಟಿವಿಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts