More

    ಗೊಂದಲದಲ್ಲೇ ನನ್ನ ಅಧಿಕಾರ ಮುಕ್ತಾಯ: ಬಳ್ಳಾರಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಬೇಸರ; ಕೊನೇ ಸಾಮಾನ್ಯ ಸಭೆಯೂ ಮುಂದೂಡಿಕೆ

    ಬಳ್ಳಾರಿ: ನಾನು ಗೊಂದಲದಿಂದ ಅಧ್ಯಕ್ಷಳಾಗಿದ್ದೇನೆ. ಅದೇ ರೀತಿ ಗೊಂದಲದಿಂದಲೇ ನನ್ನ ಅಧಿಕಾರಾವಧಿ ಮುಗಿಯುವ ಪರಿಸ್ಥಿತಿ ಬಂದಿದೆ. ಏ.28ರವರೆಗೆ ಎಲ್ಲ ಸದಸ್ಯರ ಅವಧಿಯಿದ್ದು, ಅಷ್ಟರೊಳಗೆ ಮತ್ತೊಮ್ಮೆ ಸಾಮಾನ್ಯ ಸಭೆ ಕರೆಯಲಾಗುವುದು…

    ಇದು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಭಾವುಕರಾಗಿ ಆಡಿದ ಮಾತುಗಳು. ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಪಂ ಸದಸ್ಯರ ಕೊನೆಯ ಸಾಮಾನ್ಯ ಸಭೆ ಸಾಕಷ್ಟು ಮಹತ್ವ ಪಡೆದಿತ್ತು. ಆದರೆ, ಸಭೆ ಗೊಂದಲದ ಗೂಡಾಗಿತ್ತು. ಈ ನಡುವೆ ಕೋರಂ ಕೊರತೆಯಿಂದ ಸಾಮಾನ್ಯ ಸಭೆ ಮುಂದೂಡಲಾಗಿದೆ ಎಂದು ಅಧ್ಯಕ್ಷೆ ಭಾರತಿ ತಿವ್ಮಾರೆಡ್ಡಿ ಘೋಷಿಸಿದರು. ಅಬ್ದುಲ್ ನಜೀರ್‌ಸಾಬ್ ನೂತನ ಸಭಾಂಗಣದಲ್ಲಿ ಸಭೆ ನಡೆಸುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ ಹಲವು ಸದಸ್ಯರು ಬೇಸರಗೊಂಡು ಹೊರನಡೆದರು.

    ನಮ್ಮ ಅವಧಿಯೊಳಗೆ 25ಕ್ಕಿಂತ ಹೆಚ್ಚು ಸಾಮಾನ್ಯ ಸಭೆ ನಡೆಯಬೇಕಾಗಿತ್ತು. ಆದರೆ, 12 ಸಭೆಗಳು ವಾತ್ರ ನಡೆದಿವೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ?. ಜತೆಗೆ ನಮ್ಮ ಅವಧಿಯ ಅನುದಾನದಲ್ಲಿ ನಿರ್ಮಿಸಿದ ನೂತನ ಸಭಾಭವನದಲ್ಲೇ ಕೊನೆ ಸಭೆ ನಡೆಸಬೇಕೆಂಬ ಇಚ್ಛೆ ಇತ್ತು. ಅದಕ್ಕಾಗಿಯೇ ಕಾಮಗಾರಿ ಶೀಘ್ರ ಮುಗಿಸಲು ಮನವಿ ವಾಡಿಕೊಂಡಿದ್ದೆವು. ಆದರೆ, ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಮುನ್ನವೆ ತರಾತುರಿಯಲ್ಲಿ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಉದ್ಘಾಟನೆಗೆ ಸಚಿವ, ಶಾಸಕರನ್ನು ಕರೆಸಿಲ್ಲ. ಉದ್ಘಾಟನೆಯ ನಿಯಮಾವಳಿ ಪಾಲಿಸಿಲ್ಲ. ಹೀಗಾಗಿ ಸಭೆಯಿಂದ ಹೊರ ನಡೆದವು ಎಂದು ಜಿಪಂ ಸದಸ್ಯರು ತಿಳಿಸಿದರು.

    ಕ್ಷೇತ್ರದೊಳಗೆ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ. ಸಮರ್ಪಕವಾಗಿ ಅನುದಾನ ಬಿಡುಗಡೆಗೊಳ್ಳುತ್ತಿಲ್ಲ. ನಿಗದಿತ ಸಭೆಗಳು ನಡೆಯುತ್ತಿಲ್ಲ. ಜನರು ನಮ್ಮನ್ನು ಪ್ರಶ್ನೆ ವಾಡುತ್ತಿದ್ದು, ಏನೆಂದು ಉತ್ತರಿಸಬೇಕೆಂದು ಹಲವಾಗಲಿ ಕ್ಷೇತ್ರದ ಸುವರ್ಣಾ ನಾಗರಾಜ್ ಪ್ರಶ್ನಿಸಿದರು.

    ಇದಕ್ಕೆ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಪ್ರತಿಕ್ರಿಯಿಸಿ, ಸಾಮಾನ್ಯ ಸಭೆ ನಡೆಸಲು, 39 ಸದಸ್ಯರಿರಬೇಕು. ಆದರೆ, 32 ಜನರಿದ್ದಾರೆ. ಹೀಗಾಗಿ ಸಭೆ ಮುಂದೂಡಲಾಗಿದೆ. ಅಲ್ಲದೆ, ಎರಡು ತಿಂಗಳ ಹಿಂದೆಯೇ ಸಾಮಾನ್ಯ ಸಭೆ ಮಾಡಬೇಕಿತ್ತು. ನೂತನ ಸಭಾಭವನದಲ್ಲಿ ಮಾಡಬೇಕೆಂದುಕೊಂಡು ಸುಮ್ಮನಾದೆವು. ಆದರೆ, ಕೆಲ ಕಾಮಗಾರಿ ಪೂರ್ಣಗೊಳದಿದ್ದಕ್ಕೆ ಹಳೇ ಬಿಲ್ಡಿಂಗ್‌ನಲ್ಲಿ ಸಭೆ ಮಾಡಲು ಮುಂದಾದರೆ ಸದಸ್ಯರ ಕೊರತೆಯಿಂದ ಸಭೆ ಮುಂದೂಡುತ್ತಿದ್ದೇವೆ ಎಂದರು.

    ಜಿಪಂ ಸಿಇಒ ಕೆ.ನಂದಿನಿ ಮಾತನಾಡಿ, ಅಧ್ಯಕ್ಷರು ಸೂಚಿಸಿದಂತೆ ಸಾಮಾನ್ಯ ಸಭೆ ಕರೆಯಲಾಗಿತ್ತು. ನೂತನ ಸಭಾಭವನ ಉದ್ಘಾಟನೆಗೊಂಡರೂ ಕೆಲ ಕಾಮಗಾರಿಗಳು ಬಾಕಿ ಇರುವ ಕಾರಣಕ್ಕೆ ಹಳೇ ಕಟ್ಟಡದಲ್ಲಿ ಸಭೆ ನಿಶ್ಚಿಯಿಸಲಾಗಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts