More

    ವಿದೇಶಿ ಪೆಡ್ಲರ್ ಬ್ಯಾಂಕ್ ಖಾತೆಗಳು ಜಪ್ತಿ; ದೇಶದಲೇ ಮೊದಲು

    ಬೆಂಗಳೂರು: ಎನ್‌ಡಿಪಿಎಸ್ ಕಾಯ್ದೆ ಬಳಸಿಕೊಂಡು ದೇಶದಲ್ಲಿ ಮೊದಲ ಬಾರಿಗೆ ವಿದೇಶಿ ಪೆಡ್ಲರ್‌ಗಳ ಬ್ಯಾಂಕ್ ಖಾತೆ ಜಪ್ತಿ ಮಾಡಿದ ಸಿಸಿಬಿ ಪೊಲೀಸರು, 12.60 ಲಕ್ಷ ರೂ. ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ನೈಜೀರಿಯಾ ಮೂಲದ ಪೆಡ್ಲರ್ ಪೀಟರ್ ಇಕೇಡಿ ಬಿಲಾನ್ವೋ(38) ಮತ್ತು ಆತನ ಪತ್ನಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿನ ಹಣ ಮುಟ್ಟುಗೋಲಿಗೆ ಕಾಕಿಕೊಳ್ಳಲಾಗಿದೆ. ವಿದೇಶಿ ಡ್ರಗ್ಸ್ ಪೆಡ್ಲರ್ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡ ಪ್ರಕರಣ ಇದೇ ಮೊದಲನೆಯದ್ದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಿಇಎಎಲ್ ಲೇಔಟ್ 6ನೇ ಬ್ಲಾಕ್‌ನ ಬಿಬಿಎಂಪಿ ಪಾರ್ಕ್‌ನಲ್ಲಿ ಪೆಡ್ಲರ್, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ನವೆಂಬರ್‌ನಲ್ಲಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ದಾಳಿ ನಡೆಸಿ ಪೀಟರ್‌ನನ್ನು ಬಂಧಿಸಿದ್ದರು. ಈ ವೇಳೆ 5.15 ಲಕ್ಷ ರೂ. ಮೌಲ್ಯದ ಎಂಡಿಎಂಎ, ವಿವಿಧ ಬ್ಯಾಂಕ್‌ಗಳ 30 ಪಾಸ್‌ಬುಕ್‌ಗಳು ಹಾಗೂ 39 ಕ್ರೆಡಿಟ್ ಕಾರ್ಡ್ ಜಪ್ತಿ ಮಾಡಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಯಾಗಿತ್ತು.

    ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು, ತನಿಖೆ ವೇಳೆ ಆರೋಪಿಯ ಪತ್ನಿಯ ಎರಡು ಬ್ಯಾಂಕ್ ಖಾತೆಗಳಲ್ಲಿ 2.55 ಲಕ್ಷ ರೂ. ಹಾಗೂ ಇತರೆ 5 ಬ್ಯಾಂಕ್ ಖಾತೆಗಳಿಂದ 4.90 ಲಕ್ಷ ರೂ. ಇರುವುದು ಕಂಡುಬಂದಿತ್ತು. ಎನ್‌ಡಿಪಿಎಸ್ ಕಾಯ್ದೆ-1985ರ ಅಧ್ಯಾಯ 5(ಎ)ರ ಕಲಂ 68(ಇ) ಮತ್ತು (ಎಫ್) ಅಡಿ ತನಿಖಾಧಿಕಾರಿಗೆ ಕಲ್ಪಿಸಿರುವ ಅಧಿಕಾರ ಚಲಾಯಿಸಿ ನಗದು ಹಾಗೂ 7 ಬ್ಯಾಂಕ್ ಖಾತೆಗಳಲ್ಲಿದ್ದ 12.60 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

    ಇದೀಗ ಚೆನ್ನೈನ ಸಕ್ಷಮ ಪ್ರಾಧಿಕಾರ ಮತ್ತು ಆಡಳಿತಾಧಿಕಾರಿಗಳಾದ ಸಂಗ್ಲರ್ಸ್ ಆ್ಯಂಡ್ ಫಾರಿನ್ ಎಕ್ಸ್‌ಚೇಂಜ್ ಮ್ಯಾನಿಪ್ಯುಲೇಟರ್ಸ್ (ಫೋರ್‌ಫೀಚರ್ ಆಫ್ ಪ್ರಾಪರ್ಟಿ) ಆಕ್ಟ್ (ಸಫೆಮಾ) (ಎಫ್‌ಒಪಿ) ಮತ್ತು ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್ಸ್‌ಸ್ಟಾನ್ಸಸ್ ಆ್ಯಕ್ಟ್ ಅಡಿ ವಿಚಾರಣೆ ನಡೆಸಿ ಸಿಸಿಬಿಯ ಈ ಮುಟ್ಟುಗೋಲು ಆದೇಶವನ್ನು ಅನುಮೋದಿಸಿದೆ ಎಂದು ದಯಾನಂದ್ ಮಾಹಿತಿ ನೀಡಿದರು.

    ಮಣಿಪುರ ಯುವತಿ ಜತೆ ವಿವಾಹ

    ವೈದ್ಯಕೀಯ ವೀಸಾ ಪಡೆದು 2018ರಲ್ಲಿ ಭಾರತಕ್ಕೆ ಬಂದಿರುವ ಆರೋಪಿ ಪೀಟರ್, 2022ರಲ್ಲಿ ಮಣಿಪುರ ಯುವತಿಯನ್ನು ಮದುವೆಯಾಗಿದ್ದು, ಆಕೆಯ ಹೆಸರಿನಲ್ಲಿ 2 ಬ್ಯಾಂಕ್ ಖಾತೆ ತೆರೆದಿದ್ದ. ನಕಲಿ ದಾಖಲೆಗಳನ್ನು ಸಲ್ಲಿಸಿ 5 ಬ್ಯಾಂಕ್ ಖಾತೆ ಸೇರಿ 7 ಬ್ಯಾಂಕ್ ಖಾತೆ ತೆರೆದಿದ್ದ. ಡ್ರಗ್ಸ್ ಗ್ರಾಹಕರಿಂದ ಗೂಗಲ್ ಪೇ ಮತ್ತು ಫೋನ್ ಪೇ ಮುಖಾಂತರ ಹಣ ಹಾಕಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts