More

    ಹೊಸ ಕಾರು ತಂದು ಅದರಲ್ಲೇ ವೈದ್ಯೆಯನ್ನು ಕೊಲೆ ಗೈದ ಆರೋಪಿ ವೈದ್ಯನಿಗೀಗ ಪಾಪಪ್ರಜ್ಞೆಯಂತೆ

    ನವದೆಹಲಿ: ಡಾ. ಯೋಗಿತಾ ಗೌತಮ್ ಅವರನ್ನು ಹತ್ಯಗೈದಿರುವುದಾಗಿ ಒಪ್ಪಿಕೊಂಡ ವೈದ್ಯಾಧಿಕಾರಿ ವಿವೇಕ್ ತಿವಾರಿ, ಕೊಲೆ ಮಾಡಿದಾಗಿನಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದಾನೆ.
    ಉತ್ತರ ಪ್ರದೇಶದ ಒರೈ ಜಿಲ್ಲಾ ಆಸ್ಪತ್ರೆಯಲ್ಲಿರುವ ಡಾ. ವಿವೇಕ್ ತಿವಾರಿಯನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನನ್ನು ಕ್ಯಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.
    ವಿವೇಕ್ ನನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆತಂದಾಗಿನಿಂದ ಆತ ಊಟ ನಿದ್ರೆ ಮಾಡಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ತಿವಾರಿ ಇತ್ತೀಚೆಗೆ ಹೊಸ ಕಾರು ಖರೀದಿಸಿದ್ದು, ಅದೇ ವಾಹನದಲ್ಲಿ ಡಾ.ಯೋಗಿತಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಕ್ತದ ಕಲೆಗಳನ್ನು ತೆಗೆದುಹಾಕಲು ಎರಡು ಬಾರಿ ಕಾರನ್ನು ತೊಳೆಯುವುದಾಗಿ ವಿವೇಕ್ ಒಪ್ಪಿಕೊಂಡಿದ್ದಾನೆ.

    ಇದನ್ನೂ ಓದಿ:  ಮತ್ತೊಂದು ಪ್ರೇಮವೈಫಲ್ಯ; ವೈದ್ಯೆಯ ಕತ್ತು ಹಿಸುಕಿ, ಇರಿದು ಕೊಲೆಗೈದ ವೈದ್ಯಾಧಿಕಾರಿ

    ವೈದ್ಯಕೀಯ ಕಾನೂನು ಕ್ಷೇತ್ರದಲ್ಲೂ ಆತನಿಗಿರುವ ಅನುಭವದಿಂದಾಗಿ, ವಿವೇಕ್, ಕೊಲೆ ತನಿಖೆಯ ಸುತ್ತಮುತ್ತಲಿರುವ ಅಂಶಗಳ ಮಹತ್ವವನ್ನು ತಿಳಿದಿದ್ದು ಮತ್ತು ಅಂತಹ ಎಲ್ಲ ಪುರಾವೆಗಳನ್ನು ಅಳಿಸಿಹಾಕಲು ಪ್ರಯತ್ನ ಮಾಡಿದ್ದಾನೆ. ಮತ್ತೊಂದೆಡೆ, ಫೋರೆನ್ಸಿಕ್ ತಂಡ, ತಿವಾರಿಯನ್ನು ದೋಷಾರೋಪಣೆ ಮಾಡಲು ಕಾರಿನಲ್ಲಿ ಸಾಕಷ್ಟು ಪುರಾವೆಗಳನ್ನು ಪಡೆದುಕೊಂಡಿದೆ ಎಂದು ಹೇಳುತ್ತದೆ.
    ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾಗಿದ್ದು, ರಕ್ತದ ಬಟ್ಟೆಗಳೊಂದಿಗೆ ಕೊಲೆ ಮಾಡಲು ಬಳಸಲಾಗಿದ್ದೆನ್ನಲಾದ ರಿವಾಲ್ವರ್ ಅನ್ನು ಪಡೆಯುವ ಸಲುವಾಗಿ ಪೊಲೀಸರು ಈಗ ವಿವೇಕ್ ನನ್ನು ಪಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
    ಡಾ. ವಿವೇಕ್ ನ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಕೊಲೆಯಾದ ಡಾ.ಯೋಗಿತಾ ಗೌತಮ್ ಆಗ್ರಾದ ಎಸ್.ಎನ್. ವೈದ್ಯಕೀಯ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಓದುತ್ತಿದ್ದರು. ಅವರ ನಾಪತ್ತೆಯಾದ ಸೆಲ್ ಫೋನ್​​ಗಾಗಿ ಹುಡುಕಾಟ ಪ್ರಾರಂಭಿಸಲಾಗಿದೆ.

    ಇದನ್ನೂ ಓದಿ:  ಟಿ.ವಿ, ಸಿನಿಮಾ ಶೂಟಿಂಗ್​ಗೆ ಅನುಮತಿ; ಮಾರ್ಗದರ್ಶಿ ಸೂತ್ರ ಬಿಡುಗಡೆ

    ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ವಿವೇಕ್ ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಮನ್ ಸಿಂಗ್ ಚಾವ್ರಾ ಹೇಳಿದ್ದಾರೆ. ತಿವಾರಿ ಕೊಲೆಗೆ ಬಳಸಲಾದ ಅಸ್ತ್ರ ಇರುವ ಸ್ಥಳ ಮತ್ತು ರಕ್ತದ ಬಟ್ಟೆಗಳಿರುವ ಸ್ಥಳದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾನೆ. ಆತ ಯಾವಾಗ ಕೊಲೆ ಮಾಡಲು ಯೋಜಿಸಿದ್ದ ಮತ್ತು ಮತ್ತು ಯೋಗಿತಾ ಹಾಗೂ ಆತನ ಮಧ್ಯದ ಸಂಬಂಧ ಯಾವಾಗ ಹದಗೆಟ್ಟಿತು ಎಂಬುದು ಪೊಲೀಸರಿಗೆ ಇನ್ನೂ ಮಾಹಿತಿತ ಸಿಕ್ಕಿಲ್ಲ.
    ಏತನ್ಮಧ್ಯೆ, ಒರೈ ಆರೋಗ್ಯ ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ.ಅಲ್ಪಾನಾ ಬಾರ್ಟಿಯಾ ಮಾತನಾಡಿ, ಡಾ.ವಿವೇಕ್ ತಿವಾರಿಯ ಸಂಬಳವನ್ನು ಆಗಸ್ಟ್ 19 ರಂದು ಸ್ಥಗಿತಗೊಳಿಸಲಾಗಿದೆ ಮತ್ತು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲು ಇಲಾಖೆ ಸಿದ್ಧತೆ ನಡೆಸಿದೆ. ಕೋವಿಡ್ -19 ವಾರ್ಡ್‌ನ ಉಸ್ತುವಾರಿ ವಹಿಸಿಕೊಂಡ ನಂತರ ತಿವಾರಿ ಆಗಸ್ಟ್ 15 ರಿಂದ 21 ರವರೆಗೆ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕಾಗಿತ್ತು,

    ಮಕ್ಕಳಿಗೆ ಇಲಿ ಪಾಷಾಣ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಕೋರ್ಟ್ ನೀಡಿದ ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts