More

    ಅರ್ಚಕರ ಬಂಧನಕ್ಕೆ ಖಂಡನೆ; ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಸಚಿವರಿಗೆ ಪತ್ರ

    ಬೆಂಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನದ ಅರ್ಚಕರನ್ನು ಅರಣ್ಯ ಅಧಿಕಾರಿಗಳು ಬಂಧಿಸಿರುವುದನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡೀಸಿದೆ.

    ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಪತ್ರ ಬರೆದು ಬಂಧಿತ ಅರ್ಚಕರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.

    ವನ್ಯಜೀವಿಗಳಿಂದ ತಯಾರಿಸಿದ ಪದಾರ್ಥಗಳನ್ನು ಎಲ್ಲ ಧರ್ಮಿಯರು ಹಲವು ವರ್ಷಗಳಿಂದ ಮಠ- ಮಂದಿರಗಳಲ್ಲಿ ಉಪಯೋಗಿಸುತ್ತಿದ್ದಾರೆ. ಧಾರ್ಮಿಕ ಶ್ರದ್ಧಾ ಭಕ್ತಿಗಳಿಗೆ ಅನುಗುಣವಾಗಿ ಬಳಸುತ್ತಿರುವುದು ರೂಢಿಯಲ್ಲಿದೆ. ಹಿಂದು ಮಠಗಳಲ್ಲಿ ಸನ್ಯಾಸಿಗಳು ಅನೇಕ ಶತಮಾನಗಳಿಂದ ಕೃಷ್ಣಾಜಿನವನ್ನು ಉಪಯೋಗಿಸುತ್ತಿರುವುದು ಸರ್ವಸಾಮಾನ್ಯವಾಗಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ನವಿಲುಗರಿಗಳನ್ನು ಬಳಕೆಯಲ್ಲಿದೆ.

    ವನ್ಯ ಜೀವ ಸಂರಕ್ಷಣಾ ಕಾಯ್ದೆ ಕುರಿತು ಜನರಿಗೆ ತಿಳುವಳಿಕೆ ಕೊಡದೆ ಏಕಾಏಕಿ ಬಂಧಿಸುವುದು ಸರಿಯಲ್ಲಿ. ಇದು ಆ ವ್ಯಕ್ತಿಯ ತೇಜೋವಧೆ ಆಗಲಿದೆ. ವನ್ಯಜೀವಿಗಳಿಂದ ತಯಾರಿಸಿದ ಪದಾರ್ಥಗಳನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಸೂಚನೆ ಕೊಟ್ಟು ದಿನಾಂಕ ನಿಗದಿ ಮಾಡಬೇಕು ಎಂದು ಅಶೋಕ ಹಾರನಹಳ್ಳಿ, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts