More

  ಮದಕರಿ ನಾಯಕರ ಮಹಾದ್ವಾರ ತೆರವಿಗೆ ಖಂಡನೆ


  ಚಾಮರಾಜನಗರ : ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಭಾನುವಲ್ಲಿ ಗ್ರಾಮದಲ್ಲಿದ್ದ ಶ್ರೀ ರಾಜವೀರ ಮದಕರಿ ನಾಯಕರ ಮಹಾದ್ವಾರವನ್ನು ತೆರವುಗೊಳಿಸಿರುವುದು ಖಂಡನೀಯ ಎಂದು ತಾಲೂಕು ನಾಯಕರ ಸಂಘದ ಅಧ್ಯಕ್ಷ ಜಗದೀಶ್ ನಾಯಕ ಹೇಳಿದರು.


  25 ವರ್ಷಗಳ ಹಿಂದೆ ಮಾಜಿ ಶಾಸಕ ಎಚ್.ಶಿವಪ್ಪ ಅವರ ಅವಧಿಯಲ್ಲಿ ಮದಕರಿ ನಾಯಕರ ಮಹಾದ್ವಾರ ನಿರ್ಮಿಸಲಾಗಿತ್ತು. ಅಂದು ಸ್ಥಳೀಯ ಸಂಸ್ಥೆಯ ಅನುಮತಿ ಪಡೆದು ಮಹಾದ್ವಾರ ಕಟ್ಟಲಾಗಿತ್ತು. ಇದನ್ನು ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಉದ್ಘಾಟಿಸಿದ್ದರು. ಇದೀಗ ಏಕಾಏಕಿ ಮಹಾದ್ವಾರವನ್ನು ತೆರವುಗೊಳಿಸಿರುವುದು ಖಂಡನೀಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


  ಈ ಕೃತ್ಯವನ್ನು ವಿರೋಧಿಸಿ ಪ್ರತಿಭಟಿಸಿದ ನಾಯಕ ಜನಾಂಗಕ್ಕೆ ಸೇರಿದ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೂಡಲೇ ಮದಕರಿ ನಾಯಕರ ಮಹಾದ್ವಾರವನ್ನು ಮತ್ತೆ ನಿರ್ಮಿಸಬೇಕು. ಈ ಪ್ರಕರಣದಲ್ಲಿ ಬಂಧಿಸಿರುವ 30 ಜನರನ್ನು ಬಿಡುಗಡೆಗೊಳಿಸಿ ಮೊಕದ್ದಮೆ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ನಾಯಕ ಜನಾಂಗದ ಸಂಘಗಳ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.


  ತಾಲೂಕು ನಾಯಕ ಸಂಘದ ಉಪಾಧ್ಯಕ್ಷ ಎಸ್.ಮಹದೇವ, ನಿರ್ದೇಶಕ ಚಿಕ್ಕಮಾದು, ಮುಖಂಡ ಕುನ್ನನಾಯಕ, ಸುರೇಂದ್ರ ಇದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts