More

    ಸರಳ ಭಾಷೆಯಲ್ಲಿ ಕೀರ್ತನೆ ರಚನೆ

    ಮದ್ದೂರು: ಭಕ್ತ ಕನಕದಾಸರು 15 ಮತ್ತು 16ನೇ ಶತಮಾನದಲ್ಲಿ ಜನಪ್ರಿಯ ಭಕ್ತಿ ಪಂಥದ ದಾಸ ಪರಂಪರೆಯಲ್ಲಿ ಪ್ರಸಿದ್ಧರಾಗಿದ್ದು, ತಮ್ಮ ಕೀರ್ತನೆಗಳ ಮೂಲಕ ಜನಸಾಮಾನ್ಯರ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀ ಅಪೂರ್ವಚಂದ್ರ ಹೇಳಿದರು.

    ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕನಕದಾಸರು ಜಾತಿ ಪದ್ಧತಿಯಲ್ಲಿರುವ ತಾರತಮ್ಯಗಳನ್ನು ವಿರೋಧಿಸಿ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸುವ ಮೂಲಕ ಜನಸಾಮಾನ್ಯರ ಜಾಗೃತಿಗೊಳಿಸಿದರಲ್ಲದೆ ಜನರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದರು.

    ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾದ ಪುರಂದರದಾಸರ ಜತೆಗೂಡಿ ಕರ್ನಾಟಕ ದಾಸ ಸಾಹಿತ್ಯಕ್ಕೆ ಹಾಗೂ ಕರ್ನಾಟಕ ಸಂಗೀತಕ್ಕೆ ಮೂಲಭೂತ ಸಿದ್ಧಾಂತಗಳನ್ನು ನೀಡುವಲ್ಲಿ ಕನಕದಾಸರ ಕೊಡುಗೆ ಅಪಾರ ಎಂದು ಹೇಳಿದರು.

    ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಉಪನ್ಯಾಸಕರಾದ ನವೀನ್, ನಂದಿನಿ, ರಶ್ಮಿ, ಮೋಹನ್ ಕುಮಾರ್, ಸಿಂಧು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts