More

    ಹೆಡ್ ಕಾನ್‌ಸ್ಟೆಬಲ್ ವಿರುದ್ಧ ದೂರು


    ಚಾಮರಾಜನಗರ: ಕೊಳ್ಳೇಗಾಲದ ಜಮೀನಿನ ಗಲಾಟೆ ಪ್ರಕರಣದ ಇತ್ಯಾರ್ಥ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ವೊಬ್ಬರು ಲಂಚ ಕೇಳಿರುವುದಾಗಿ ರೈತ ಮುಖಂಡ ನಂಜುಂಡಸ್ವಾಮಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗೆ ಮಂಗಳವಾರ ದೂರು ನೀಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಲಂಚ ಕೇಳಿದ ಆರೋಪದಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ. ಅರೇಪಾಳ್ಯ ಗ್ರಾಮದ ವಿಷಕಂಠೇಗೌಡರ ಮಗ ಲೋಕೇಶ್ ಹಾಗೂ ಅದೇ ಗ್ರಾಮದ ಕಾಳೇಗೌಡರ ಮಗ ಸಂತೋಷ್ ನಡುವೆ ಜಮೀನಿನಲ್ಲಿ ಬೆಳೆ ಹಾನಿಯಾಗಿರುವ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಸಂಬಂಧ ಇಬ್ಬರು ಕೊಳ್ಳೇಗಾಲ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಗಲಾಟೆ ವಿಚಾರವಾಗಿ ಲೋಕೇಶ್ ವಿರುದ್ಧ ಪ್ರಕಣ ದಾಖಲಾಗಿತ್ತು. ಇದೇ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಿತ್ತು. ಈ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಲೋಕೇಶ್ ಅವರನ್ನು ಠಾಣೆಗೆ ಕರೆಸಲಾಗಿತ್ತು. ಈ ವೇಳೆ ನಂಜುಂಡಸ್ವಾಮಿ ಸಹ ಆಗಮಿಸಿದ್ದರು. ಈ ವೇಳೆ ಹೆಡ್ ಕಾನ್‌ಸ್ಟೆಬಲ್ ಗುರುಪ್ರಸಾದ್ ಅವರು ಕಂಪ್ಯೂಟರ್ ಆಪರೇಟರ್‌ಗೆ ಹಣ ನೀಡುವಂತೆ ಲೋಕೇಶ್‌ಗೆ ತಿಳಿಸಿದ್ದಾರೆ. ಆದರೆ, ನಂಜುಂಡಸ್ವಾಮಿ ಹಾಗೂ ವಿಷಕಂಠೇಗೌಡ ಇಬ್ಬರು ಹಣವಿಲ್ಲವೆಂದು ಠಾಣೆಯಿಂದ ಹೊರಬಂದಿದ್ದಾರೆ. ಇಷ್ಟಾದರೂ ಗುರುಪ್ರಸಾದ್, ನಂಜುಂಡಸ್ವಾಮಿ ಅವರಿಗೆ ಕರೆ ಮಾಡಿ ಮೂರು ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕೋಪಗೊಂಡ ನಂಜುಂಡಸ್ವಾಮಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts