More

    ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ವೆಚ್ಚ ಭರ್ತಿ: ಹೊಸದುರ್ಗದಲ್ಲಿ ಕುಂಚಿಟಿಗ ಸಂಸ್ಥಾನಮಠದ ಡಾ. ಶ್ರೀ ಶಾಂತವೀರ ಸ್ವಾಮೀಜಿ ಹೇಳಿಕೆ

    ಹೊಸದುರ್ಗ: ಐಎಎಸ್, ಕೆಎಎಸ್ ತರಬೇತಿ ಪಡೆಯುವಂಥ ಕುಂಚಿಟಿಗ ಸಮುದಾಯದ ಮಕ್ಕಳ ಸಂಪೂರ್ಣ ವೆಚ್ಚ ಭರಿಸುವ ಕೆಲಸವನ್ನು ಗುರುಪೀಠ ಮಾಡಲಿದೆ ಎಂದು ಡಾ. ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

    ಪಟ್ಟಣದ ಕುಂಚಿಟಿಗ ಸಂಸ್ಥಾನಮಠದಲ್ಲಿ ಡಾ. ಶ್ರೀ ಶಾಂತವೀರ ಸ್ವಾಮೀಜಿ ಅವರ ಗುರುದಿಕ್ಷೇಯ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಶೈಕ್ಷಣಿಕ ಸಾಧನೆ ಮಾಡಿರುವ ಸಮುದಾಯದ ಮಕ್ಕಳಿಗೆ ಆತ್ಮಬಲ ತುಂಬುವ ಹಾಗೂ ಸಾಧನೆಯನ್ನು ಬೆನ್ನುತಟ್ಟುವ ಉದ್ದೇಶದಿಂದ ಗುರುಪೀಠ ಮಕ್ಕಳನ್ನು ಮಠಕ್ಕೆ ಕರೆದು ಸನ್ಮಾನಿಸಲಾಗುತ್ತಿದೆ. ಪ್ರತಿಯೊಬ್ಬರೂ ಸ್ವಾರ್ಥಿಗಳಾದರೆ ಸಮುದಾಯದ ನೋವನ್ನು ಕೇಳುವರು ಯಾರು ಎನ್ನುವ ಪ್ರಶ್ನೆಗೆ ಕುಂಚಿಟಿಗ ಗುರುಪೀಠ ಉತ್ತರ ನೀಡುವ ಕೆಲಸ ಮಾಡುತ್ತಿದೆ. ಯಾವುದೇ ಮಗು ವಿದ್ಯಾಭ್ಯಾಸಕ್ಕೆ ತೊಂದರೆಯಾದರೆ ಗುರುಪೀಠ ಸಂಪರ್ಕಿಸಬೇಕು ಎಂದು ಹೇಳಿದರು.

    ಕನಕಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಶಾಂತವೀರ ಸ್ವಾಮೀಜಿ ಕತ್ತಲೆಯಲ್ಲಿದ್ದ ಕುಂಚಿಟಿಗ ಸಮುದಾಯಕ್ಕೆ ಬೆಳಕಾಗಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಲ್ಲಿ ಸೇರಿ ಹೋಗಿದ್ದ ಕುಂಚಿಟಿಗ ಸಮುದಾಯ ಸಂಘಟಿಸಿ ಒಗ್ಗೂಡಿಸಿದ ಕೀರ್ತಿ ಶಾಂತವೀರ ಶ್ರೀಗಳಿಗೆ ಸಲ್ಲುತ್ತದೆ ಎಂದರು.

    ವಿಧಾನ ಪರಿಷತ್ತಿನ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕುಂಚಿಟಿಗ ಶ್ರೀಗಳು ದೀಕ್ಷೆ ಸ್ವೀಕರಿಸಿದ ರಜತ ಮಹೋತ್ಸವವನ್ನು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ಆದರ್ಶವಾಗಿದೆ. ಇಲ್ಲಿ ಗೌರವಕ್ಕೆ ಒಳಗಾದ ಪ್ರತಿಭೆಗಳು ಮನೆಗೆ, ಸಮಾಜಕ್ಕೆ ಕೀರ್ತಿ ತರುವಂತಹ ಉತ್ತಮ ಸಂಸ್ಕಾರ ಪಡೆಯಬೇಕು. ಕುಂಚಿಟಿಗ ಮಠ ಸಮುದಾಯದ ಅಭಿವೃದ್ಧಿಗಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಸಂತಸ ತಂದಿದೆ ಎಂದರು.

    ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ 500ಕ್ಕೂ ಹೆಚ್ಚು ಮಕ್ಕಳನ್ನು ಗುರುಪೀಠದಿಂದ ಸನ್ಮಾನಿಸಲಾಯಿತು.

    ವಿಧಾನ ಪರಿಷತ್ತಿನ ಸದಸ್ಯ ಎಂ. ಚಿದಾನಂದಗೌಡ, ಯುಪಿಎಸ್‌ಸಿ ಸಾಧಕರಾದ ಡಾ.ಬೆನಕ ಪ್ರಸಾದ್, ವಿನಯ್ ಕುಮಾರ, ಕೆಎಎಸ್ ಸಾಧಕಿ ಶಿಲ್ಪಾ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts