More

    ಮಕ್ಕಳ ಸಾಧನೆಗೆ ಸ್ಪರ್ಧೆಗಳು ಪ್ರೇರಣೆ

    ಸಾಗರ: ಸ್ಪರ್ಧೆಗಳು ವಿದ್ಯಾರ್ಥಿಗಳನ್ನು ಹೊಸ ಸಾಧನೆಗೆ ಪ್ರೇರೇಪಿಸುತ್ತವೆ. ಅದರ ಜತೆಗೆ ಬಹುಮಾನ ಸಿಕ್ಕರೆ ಇನ್ನಷ್ಟು ಸಾಧನೆ ಮಾಡಲು ಸೂರ್ತಿ ತುಂಬುತ್ತದೆ ಎಂದು ಹಿರಿಯ ನ್ಯಾಯವಾದಿ ಎಂ.ಬಿ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
    ಎಡಜಿಗಳೇಮನೆ ಇಕ್ಕೇರಿ ವಿದ್ಯಾಸಂಸ್ಥೆಯಲ್ಲಿ ನಡೆಸಿದ ಎಂ.ಎನ್.ದೇವದತ್ ಸ್ಮಾರಕ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ಜಯಂತಿಗಳು ಆಯಾ ದಿನ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವಲ್ಲಿ ಕೆಲಸ ಮಾಡುತ್ತವೆ. ಈ ರೀತಿ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಮಾಜದ ಪ್ರತಿ ಸಂಘಟನೆಗಳೂ ನಡೆಸಬೇಕು ಎಂದು ಸಲಹೆ ನೀಡಿದರು.
    ಸ್ಪರ್ಧೆಯ ಪ್ರಾಯೋಜಕ ಎಂ.ನಾಗರಾಜ್ ಮಾತನಾಡಿ, ಈ ರೀತಿಯ ಸ್ಪರ್ಧೆಗಳನ್ನು ನಗರದ ಶಾಲೆಗಳಲ್ಲಿ ಹಲವು ವರ್ಷ ನಡೆಸುತ್ತಿದ್ದು, ಆಗ ಭಾಗವಹಿಸುವ ಮಕ್ಕಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದರೂ ಗ್ರಾಮೀಣ ಮಕ್ಕಳ ಪಾಲ್ಗೊಳ್ಳುವಿಗೆ ವಿರಳವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ಯೋಜನೆ ಹಮ್ಮಿಕೊಂಡಿದ್ದು ಪರಿಪೂರ್ಣ ಯಶಸ್ಸು ಸಿಕ್ಕಿದೆ ಎಂದರು.
    ಇಕ್ಕೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಟಿ.ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ಸದ್ಗುರು ಸ್ಕೂಲ್ ಆಫ್ ವಿಷನ್, ಪ್ರಗತಿ ಸಂಯುಕ್ತ ಶಾಲೆ, ಎಚ್‌ಜೆಪಿಎಸ್ ಹಾಗೂ ಇಕ್ಕೇರಿ ಪ್ರೌಢಶಾಲೆ ಮಕ್ಕಳು ಬಹುಮಾನ ಪಡೆದರು. ಸರಸ್ವತಿ ನಾಗರಾಜ್, ಇಕ್ಕೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ರಜನೀಶ್, ಜೆ.ಆರ್.ವೆಂಕಟೇಶ್, ದೀಪಕ್, ಎಸ್.ಜಿ.ಶ್ರೀಕಾಂತ್, ಸಂಕೇತ್, ರಾಮಚಂದ್ರ ಹೆಗಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts