More

    ಅರ್ಹರು ದೊರೆತರೆ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ

    ಚಿತ್ರದುರ್ಗ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅರ್ಹ ಅಭ್ಯರ್ಥಿಗಳನ್ನು ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಸುವುದಾಗಿ ಜೆಡಿಯು ರಾ ಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,224ರಲ್ಲೂ ಪೈಪೋಟಿ ನೀಡ ಬೇ ಕೆಂಬ ಗುರಿ ಇದೆ.

    ಐವತ್ತರಿಂದ ನೂರು ಕ್ಷೇತ್ರಗಳಲ್ಲಿ ಅರ್ಹರು ಲಭ್ಯವಾಗುವ ನಿರೀಕ್ಷೆ ಇದೆ. ಒಂದು ವೇಳೆ 10 ಜನರೇ ಅರ್ಹರೆಂದಾದರೆ ಅಷ್ಟೇ ಸಂಖ್ಯೆ ಯಲ್ಲಿ ಅಭ್ಯರ್ಥಿಗಳು ಚುನಾವಣೆ ಎದುರಿಸಲಿದ್ದು,ಆಯೋಗ ನಿಗದಿ ಪಡಿಸಿರುವ ಮೊತ್ತದವರೆಗೆ ಮಾತ್ರ ಚುನಾವಣೆಗೆ ವೆಚ್ಚ ಮಾಡಲಿ ದ್ದಾರೆ. ಕ್ರಿಮಿನಲ್‌ಗಳನ್ನು ಜೈಲಿನಲ್ಲಿಡಬೇಕಿದೆ. ನಾಯಿ,ಕತ್ತೆ ಎಂದೆಲ್ಲ ಪರಸ್ಪರ ಬಯ್ದುಕೊಳ್ಳುವುದನ್ನು ಕೇಳುತ್ತಿದ್ದೇವೆ.

    ಮಂತ್ರಿ ಆಗಿದ್ದವರು,ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿವವರು ಆಡುವ ಮಾತುಗಳಿಗೆ ತೂಕವಿರ ಬೇಕೆಂದು ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ಹಗರಣದ ಕುರಿತು ಪ್ರತಿಕ್ರಿಯಿಸಿದರು. ನಾನು ದಾವಣಗೆರೆಯಿಂದ ಲೋಕಸಭೆಗೆ ಸ್ಪರ್ಧಿಸುತ್ತೇನೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಸಹೋದರ ತೇಜಸ್ವಿ ಪಟೇಲ್ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ಅವರ ಪರ ಪ್ರಚಾರ ಮಾಡುವುದಿಲ್ಲ.

    ಕೇಂದ್ರ ಬಜೆಟ್ ನನಗೆ ಅರ್ಥ ಆಗಿಲ್ಲ,ಆದರೆ ಪುಕ್ಕಟೆಯಾಗಿ ಕೊಡುವುದರ ಬಗ್ಗೆ ಏನನ್ನೂ ಹೇಳದಿರುವುದನ್ನು ಸ್ವಾಗತಿಸುತ್ತೇನೆ. ಸಮಾ ಜವಾದಿ ಸಿದ್ಧಾಂತ ಹಿನ್ನೆಲೆ ನಮ್ಮ ಪಕ್ಷ ಸಾವಯವ ರಾಜಕಾರಣವನ್ನು ಪರಿಚಯಿಸಲು ಮುಂದಾಗಿದೆ. ರೈತ ಮುಖಂಡರೆದುರು ನನ್ನ ಅಭಿ ಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ಮೊದಲಿದ್ದ ರಾಜಕಾರಣ ಈಗಿಲ್ಲ.ನಾವು ನದಿಯಲ್ಲಿ ಈಜುತ್ತೇವೆ ಹೊರತು,ಹೆಣದಂತೆ ತೇಲುವುದಿಲ್ಲ ಎಂದರು. ಬಿ.ಪಿ.ರಮೇಶ್‌ಗೌಡ,ಬೇಹಳ್ಳಿನಾಗರಾಜ್,ಶಿವರಾಮ್,ಪ್ರಹ್ಲಾದ್,ದೇವರಾಜ ಅರಸು, ಶಿವಮೂರ್ತಿ,ರವಿ ಮತ್ತಿತರ ಪಕ್ಷದ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts