More

    ಕಾರ್ಕಳ ಪುರಸಭೆ ಸಾಮಾನ್ಯಸಭೆಯಲ್ಲಿ ಪ್ರತಿಪಕ್ಷ ಪ್ರತಿಭಟನೆ

    ಕಾರ್ಕಳ: ಪುರಸಭೆ ನೂತನ ಆಡಳಿತದ ಪ್ರಥಮ ಸಾಮಾನ್ಯ ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ನಿರ್ಬಂಧಿಸಿ ಕಲಾಪದ ವರದಿ ಸಂಗ್ರಹಿಸಲು ಅವಕಾಶ ನೀಡದೆ ಇರುವುದನ್ನು ಪ್ರತಿಭಟಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಭಿತ್ತಿ ಫಲಕ ಪ್ರದರ್ಶಿಸಿದರು.

    ಘರ್ಷಣೆಯ ವಾತಾವರಣ ಇಲ್ಲದಿದ್ದರೂ ಸಾಮಾನ್ಯ ಸಭೆಗೆ ಪೊಲೀಸರನ್ನು ಕರೆಸುವ ಔಚಿತ್ಯ ಏನಿತ್ತು. ಚುನಾಯಿತರಾಗಿರುವ ಕೌನ್ಸಿಲರ್‌ಗಳು ಕ್ರಿಮಿನಲ್‌ಗಳಲ್ಲ ಎಂದು ಶುಕ್ರವಾರ ಪ್ರಥಮ ಸಾಮಾನ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಶುಭದ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

    ತನ್ನಿಂದ ಪ್ರಮಾದವಾಗಿದೆ ಎಂದು ತಪ್ಪೊಪ್ಪಿಕೊಂಡ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಪತ್ರಕರ್ತರನ್ನು ಗೌರವಯುತವವಾಗಿ ಆಹ್ವಾನಿಸುವ ಭರವಸೆ ನೀಡಿದರು.

    ಕರಿಯಕಲ್ಲಿನಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಸದೆ ಇರುವುದು ಹಾಗೂ ಅಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಹೊಗೆಯಿಂದ ಪರಿಸರ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ಬೆಂಕಿ ಹಾಕುವುದು ತ್ಯಾಜ್ಯ ವಿಲೇವಾರಿಗೆ ಪರಿಹಾರ ಅಲ್ಲ. ಸಮಸ್ಯೆ ಬಗೆಹರಿಸಲು ಹೋಗಿ ಇನ್ನೊಂದು ಸಮಸ್ಯೆ ಎದುರು ಹಾಕದಿರಿ ಎಂಬ ಸಲಹೆ ನೀಡಿದರು.

    ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಯ ನಿರ್ವಹಣೆಯು ಕಾರ್ಕಳ ಪುರಸಭೆಯಿಂದಲೇ ನಡೆಯಬೇಕೆಂದು ಶುಭದರಾವ್ ಸಭೆಯಲ್ಲಿ ಒತ್ತಾಯಿಸಿದರು.
    ಪುರಸಭೆ ಅಧ್ಯಕ್ಷೆ ಸುಮಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ ರಾವ್, ಮುಖ್ಯಾಧಿಕಾರಿ ರೇಖಾ ಶೆಟ್ಟಿ ಉಪಸ್ಥಿತರಿದ್ದರು.

    ಅವರೂ ಮನುಷ್ಯರು, ಕಾನೂನು ಗೌರವಿಸಿ..
    ಪೌರಕಾರ್ಮಿಕರು ಮಾನವರು. ಸ್ವಚ್ಛ ಕಾರ್ಕಳ ಸುಂದರ ಕಾರ್ಕಳ ಘೋಷ ವಾಕ್ಯ ಪರಿಪೂರ್ಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ತ್ಯಾಜ್ಯ ಸಾಗಾಟದ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ, ವಿಮೆ, ಹೊಗೆ ತಪಾಸಣೆ ದೃಢೀಕರಣ ಪತ್ರ ಮಾತ್ರವಲ್ಲದೇ ಇನ್ನೂ ಹಲವು ನ್ಯೂನತೆಗಳು ಕಂಡುಬರುತ್ತದೆ. ಆ ವಾಹನದಿಂದ ಯಾವುದೇ ತರದಲ್ಲಿ ಅನಾಹುತ ಸಂಭವಿಸಿದಲ್ಲಿ ಅದರಲ್ಲಿ ದುಡಿಯುವ ಪೌರಕಾರ್ಮಿಕ ಪರಿಸ್ಥಿತಿ ಏನಾಗಬದುದು ಎಂದು ಪ್ರಶ್ನಿಸಿದ ಸೋಮನಾಥ ನಾಯ್ಕ, ವಾಹನದ ಗುಣಮಟ್ಟದ ಹಾಗೂ ದಾಖಲೆ ಪತ್ರಗಳು ಸಮರ್ಪಕವಾಗಿ ಇರಲೇಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts