More

    ಹಸಿಶುಂಠಿ ವರ್ತಕರ ಹಿತರಕ್ಷಣೆಗೆ ಬದ್ಧ

    ಕುಶಾಲನಗರ: ಹಸಿ ಶುಂಠಿ ವರ್ತಕರ ಹಿತರಕ್ಷಣೆಗಾಗಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ರಾಜ್ಯ ಹಸಿ ಶುಂಠಿ ವರ್ತಕರ ಸಂಘದ ಅಧ್ಯಕ್ಷ ಸಾಗರ್ ಬಾಬು ತಿಳಿಸಿದರು.

    ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಹಸಿ ಶುಂಠಿ ವರ್ತಕರ ಸಂಘವನ್ನು ಸೋಮವಾರ ಕುಶಾಲನಗರದಲ್ಲಿ ಉದ್ಘಾಟಿಸಿ ಮಾತನಾಡಿದರು. ಹಿಂದೆ ಚೀನಾದ ರೈತರು ಬೆಳೆದ ಶುಂಠಿಯನ್ನು ಭಾರತಕ್ಕೆ ಅಂದಿನ ಸರ್ಕಾರ ಆಮದು ಮಾಡಿಕೊಳ್ಳುತ್ತಿತ್ತು. ಇದರಿಂದ ದೇಶದ ರೈತರಿಗೆ ತೊಂದರೆಯಾಗುತ್ತಿತ್ತು. ಕೇಂದ್ರ ಸರ್ಕಾರದ ಈ ರೈತ ವಿರೋಧಿ ಧೋರಣೆಯ ವಿರುದ್ಧ ಹಸಿ ಶುಂಠಿ ವರ್ತಕರ ಸಂಘ ಪ್ರಬಲವಾದ ಹೋರಾಟ ರೂಪಿಸಿದ್ದರ ಫಲವಾಗಿ ಚೀನಾದ ಶುಂಠಿಯನ್ನು ನಿಷೇಧಿಸಲಾಯಿತು ಎಂದು ವಿವರಿಸಿದರು.

    ಕೊಡಗು ಮೈಸೂರು ಹಸಿ ಶುಂಠಿ ವರ್ತಕರ ಸಂಘದ ಅಧ್ಯಕ್ಷ ಎಚ್.ಎನ್.ರಾಜಶೇಖರ್, ರಾಜ್ಯ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ, ಮೊಹಮ್ಮದ್ ಅನೀಶ್, ತೌಫಿಕ್, ಖಜಾಂಚಿ ಮುನ್ನಾ, ದಿನೇಶ್.ಬಿ.ಎಲ್, ಯತೀಶ್, ಜನಾರ್ದನ್, ರೇವಣ್ಣ, ಹಿನಾಯತ್ ಹಾಗೂ ಕೊಡಗು ಮೈಸೂರು ಜಿಲ್ಲೆಗಳ ಸಂಘದ ಪದಾಧಿಕಾರಿಗಳಾದ ಮುರುಳೀಧರ್, ಉಪಾಧ್ಯಕ್ಷ ಕಬೀರ್ ಅಹಮದ್, ಮದನ್ ಶೆಟ್ಟಿ, ಖಜಾಂಚಿ ಖಾಲಿದ್ ಪಾಷಾ, ನಿರ್ದೇಶಕರಾದ ಕೆ.ಸಿ.ಸತ್ಯ, ಸಿ.ಎ.ರಾಜು, ಹಮೀದ್, ಇಬ್ರಾಹಿಂ, ಬಷೀರ್, ಮಣಜೂರು ಮಲ್ಲಿಕಾ ಮೊದಲಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts