More

    ಸಾಗುವಳಿದಾರರ ಹಿತ ಕಾಯಲು ಬದ್ಧ: ಮಧು ಬಂಗಾರಪ್ಪ

    ಸೊರಬ: ಬಗರ್‌ಹುಕುಂ ಸಾಗುವಳಿದಾರರ ಪರ ಹೋರಾಟ ಮಾಡುತ್ತ ಬಂದ ನನಗೆ ಸಾಗುವಳಿದಾರರ ಸಮಸ್ಯೆಗಳ ಅರಿವಿದ್ದು ಕಾಂಗ್ರೆಸ್ ಸರ್ಕಾರ ಕೂಡ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಪಟ್ಟಣ ವ್ಯಾಪ್ತಿಯ ಕೊಡಕಣಿ ಗ್ರಾಮದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆಯಿಂದ ಹಮ್ಮಿಕೊಂಡಿದ್ದ ಅಮೃತ್-2.0 ಯೋಜನೆ ಅಡಿಯಲ್ಲಿ 19.89 ಕೋಟಿ ರೂ. ಅನುದಾನದಲ್ಲಿ ಸೊರಬಕ್ಕೆ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
    ಈ ಹಿಂದೆ ಕಾಂಗ್ರೆಸ್ ಸರ್ಕಾರ ಕಾನು ಕೊಡಬಹುದು ಎಂಬ ಕಾನೂನು ಮಾಡಿದ್ದರಿಂದ ನಾನು ಹಕ್ಕುಪತ್ರ ನೀಡಿದ್ದೆ. ನಂತರ ಬಂದ ಬಿಜೆಪಿ ಸರ್ಕಾರ ಆ ಕಾನೂನು ಬದಲಿಸಿ ಸಾಗುವಳಿದಾರರಿಗೆ ನೀಡಿದ ಹಕ್ಕುಪತ್ರಗಳನ್ನು ವಜಾ ಮಾಡಲು ಮುಂದಾಗಿದ್ದರ ಪರಿಣಾಮ ನ್ಯಾಯಾಲಯದಿಂದ ನೋಟಿಸ್‌ಗಳು ಬರುತ್ತಿವೆ. ಇದರಿಂದ ಆ ಕಾನೂನನ್ನು ನಮ್ಮ ಸರ್ಕಾರ ಬದಲಿಸಿ ರೈತರ ಹಿತ ಕಾಯಲು ಸಿದ್ಧವಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು ರೈತರು ಎದೆಗುಂದುವ ಅಗತ್ಯವಿಲ್ಲ ಎಂದರು.
    ಶಿವಪ್ಪ ಕೊಡಕಣಿ ಗ್ರಾಮದ ಬಗರ್‌ಹುಕುಂ ಹಾಗೂ ಅರಣ್ಯ ಸಾಗುವಳಿದಾರರಿಗೆ ರಕ್ಷಣೆ ಕೊಡುವಂತೆ ಮನವಿ ಸಲ್ಲಿದರು. ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ.ರುದ್ರಗೌಡ, ತಹಸೀಲ್ದಾರ್ ಹುಸೇನ್ ಸರಕಾವಸ್, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಪ್ರಮುಖರಾದ ರಾಜು ಶಾಂತಗೇರಿ, ಬಸವರಾಜ್ ಹಿತ್ತಲಮನೆ, ಉಳವಿ ಬಂಗಾರಪ್ಪ, ಎಂ.ಡಿ.ಉಮೇಶ್, ನಾಗರಾಜ್ ಚಿಕ್ಕಸವಿ, ಈರಪ್ಪ ಹಿತ್ತಲಮನಿ, ಹೂವಪ್ಪ ನಾಯ್ಕ, ಸೋಮಪ್ಪ, ಸುರೇಶ್ ಬಿಳವಾಣಿ, ಜೆ.ಪ್ರಕಾಶ್ ಹಳೇಸೊರಬ, ಶಿವಪ್ಪ, ರಾಘು ಇತರರಿದ್ದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಗೂಳಿ ಹೂವಪ್ಪ ಪ್ರಾಸ್ತಾವಿಕ ಮಾತನಾಡಿದರು. ನೆಹರು ಸ್ವಾಗತಿಸಿದರು.

    ಕಾಂಗ್ರೆಸ್ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಿದ್ದು ಸದುಪಯೋಗ ಪಡಿಸಿಕೊಳ್ಳಬೇಕು. ತಾಲೂಕಿನ ಎಲ್ಲ ಗ್ರಾಮಗಳಿಗೂ ಅಭಿವೃದ್ಧಿ ಕೆಲಸಗಳನ್ನು ಕೊಡುತ್ತೇನೆ. ಗ್ರಾಮಗಳ ಉದ್ಧಾರ ನನ್ನ ಕನಸಾಗಿದೆ.
    ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts