More

    ಗ್ರಾಪಂ ಸದಸ್ಯರ ಹಿತ ಕಾಯಲು ಬದ್ಧ

    ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ಹಿತ ಕಾಪಾಡಲು ಸದಾ ಬದ್ಧನಿರುವುದಾಗಿ ವಿಪ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
    ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಆಶ್ರಯದಲ್ಲಿ 2023-24ನೇ ವರ್ಷದ ಮಹಾತ್ತ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊಸೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ಹೆಚ್ಚಳಕ್ಕೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದ ಪರಿಣಾಮ ಸರ್ಕಾರ ಸ್ಪಂದಿಸಿದೆ. ಈಗ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಹೊಸದಾಗಿ ತಲಾ 100 ಮನೆಗಳನ್ನು ಮಂಜೂರು ಮಾಡುವಂತೆ ಸದನದ ಒಳಗೆ ವಸತಿ ಸಚಿವರಿಗೆ ಮನವಿ ಮಾಡಿದ್ದು, ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ಮನೆಗಳು ಮಂಜೂರಾಗಲಿವೆ ಎಂದರು.

    ಗ್ರಾಪಂ ಸದಸ್ಯರಿಗೆ ಬಸ್‌ಪಾಸ್, ಟೋಲ್‌ಗಳಲ್ಲಿ ಶುಲ್ಕ ವಿನಾಯಿತಿ ಮತ್ತಿತರ ಸೌಲಭ್ಯಗಳಿಗಾಗಿ ಹೋರಾಡುತ್ತಿರುವುದಾಗಿ ತಿಳಿಸಿದರು.

    ಮುಖಂಡ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಬಸನಗೌಡ ಡಿ. ಪಾಟೀಲ, ಶ್ರೀನಿವಾಸ ನಿಡೋಣಿ, ಸಂಜೀವಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಅನೀಲ ಕನಮಡಿ, ಉಪಾಧ್ಯಕ್ಷೆ ಶಾರದಾ, ಸದಸ್ಯರಾದ ಭೀಮಶಿ ಮಾಸರೆಡ್ಡಿ, ಸುಶೀಲ ಯರಗಟ್ಟಿ, ಆಶಾ ಕಟ್ಟಿಮನಿ, ಮುಖಂಡರಾದ ಲಕ್ಷ್ಮಣ ಚಿಕ್ಕದಾನಿ, ರಮೇಶ ಯರಗಟ್ಟಿ, ಲಕ್ಷ್ಮಣ ಕಜ್ಜಿಡೋಣಿ, ಗೋವಿಂದ ರೆಡ್ಡಿ, ಸಿದ್ದು ಬಿರಾದಾರ, ಸಂಗಣ್ಣ ಶಿರಬೂರ, ಅಶೋಕ ಕರೇಣಿ, ಕೆ.ಪಿ. ಶಿರಬೂರ, ರಮೇಶ ಯರಗಟ್ಟಿ, ತಿರುಪತಿ ಬಿರಾದಾರ, ಪಿಡಿಒ ಮಹಾಂತಮ್ಮ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts